ಕೃಷಿಅರಣ್ಯ ರೈತರ ಮತ್ತು ತಂತ್ರಜ್ಞರ ಸಂಸ್ಥೆ
Menu
IAFT – INSTITUTION OF AGROFORESTRY FARMERS AND TECHNOLOGISTS
ಬೀಜಗಳ ಸಂಗ್ರಹ:
ಬಿದಿರಿನ ಬೀಜಗಳನ್ನು ಮಳೆಗಾಲ ಪ್ರಾರಂಭವಾಗುವುದಕ್ಕೆ ಮೊದಲೇ ಸಂಗ್ರಹಿಸಬೇಕು, ಕಾರಣ ಬೀಜಗಳು ಮಳೆಯ ನೀರಿಗೆ ನೆನೆದರೆ ಮೊಳಕೆಯ ಪ್ರಮಾಣ ತುಂಬಾ ಕಡಿಮೆಯಾಗುವುದು.
ಬೀಜಗಳ ಪರಿಷ್ಕರಣೆ ಮತ್ತು ಬೀಜೋಪಚಾರ:
ಬೀಜಗಳ ಮೊಳಕೆಯ ಪ್ರಮಾಣವು ಒಂದು ತಿಂಗಳಿನಿAದ ಎಂಟು ತಿಂಗಳವರೆಗೆ ಅವುಗಳ ಜಾತಿಯ ಮೇಲೆ ಅವಲಂಭಿತವಾಗಿದೆ. ಬೀಜಗಳಲ್ಲಿಯ ತೇವಾಂಶ ಮತ್ತು ಉಷ್ಣತೆಯನ್ನು ನಿಯಂತ್ರಿಸುವುದರಿAದ 4 ರಿಂದ 5 ವರ್ಷಗಳವರೆಗೆ ಶೇಖರಿಸಿಡುವುದರಿಂದ ಮೊಳಕೆಯ ಪ್ರಮಾಣವನ್ನು ಮುಂದುವರಿಸಬಹುದು. ಇವುಗಳಿಗೆ ಬೀಜೋಪಚಾರದ ಅವಶ್ಯಕತೆಯಿಲ್ಲ.
ಸಸ್ಯಕ್ಷೇತ್ರ:
ಕಲ್ಮ್ಸ್ (ಹುಲ್ಲು ಅಥವಾ ಏಕದಳದ ಟೊಳ್ಳಾದ ಕಾಂಡ) ಗಳ ಕತ್ತರಿಸಿ ಅಥವಾ ಅದರ ಗೆಡ್ಡೆಯನ್ನು ಕತ್ತರಿಸಿ ಸಸಿಗಳನ್ನು ತಯಾರಿಸಬಹುದು. ಬಿದಿರನ್ನು ಬೀಜಗಳಿಂದಲೂ ಸಹ ಬೆಳೆಸಬಹುದು. ಆದರೆ ಬಿದಿರಿನ ಬೀಜಗಳು ದೊರೆಯುವುದು ಬಹಳ ಅಪರೂಪ. ಬಿದಿರಿನ ಬೀಜಗಳನ್ನು ಮಡಿಗಳಲ್ಲಿ ಹಾಕಿ ಮೊಳಕೆಯೊಡೆದು ಬೆಳೆಯಲು ಪ್ರಾರಂಭಿಸಿದಾಗ ಪಾಲಿಬ್ಯಾಗ್ಗಳಲ್ಲಿ ಒಂದು ವರ್ಷಗಳವರೆಗೆ ಬೆಳೆಸಲಾಗುವುದು. ನಂತರ ಈ ಸಸಿಗಳನ್ನು ಬೇರೆಡೆ ನೆಡುತೋಪುಗಳಲ್ಲಿ ಜಮೀನುಗಳ ನಾಟಿ ಮಾಡಿ ಬೆಳೆಸಲಾಗುವುದು.
ಗೆಡ್ಡೆಯಿಂದ (ರೈಜೋಮ್) ಬೆಳೆಸುವುದಾದಲ್ಲಿ ಒಂದು ವರ್ಷದ ಕಲ್ಮ್ಸ್ ಗಳನ್ನು ಬೇರಿನ ಸಹಿತ ತೆಗೆದು ಒಂದು ಮೀಟರ್ ಎತ್ತರದಲ್ಲಿ ಕತ್ತರಿಸಬೇಕಿದೆ. ಈ ಕಲ್ಮ್ಸ್ ಗಳನ್ನು ಮಳೆಗಾಲದಲ್ಲಿ ನಾಟಿ ಮಾಡಬೇಕು. ಈ ಮಾದರಿಯಲ್ಲಿ ಬೆಳೆಸಲು ತುಂಬಾ ಎಚ್ಚರಿಕೆಯನ್ನು ವಹಿಸಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಈ ಮಾದರಿಯನ್ನೇ ಬಳಸಲಾಗುವುದು.
ನೆಡುತೋಪುಗಳ ನಿರ್ವಹಣೆ:
ಭೂಮಿಯನ್ನು ಆಳಕ್ಕೆ ಉಳುಮೆ ಮಾಡಬೇಕು. ಇದನ್ನು ನಾಟಿ ಮಾಡುವ ಮೂರು ವಾರಗಳ ಮುಂಚಿತವಾಗಿಯೇ ಉಳುಮೆ ಮಾಡಬೇಕು. ನಂತರ ಸಾವಯವ ಗೊಬ್ಬರ, ಹಸಿರೆಲೆ ಗೊಬ್ಬರ ಮತ್ತು ಸಾ ಡಸ್ಟ್ / ತೆಂಗಿನ ನಾರಿನ ಪುಡಿ ಬಳಸುವುದರಿಂದ ತೇವಾಂಶವನ್ನು ಹಿಡಿದಿಡಲು ಮತ್ತು ಸಸಿಗಳಿಗೆ ಪೋಷಕಾಂಶಗಳನ್ನು ಒದಗಿಸಲು ಸಹಾಯಕವಾಗುವುದು. ನೆಡುತೋಪುಗಳಲ್ಲಿ ಸರಿಯಾಗಿ ನೀರು ಬಸಿಯುವಂತೆ ನೋಡಿಕೊಳ್ಳಬೇಕು. ಬಿದಿರಿಗೆ ಹೆಚ್ಚಿನ ನೀರು ಬೇಕಿದ್ದರೂ, ನೀರು ನಿಲ್ಲಬಾರದು.
ಗುಂಡಿಗಳನ್ನು ತೆಗೆಯುವ ಮುಂಚಿತವಾಗಿ ಗುಂಡಿಗಳ ಅಳತೆಗೆ ತಕ್ಕಂತೆ ಗುರುತು ಮಾಡುವುದರಿಂದ ಸರಿಯಾದ ಅಂತರವನ್ನು ಕಾಯ್ದುಕೊಳ್ಳಬಹುದು. ಗುಂಡಿಗಳನನು 3’X 3’X 3’ ಅಡಿ ಆಳಕ್ಕೆ ಮಳೆಗಾಲಕ್ಕೆ ಮುಂಚಿತವಾಗಿಯೇ ತೆಗೆಯಬೇಕು. ಇದರಿಂದ ಗುಂಡಿ ತೆಗೆದ ಮಣ್ಣು ಸರಿಯಾಗಿ ಮಾರ್ಪಾಡಾಗುವುದು. ನಾಟಿ ಮಾಡುವ ಕೆಲವು ದಿನಗಳ ಮುಂಚೆಯೇ ಗುಂಡಿಗಳಲ್ಲಿ ಮಣ್ಣನ್ನು ಕಲಸಬೇಕು.
ತೆಗೆದಿರುವ ಗುಂಡಿಗಳಲ್ಲಿಯ ಮಣ್ಣಿಗೆ 10 ಕೆ.ಜಿ. ಕೊಟ್ಟಿಗೆ ಗೊಬ್ಬರ ಅಥವಾ ಎರೆಹುಳು ಗೊಬ್ಬರ, 200 ಗ್ರಾಂ ಬೇವಿನ ಹಿಂಡಿ, 50 ಗ್ರಾಂ. ಯೂರಿಯಾ, 50 ಗ್ರಾಂ. ಸೂಪರ್ ಫಾಸ್ಟೇಟ್ ಮತ್ತು 50 ಗ್ರಾಂ ಮ್ಯೂರಿಯೇಟ್ ಆಫ್ ಪೊಟ್ಯಾಶ್ ಸೇರಿಸಬೇಕು. ನಾಟಿ ಮಾಡುವಾಗ ಸಸಿಗಳನ್ನು ಬೆಳೆದಿರುವ ಪಾಲೀಬ್ಯಾಗ್ಗಳನ್ನು ಎಚ್ಚರಿಕೆಯಿಂದ ಕತ್ತರಿಸಿ ಅದರಲ್ಲಿಯ ಮಣ್ಣು ಸಸಿಗಳ ಬೇರಿನೊಂದಿಗೆ ಗಟ್ಟಿಯಾಗಿರಬೇಕು. ಸಸಗಳು ಆಕಾಶಕ್ಕೆ ಎದುರಾಗಿ ಬೇರುಗಳು ಡೊಂಕಾಗದAತೆ ನೋಡಿಕೊಳ್ಳಬೇಕು. ನಂತರ ಗುಂಡಿಯಲ್ಲಿಯ ಮಿಶ್ರಿತ ಮಣ್ಣನ್ನು ಸಮತಟ್ಟಾಗಿ ಹರಡಬೇಕು ಹಾಗೂ ಮಣ್ಣನ್ನು ಸ್ವಲ್ಪ ಗಿಡದ ಸುತ್ತಲೂ ಗಟ್ಟಿಯಾಗುವಂತೆ ನೋಡಿಕೊಳ್ಳಬೇಕು. ಗುಂಡಿಯಲ್ಲಿ ಎಲೆ ಅಥವಾ ಇನ್ನಿತರೆ ವಸ್ತುಗಳಿಂದ ಕಳೆ ಬೆಳೆಯದಂತೆ ಮುಚ್ಚಬೇಕು.
ಹನಿ ನೀರಾವರಿಯಿಂದ ಹೆಚ್ಚಿನ ಬಿದಿರನ್ನು ಉತ್ಪಾದಿಸಬಹುದು. ನಾಟಿ ಮಾಡಿದ ನಂತರ 12 ರಿಂದ 20 ಲೀಟರ್ ನೀರನ್ನು ಅವಶ್ಯಕತೆಗೆ ತಕ್ಕಂತೆ ಹಾಕಬೇಕು. ನಂತರದ ದಿನದಲ್ಲಿ ಪುನಃ ನೀರುಣಿಸಬೇಕು. ಇದನ್ನು ಮುಂದಿನ 10 ವಾರಗಳವರೆಗೆ ದಿನ ಬಿಟ್ಟು ದಿನ ನಂತರದಲ್ಲಿ ಮೂರು ದಿನಗಳಿಗೊಮ್ಮೆ ನೀರು ಕೊಡಬೇಕು.
ಬಿದಿರಿನ ಸಸಿಗಳು ರಸಾಯನಿಕ ಗೊಬ್ಬರಕ್ಕೆ ಉತ್ತಮವಾಗಿ ಸ್ಪಂದಿಸಬಲ್ಲವು ಹಾಗೂ ಬಹಳ ವೇಗವಾಗಿ ಬೆಳೆಯುತ್ತವೆ. ಇಲ್ಲವಾದಲ್ಲಿ ಬೆಳವಣಿಗೆ ಕುಂಠಿತವಾಗುವುದು. ರಸಾಯನಿಕ ಗೊಬ್ಬರಗಳು ಹೆಚ್ಚಿನ ಉತ್ಪಾದನೆಗೆ ಮತ್ತು ನೆಡುತೋಪಿನ ಆರ್ಥಿಕ ಲಾಭಕ್ಕೆ ಸಹಾಯಕವಾಗುವುದು. ಬಿದಿರಿಗೆ ಎಲ್ಲಾ ರೀತಿಯ ಪೋಷಕಾಂಶಗಳ ಅವಶ್ಯಕತೆಯಿದೆ, ಸಸಾರಜನಕ, ರಂಜಕ್ ಮತ್ತು ಪೊಟ್ಯಾಸಿಯಂ ಸೇರಿದಂತೆ ಆಗಿಂದಾಗ್ಯೆ ಹೆಚ್ಚಿನ ಸಸಾರಜನಕ (ನೈಟ್ರೋಜನ್)ದ ಅವಶ್ಯಕತೆಯಿದೆ. ಆದುದರಿಂದ ಮಣ್ಣಿನ ಪರೀಕ್ಷೆಯೊಂದಿಗೆ ನೀಡಬಹುದಾದ ಗೊಬ್ಬರದ ಪ್ರಮಾಣವನ್ನು ನಿರ್ಧರಿಸಬೇಕು. ಸಾಮಾನ್ಯವಾಗಿ ಗೊಬ್ಬರದ ಬಳಕೆಯ ಪ್ರಮಾಣವು 15.5 ಕೆ.ಜಿ. ಯೂರಿಯಾ, 5.5 ಕೆ.ಜಿ. ಸೂಪರ್ ಸಲ್ಪೇಟ್ ಮತ್ತು 13.5 ಕೆ.ಜಿ. ಮ್ಯೂರಿಯೇಟ್ ಆಫ್ ಪೊಟ್ಯಾಶ್ ಪ್ರತಿ ಗಿಡಕ್ಕೆ ನೀಡಬೇಕಿದೆ. ಮೊದಲನೇ ವರ್ಷ ಶಿಫಾರಸ್ಸು ಮಾಡಿರುವ ಪ್ರಮಾಣದ ಶೇ.50 ರಷ್ಟು, ಎರಡನೇ ವರ್ಷ ಶೇ.75 ರಷ್ಟು ಮತ್ತು ಮೂರನೇ ವರ್ಷದಲ್ಲಿ ಶಿಫಾರಸ್ಸಿನ ಪೂರ್ಣ ಪ್ರಮಾಣವನ್ನು ಹತ್ತು ಬಾರಿ ಸಮ ಪ್ರಮಾಣದಲ್ಲಿ ನೀಡಬೇಕು. ಗೊಬ್ಬರವನ್ನು ಮೊದಲು ನಾಟಿ ಮಾಡುವಾಗ ಗುಂಡಿಯಲ್ಲಿ ಮಿಶ್ರ ಮಾಡಬೇಕು. ನಂತರ ಪ್ರತಿ ತಿಂಗಳು ನೀಡಬೇಕು. ರಸಾಯನಿಕ ಗೊಬ್ಬರವನ್ನು ನೇರವಾಗಿ ಹಾಕಬಾರದು.
ಗುಂಪುಗಳ ನಿರ್ವಹಣೆ (Clump management)
ಮಣ್ಣು ಸಡಿಲಿಸುವುದು:
ಮಣ್ಣನ್ನು 10 ರಿಂದ 15 ಸೆಂ.ಮೀ. ಆಳಕ್ಕೆ ಸಡಿಲಿಸಬೇಕು ಹಾಗೂ ಬಿದಿರಿನ ಗುಂಪುಗಳ ಸುತ್ತಲೂ 30-45 ಸೆಂ.ಮೀ. ಅಂತರದಲ್ಲಿ ವರ್ಷದಲ್ಲಿ ಎರಡು ಬಾರಿ ನಿರ್ವಹಿಸುವುದರಿಂದ ಬೇರಿನ ಮತ್ತು ಕಾಂಡದ ಬೆಳವಣಿಗೆಯು ಹೆಚ್ಚುವುದು.
ಕಳೆ ತೆಗೆಯುವುದು:
ಎಳೆಯ ಬಿದಿರಿನ ಗಿಡಗಳಿದ್ದಾಗ ಕೆಳೆಯನ್ನು ತೆಗೆಯುವುದರಿಂದ ಸುಸ್ಥಿರ ಬೆಳವಣಿಗೆಗೆ ಅನುಕೂಲವಾಗುವುದು. ಕಳೆಯನ್ನು ಕಡ್ಡಾಯವಾಗಿ ಮೊದಲ ಎರಡು ವರ್ಷಗಳಲ್ಲಿ ಮಳೆ ನಿಂತ ತಕ್ಷಣವೇ ಮತ್ತು ತೇವಾಂಶ ಕಡಿಮೆಯಾಗುವಾಗ ನಿರ್ವಹಿಸಬೇಕು. ಒಂದು ಬಾರಿ ಬಿದಿರಿನ ಗುಂಪುಗಳು ಸ್ಥಿರವಾಗಿ ಬೆಳೆಯಲು ಪ್ರಾರಂಭಿಸಿದಲ್ಲಿ ಸಾಕಷ್ಟು ಎಲೆಗಳು ಭೂಮಿಯ ಮೇಲೆ ಬೀಳುವುದರಿಂದ ಕಳೆ ಬೆಳೆಯುವುದು ಕಡಿಮೆಯಾಗುತ್ತದೆ.
ಮಲ್ಚಿಂಗ್:
ಮಣ್ಣಿನ ಮೇಲ್ಭಾಗ ಮುಚ್ಚುವುದರಿಂದ ತೇವಾಂಶವನ್ನು ಸಂರಕ್ಷಿಸಲು ಮತ್ತು ಕಳೆ ಬೆಳೆಯುವುದನ್ನು ನಿಯಂತ್ರಿಸಬಹುದು. ಬೆಳವಣಿಗೆಯಾದ ಬಿದಿರಿನ ನೆಡುತೋಪುಗಳಲ್ಲಿ ಬೀಳುವ ಎಲೆಗಳೇ ಸುತ್ತಲಿನ ಮಣ್ಣನ್ನು ಮುಚ್ಚಿಕೊಳ್ಳುವುದರಿಂದ ಉತ್ತಮವಾದ ಮಲ್ಚಿಂಗ್ ಆಗುವುದು. ಬಿದಿರಿನ ಬೆಳವಣಿಗೆಗೆ ಮರಳಿನ (ಸಿಲಿಕಾ) ಅವಶ್ಯಕತೆ ಇರುವುದರಿಂದ, ಇದನ್ನು ಬಿದಿರಿನನ ಎಲೆಗಳೇ ಒದಗಿಸಲಿವೆ.
ಮಣ್ಣನ್ನು ಗುಂಪುಗಳ ಸುತ್ತಾ ಏರಿಸುವುದು:
ಬಿದಿರಿನ ಗೆಡ್ಡೆಗಳು ಮಣ್ಣಿನಡಿ ಅಡ್ಡಲಾಗಿ ಬೆಳೆಯುವುದರಿಂದ, ಹೊಸ ಬಿದಿರಿನ ಗಿಡಗಳು ಚಿಗುರೊಡೆಯುವುದರಿಂದ ಅವುಗಳು ಮೇಲ್ಭಾಗಕ್ಕೆ ಮತ್ತು ಓರೆಯಾಗಿ ಬೆಳೆಯುವುದು. ಈ ಬೆಳವಣಿಗೆಯ ಅವಧಿಯಲ್ಲಿ ಸೂರ್ಯನ ಬೆಳಕಿಗೆ ಗೆಡ್ಡೆಗಳು ತೆರೆದಿದ್ದಲ್ಲಿ ಗೆಡ್ಡೆಗಳ ಬೆಳವಣಿಗೆಯು ನಿಲ್ಲಲಿದೆ. ಆದುದರಿಂದ ಗುಂಪಿನ ಸುತ್ತಲೂ ಉಡಿಯಾದ ಮಣ್ಣನ್ನು ಏರಿಸುವುದನ್ನು ಶಿಫಾರಸ್ಸು ಮಾಡಲಾಗಿದೆ.
ಸಮರುವಿಕೆ (ಪ್ರೂನಿಂಗ್):
ಕೆಲವು ಬಿದಿರಿನ ಜಾತಿಗಳಲ್ಲಿ ಕೆಳಗಿನ ಗೆಣ್ಣುಗಳಿಂದಲೇ ತುಂಬಾ ಕೊಂಬೆಗಳಾಗುತ್ತವೆ. ಉದಾಹರಣೆಗೆ – ಡೆಂಟ್ರೋಕೆಲಾಮಸ್ ಹ್ಯಾಮಿಲ್ಟೋನಿ ಮತ್ತು ಬಾಂಬೂಸ ಬಾಲ್ಕೋವ. ರೆಂಬೆಗಳನ್ನು ಸವರುವುದರಿಂದ ಉತ್ತಮವಾದ ಗಾಳೆ ಬೆಳಕು ದೊರೆಯುವುದರಿಂದ ಆರೋಗ್ಯಕರ ಬೆಳವಣಿಗೆಗೆ ಅನುಕೂಲಕರವಾಗಲಿದೆ. ಕಡಿಮೆ ಪ್ರಮಾಣದಲ್ಲಿ ಸವರುವಿಕೆಯನ್ನು ಎರಡು ಮತ್ತು ಮೂರನೇ ವರ್ಷದಲ್ಲಿ ನಿರ್ವಹಿಸಬೇಕು ಹಾಗೂ ನಾಲ್ಕನೆ ವರ್ಷಗಳ ನಂತರ ಕೆಳಗಿನ ರೆಂಬೆಗಳನ್ನು ನಿರ್ದಾಕ್ಷಿಣ್ಯವಾಗಿ ಸವರಬೇಕು. ಇದನ್ನು ಅವುಗಳು ಬೆಳವಣಿಗೆಯನ್ನು ನಿಲ್ಲಿಸುವ ಮೊದಲೇ ಅಂದರೆ ಹೊಸದಾಗಿ ಬೆಳೆಯುವ ಕಾಂಡಗಳು (ಗಳುಗಳು) ಕಾಣಿಸಿಕೊಳ್ಳುವ ಮುಂಚಿತವಾಗಿ ನಿರ್ವಹಿಸಬೇಕು. ಸವರುವಿಕೆಯನ್ನು ಪ್ರತಿ ವರ್ಷ ಡಿಸೆಂಬರ್ ಮತ್ತು ಜನವರಿಯಲ್ಲಿ ನಿರ್ವಹಿಸಬೇಕು.
ವಿರಳಗೊಳಿಸುವುದು (Thinning):
ಮೂರನೇ ವರ್ಷಗಳ ನಂತರ ಗುಂಪುಗಳಲ್ಲಿಯ ಬಿದಿರುಗಳು ಆರೋಗ್ಯಕರವಾಗಿ ಬೆಳೆಯಲು ಮತ್ತು ಸುಲಭವಾಗಿ ಕಟಾವು ಮಾಡಲು ಅನುವಾಗುವಂತೆ ಸವರಬೇಕಿದೆ. ವಕ್ರವಾದ ಮತ್ತು ಬೆಳವಣಿಗೆಯಲ್ಲಿ ಕುಂಠಿತವಾದ ಬಿದಿರುಗಳನ್ನು ಗುಂಪಿನಿAದ ಕಟಾವು ಮಾಡಿ ತೆಗೆಯಬೇಕು. ಗುಂಪಿನ ರಚನೆಯನ್ನು ಸರಿಯಾಗಿ ಸವರುವಿಕೆಯಿಂದ ಮತ್ತು ಸರಿಯಾದ ಕ್ರಮದಲ್ಲಿ ಬಿದಿರಿನ ಗಳಗಳನ್ನು ಉಳಿಸಿಕೊಳ್ಳುವುದರಿಂದ ಗುಂಪಿನ ರಚನೆಯ್ನು ಸರಿಪಡಿಸಿಕೊಳ್ಳಬಹುದು. ಬಿದಿರನ್ನು ಸಾಮಾನ್ಯವಾಗಿ ಮಳೆಗಾಲದಲ್ಲಿ ನಾಟಿ ಮಾಡಲಾಗುವುದು. ಸಸ್ಯಕ್ಷೇತ್ರದಲ್ಲಿ ಬೆಳೆಸಿರುವ ಸಸಿಗಳನ್ನು 60 X 60 ಸೆಂ.ಮೀ. ಅಳತೆಯಲ್ಲಿ ತೆಗೆದಿರುವ ಗುಂಡಿಗಳಲ್ಲಿ ನಾಟಿ ಮಾಡಬೇಕು.
ಮಾದರಿ ಮತ್ತು ಅಂತರ:
ಮಾದರಿ ಅಂತರವೆAದರೆ 5 X 4 ಮೀ ಹಾಗೂ 200 ಸಸಿಗಳನ್ನು ಪ್ರತಿ ಎಕರೆಗೆ ನಾಟಿ ಮಾಡಬಹುದು.
ಕೀಟಗಳು ಮತ್ತು ರೋಗಗಳ ನಿರ್ವಹಣೆ:
ಎಲೆಗಳನ್ನು ತಿನ್ನುವ ಮತ್ತು ರಸ ಹೀರುವ ಕೀಟಗಳು ಸಾಮಾನ್ಯವಾಗಿ ಎಳೆ ವಯಸ್ಸಿನ ಬಿದಿರುಗಳಲ್ಲಿ ಕಂಡು ಬರುತ್ತದೆ. ಈ ಕೀಟಗಳ ನಿಯಂತ್ರಣಕ್ಕೆ ಸರಿಯಾದ ಕೀಟನಾಶಕ ಸಿಂಪರಣೆ ಮಾಡಬೇಕು. ರೋಗಗಳಲ್ಲಿ ಮುಖ್ಯವಾದದ್ದೆಂದರೆ ಒಣಗಿರುವ ರೋಗ (Fusarium) ಮತ್ತು ಕಾಂಡಗಳಿಗೆ ಬರುವ ಚುಕ್ಕೆ ರೋಗ. ಈ ರೋಗವು ಕೇರಳ ರಾಜ್ಯ 24 ಜಾತಿಯ ಬಿದಿರಿನಲ್ಲಿ ಕಂಡುಬರುತ್ತದೆ. ಸೂಕ್ತವಾದ ನಿಯಂತ್ರಣ ಕ್ರಮ ತೆಗೆದುಕೊಳ್ಳಬೇಕಿದೆ.
ಕಟಾವು (Plant rotation):
10-25 ವರ್ಷಗಳು
ಇಳುವರಿ:
ಮುಖ್ಯವಾಗಿ ಬಿದಿರನ್ನು ಕಟ್ಟಡ ನಿರ್ಮಾಣದಲ್ಲಿ ಅಂದರೆ ನೆಲಹಾಸು, ಮೇಲಿನ ಛಾವಣಿ ನಿರ್ಮಾಣದಲ್ಲಿ ಮತ್ತು ಸಾರುವೆ (ಹಂದರ) ನಿರ್ಮಾಣದಲ್ಲಿ, ಪೀಠೋಪಕರಣಗಳ ತಯಾರಿಕೆಯಲ್ಲಿ, ಆಹಾರವಾಗಿ, ಜೈವಿಕ ಇಂಧನವಾಗಿ, ಬಟ್ಟೆ ತಯಾರಿಕೆಯಲ್ಲಿ, ಕಾಗದ, ಪಲ್ಪ್, ಇದಿಲಾಗಿ ಬಳಸಲಾಗುವುದು. ಅಲ್ಲದೆ ಹವಾಮಾನಕ್ಕೆ ಪೂರಕವಾಗಿ ಇಂಗಾಲದ ಹೀರುವಿಕೆ ಮತ್ತು ಬೇರೆ ಮರಗಳಿಗಿಂತ ಶೇ.40 ರಷ್ಟು ಹೆಚ್ಚಾಗಿ ಆಕ್ಸಿಜನ್ ಉತ್ಪಾದನೆ ಮತ್ತು ಮಣ್ಣಿನ ರಚನೆಯನ್ನು ಹೆಚ್ಚು ಮಾಡಲಿದೆ.
ವ್ಯಾಪರಸ್ಥರು/ಕೈಗಾರಿಕೆಗಳು:
ಕಾಗದ ತಯಾರಿಕಾ ಕೈಗಾರಿಕೆಗಳು, ಅಗರಬತ್ತಿ (ಊದುಬತ್ತಿ) ತಯಾರಿಕೆ ಮತ್ತು ಸ್ಥಳೀಯವಾಗಿ ಬೇರೆ ಬೇರೆ ರೀತಿಯಲ್ಲಿ ಬಳಸಲಾಗುವುದು.
ಬಿದಿರಿನ ಕೊಯ್ಲು:
ಪ್ರತಿ ವರ್ಷ ಬಿದಿರನ್ನು (ಗಳುಗಳನ್ನು) ಕಟಾವು ಮಾಡಿ ತೆಗೆಯುವುದರಿಂದ ಹೊಸ ಕಳಲೆಗಳು (ಗಳುಗಳು) ಬರುತ್ತವೆ ಮತ್ತು ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಿದೆ. ಆರ್ಥಿಕವಾಗಿ ಬಿದಿರನ್ನು ನಾಟಿ ಮಾಡಿದ ಮೂರು ವರ್ಷಗಳ ನಂತರದಲ್ಲಿ ವಾಣಿಜ್ಯ ಬಳಕೆಗೆ ಕಟಾವು ಮಾಡಬಹುದು. ಆದರೆ ನಾಟಿ ಮಾಡಿದ 4 ವರ್ಷಗಳ ನಂತರದಲ್ಲಿ ಗುಂಪುಗಳು ಚೆನ್ನಾಗಿ ಬೆಳೆಯುತ್ತವೆ.
ಗಳುಗಳ ವಯಸ್ಸು ಬಹಳ ಮುಖ್ಯವಾದ ಅಂಶವಾಗಿದ್ದು, ಅವುಗಳ ಬಳಕೆಯ ಮೇಲೆ ಅವಲಂಭಿತವಾಗುತದೆ. ಕಟ್ಟಡ ನಿರ್ಮಾಣಕ್ಕಲ್ಲದೆ, ಬೇರೆ ಬೇರೆ ಬಳಕೆಗೆ ಅಂದರೆ ಹೆಚ್ಚಿನ ಶಕ್ತಿಯುತವಾಗಿಲ್ಲದ ಬಳಕೆಗೆ 2 ರಿಂದ 3 ವರ್ಷಗಳಾದ ಗಳುಗಳನ್ನು ಗುಂಪಿನಿAದ ಕಟಾವು ಮಾಡಿ ತೆಗೆಯಬಹುದು.
ಹೆಚ್ಚಿನ ರೀತಿಯ ಬಳಕೆಗೆ ಗಳುಗಳನ್ನು ನಾಲ್ಕು ವರ್ಷಗಳು ಹಳೆಯದಾದವುಗಳನ್ನು ಕಟಾವು ಮಾಡಿ ತೆಗೆದು ಬಳಸಲಾಗುವುದು.
ಐದು ವರ್ಷಗಳಿಂದ ಹೆಚ್ಚಿನ ಗಳುಗಳು ಒಂದೇ ರೀತಿಯಲ್ಲಿ ಒರಟಾಗುತ್ತವೆ ಮತ್ತು ತಕ್ಷಣವೇ ಒಡೆಯುತ್ತವೆ ಹಾಗೂ ಕ್ಷೀಣಿತವಾಗಿ ಸಾಯುತ್ತವೆ. ಯಾವುದೇ ಬಿದಿರಿನ ವಾಣಿಜ್ಯ ನೆಡುತೋಪುಗಳಲ್ಲಿ 5 ವರ್ಷಗಳಿಗಿಂತ ಹೆಚ್ಚಿನ ಗಳುಗಳನ್ನು ಗುಂಪುಗಳಲ್ಲಿ ಉಳಿಸಿಕೊಳ್ಳಬಾರದು.
ಬಿದಿರಿನ ಕಟಾವಿಗೆ ಒಳ್ಳೆಯ ಸಮಯವೆಂದರೆ ಮಳೆಗಾಲದ ನಂತರ ಹಾಗೂ ಚಳಿಗಾಲ ಮುಗಿಯುವವರೆಗೆ. ಈ ಸಮಯದಲ್ಲಿ ಕಳಲೆಗಳು ಬೆಳೆಯಲಾರವು ಮತ್ತು ಅವುಗಳಲ್ಲಿ ಕಡಿಮೆ ಸ್ಟಾರ್ಚ್ ಇರುತ್ತದೆ.
ಆದುದರಿಂದ ಅವುಗಳ ಕೊರೆಯುವ ಕೀಟಗಳ ಹಾವಳಿಗೆ ಒಳಗಾಗುವುದಿಲ್ಲ ಹಾಗೂ ಗೆದ್ದಲು ಹುಳುಗಳ ಮತ್ತು ಇತರೆ ಬಾದೆಗಳಿಗೆ ಒಳಗಾಗುವುದಿಲ್ಲ. ಗಳುಗಳನ್ನು ಯಾವುದೇ ಕಾರಣಕ್ಕೆ ಬೆಳವಣಿಗೆಯ ಹಂತದಲ್ಲಿ ಕಟಾವು ಮಾಡಬಾರದು. ಇದು ಸಾಮಾನ್ಯವಾಗಿ ಮಳೆಗಾಲದ ಸಮಯವಾಗಿರುತ್ತದೆ. ಈ ಸಮಯದಲ್ಲಿ ಕೊಯ್ಲು ಮಾಡುವುದರಿಂದ ಎಳೆಯ ಮತ್ತು ಹೊಸದಾಗಿ ಹೊರಡುವ ಕಳಲೆಗಳಿಗೆ ಹಾನಿ ಮಾಡಿದಂತಾಗುವುದು ಹಾಗೂ ಮುಂದಿನ ಗುಂಪಿನ ಬೆಳವಣಿಗೆ ಕುಂಠಿತವಾಗುವುದು.
ಆರ್ಥಿಕ ಲಾಭ:
ಪ್ರತಿ ವರ್ಷ ರೂ.30,720/-, ಐದು ವರ್ಷಗಳ ನಂತರದಲ್ಲಿ ಹಾಗೂ 6ನೇ ವರ್ಷದ ನಂತರ ರೂ.63,000/- ನಿವ್ವಳ ಲಾಭವನ್ನು ಪ್ರತಿ ಎಕರೆಯಿಂದ ಪಡೆಯಬಹುದು.
ಪ್ರಸ್ತುತ ಮಾರುಕಟ್ಟೆ ದರ:
ರೂ.100/- ಪ್ರತಿ ಗಳಕ್ಕೆ.