IAFT – INSTITUTION OF AGROFORESTRY FARMERS AND TECHNOLOGISTS

ವೈಜ್ಞಾನಿಕ ಹೆಸರು: ಪೊಂಗಾಮಿಯಾ ಪಿನ್ನೇಟಂ

ಆಂಗ್ಲ ಭಾಷೆಯಲ್ಲಿ: ಇಂಡಿಯನ್ ಬಿಹಾ ಟ್ರೀ, ಕರಂಜ

ಕನ್ನಡದಲ್ಲಿ: ಹೊಂಗೆ

ಸಸ್ಯ ವರ್ಗ: ಫ್ಯಾಬೇಸಿ

 

ಬೀಜಗಳ ಸಂಗ್ರಹ: ಸಿಪ್ಪೆಯೊಂದಿಗಿರುವ ಬೀಜಗಳನ್ನು ರೆಂಬೆಗಳನ್ನು ಬಡಿಯುವುದರಿಂದ ಸಂಗ್ರಹಿಸಲಾಗುವುದು, ನಂತರ ಸಿಪ್ಪೆಯನ್ನು ಸುಲಿದು ಬೀಜಗಳನ್ನು ಬೇರ್ಪಡಿಸಬೇಕು. ಸಿಪ್ಪೆಯೊಂದಿಗಿರುವ ಬೀಜಗಳನ್ನು ಬಿಸಿಲಿನಲ್ಲಿ 2 ರಿಂದ 3 ದಿವಸ ಒಣಗಿಸುವುದರಿಂದ ಬೀಜಗಳನ್ನು ಸುಲಭವಾಗಿ ಬೇರ್ಪಡಿಸಬಹುದು.

 

ಬೀಜಗಳ ಪರಿಷ್ಕರಣೆ ಮತ್ತು ಉಪಚಾರ: 600 ಸೆಂಟಿಗ್ರೇಡ್, ಉಷ್ಣಾಂಶವಿರುವ ಬಿಸಿನೀರಿನಲ್ಲಿ 30 ನಿಮಿಷಗಳ ಕಾಲ ಉಪಚರಿಸುವುದರಿಂದ ಮೊಳಕೆಯ ಪ್ರಮಾಣವು ಗಣನೀಯವಾಗಿ ಹೆಚ್ಚಾಗುವುದು. ಬಿಸಿನೀರಿನಲ್ಲಿ ರಾತ್ರಿಯಿಡೀ ನೆನೆಸುವುದರಿಂದ ಸಹ ಮೊಳಕೆಯ ಪ್ರಮಾಣವು ಹೆಚ್ಚಾಗುವುದು.

 

ಸಸ್ಯಪಾಲನೆ (ನರ್ಸರಿ): ಈ ಮರವನ್ನು ಸೆಮಿ ಹಾರ್ಡ್ವುಡ್ ಮತ್ತು ಹಾರ್ಡ್ವುಡ್ ಗ್ರಾಪ್ಟಿಂಗ್ ಮತ್ತು ಗಟ್ಟಿಯಾದ ಕೊನೆಗಳ (ಉದ್ದ 15-25 ಸೆಂ.ಮೀ. ಮತ್ತು 0.5-1.0 ಸೆಂ.ಮೀ. ಸುತ್ತಳತೆ) 3-4 ಗೆಣ್ಣುಗಳಿರುವಂತಹ ಕಟಿಂಗ್ ಗಳನ್ನು ಬಳಸಿ ಸಸ್ಯಾಭಿವೃದ್ಧಿ ಮಾಡಬಹುದು. ಕೊಂಬೆಗಳ ಕಟಿಂಗ್ ಗಳನ್ನು ಮಾಡಲು ಯಾವುದಾದರೂ ಫಂಗಿಸೈಡಲ್ಲಿ ಉಪಚರಿಸಿ, ನಂತರ ಆಕ್ಸಿನ್ (ಐಬಿಎ, ಐಎಎ ಮತ್ತು ಎನ್‌ಎಎ) ದ್ರಾವಣದಲ್ಲಿ ಒಂದು ಗಂಟೆ ಉಪಚರಿಸಬೇಕಿದೆ.

              ಗ್ರಾಪ್ಟಿಂಗ್ ವಿಧಾನದಲ್ಲಿ ಒಂದು ವರ್ಷ ಹಳೆಯದಾದ ಸಸಿಗಳನ್ನು ರೂಟ್ ಸ್ಟಾಕ್ ಬಳಸಬೇಕು. ಕಸಿಮಾಡಲು ಬೇಕಾದ ಸಯಾನ್ ಗಳನ್ನು ಉತ್ತಮವಾಗಿ ಫಲಬಿಡುವ ಮರಗಳಿಂದ ರೂಟ್ ಸ್ಟಾಕ್‌ನಷ್ಟೇ ದಪ್ಪದ ರೆಂಬೆಗಳಿAದ ಪಡೆಯಬೇಕು. ಕಸಿ ಮಾಡಲು ಬೇಕಾದ ಸಯಾನ್ ಗಳನ್ನು ಉತ್ತಮವಾಗಿ ಫಲಬಿಡುವ ಮರಗಳಿಂದ ರೂಟ್ ಸ್ಟಾಕ್‌ನಷ್ಟೆ ದಪ್ಪದ ರೆಂಬೆಗಳಿಂದ ಪಡೆಯಬೇಕು. ವೆಡ್ಜ್ ಆಕಾರದ ಕಟಿಂಗ್ ಗಳನ್ನು ತಯಾರಿಸಿ ಅದನ್ನು ರೂಟ್ ಸ್ಟಾಕ್ ನೊಂದಿಗೆ ಸೇರಿಸಿ ಪಾಲೀ ಹೌಸ್ ಗಳಲ್ಲಿ 2 ತಿಂಗಳಿರಿಸಬೇಕು. ನಂತರ ಕಸಿ ಮಾಡಿರುವ ಸಸಿಗಳನ್ನು ಪಾಲೀ ಹೌಸ್ ನಿಂದ ಹೊರಗಿರಿಸಿ ಹೊರಗಿನ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡಬೇಕು. ಈ ರೀತಿಯ ವೆಡ್ಜ್ ಆಕಾರದ ಕಸಿ ಮಾಡುವುದರಿಂದ ಹೆಚ್ಚಿನ ಯಶಸ್ಸು ಗಳಿಸಬಹುದು.

              ಹೊಂಗೆ ಮರವನ್ನು ಸರಳವಾಗಿ ಬೀಜಗಳನ್ನು ನೇರವಾಗಿ ಮಡಿಗಳಲ್ಲಿ ಬಿತ್ತುವುದು ಅಥವಾ ಪಾಲಿಥೀನ್ ಚೀಲಗಳಲ್ಲಿ ಜುಲೈ-ಆಗಸ್ಟ್ ಅಥವಾ ನೇರವಾಗಿ ನೆಡುತೋಪು ಬೆಳೆಸುವಲ್ಲಿ ಬಿತ್ತುವ ಮೂಲಕ ಸಹ ಬೆಳೆಸಬಹುದು. ಚೀಲಗಳಿಗೆ ತುಂಬುವ ಮಿಶ್ರಣದಲ್ಲಿ ಮರಳು, ಮಣ್ಣು ಮತ್ತು ಗೊಬ್ಬರವನ್ನು 1:1:1 ರ ಪ್ರಮಾಣದಲ್ಲಿ ಬಳಸಿದಲ್ಲಿ ಒಳ್ಳೆಯ ಮೊಳಕೆಯ ಪ್ರಮಾಣವನ್ನು ನಿರೀಕ್ಷಿಸಬಹುದು. ಸಸಿಗಳು ಮೊದಲನೇ ಬೆಳವಣಿಗೆಯ ವರ್ಷದಲ್ಲಿ 25-30 ಸೆಂ.ಮೀ. ಎತ್ತರಕ್ಕೆ ಬೆಳೆಯುತ್ತವೆ ಮತ್ತು ಮಳೆಗಾಲದ ಪ್ರಾರಂಭದಲ್ಲಿ ನೆಡುತೋಪುಗಳಲ್ಲಿ 60 ಸೆಂ.ಮೀ. ಎತ್ತರದ ಸಸಿಗಳನ್ನು ನಾಟಿ ಮಾಡುವುದು ಸೂಕ್ತ.

ನೆಡುತೋಪಿನ ನಿರ್ವಹಣೆ: ಸಮುದಾಯ ಭೂಮಿಯಲ್ಲಿ ಬ್ಲಾಕ್ ನೆಡುತೋಪಾಗಿ (ಒಂದೇ ಜಾತಿಯ) ಬೆಳೆಸಬಹುದು. ಫಲವತ್ತತೆ ಕಡಿಮೆಯಿರುವ ಕೃಷಿ ಭೂಮಿಯಲ್ಲಿ ಕೃಷಿ ಬೆಳೆಯೊಂದಿಗೆ ವಿವಿಧ ಮಾಡೆಲ್‌ಗಳಲ್ಲಿ, ಫಲವತ್ತತೆಯೊಂದಿರುವ ಕೃಷಿ ಭೂಮಿಯ ಅಂಚಿನಲ್ಲಿ ಅಂದರೆ ಬದುಗಳಲ್ಲಿ ಅಲ್ಲಲ್ಲೇ ಒಂದು ಲೈನ್‌ನಲ್ಲಿ ಅಥವಾ ಮಾರ್ನಾಲ್ಕು ಲೈನ್‌ಗಳಲ್ಲಿ ರಸ್ತೆ, ರೈಲು ಹಳಿಗಳ ಪಕ್ಕದಲ್ಲಿ ಅಥವಾ ಕಾಲುವೆಗಳ ಪಕ್ಕದಲ್ಲಿ ಬೆಳೆಯುವುದು ಉತ್ತಮ.

              ಗುಂಡಿಗಳನ್ನು 60X60X60 ಸೆಂ.ಮೀ. ಅಳತೆಯಲ್ಲಿ ತೆಗೆದು ಒಂದು ಹೆಕ್ಟೇರ್ ನಲ್ಲಿ ೫೦೦ ಸಸಿಗಳನ್ನು ನೆಡಬಹುದು. ಪ್ರತಿ ಗುಂಡಿಗಳನ್ನು ಮಣ್ಣು ಮತ್ತು 5 ಕೆ.ಜಿ. ಕೊಟ್ಟಿಗೆ ಗೊಬ್ಬರ ಬಳಸಬಹುದು. ಒಂದು ವರ್ಷ ಬೆಳೆದಿರುವ ಆರೋಗ್ಯಕರ ಸಸಿಗಳನ್ನು (60 ಸೆಂ.ಮೀ. ಎತ್ತರದ) ಆಯ್ಕೆ ಮಾಡಿಕೊಂಡು ಅಥವಾ ಮಡಿಗಳಲ್ಲಿದ್ದರೆ ಅವುಗಳನ್ನು ಮಣ್ಣಿನ ಉಂಡೆಯೊಂದಿಗೆ ಕಿತ್ತು ನೆಡುತೋಪಿನಲ್ಲಿ ನಾಟಿ ಮಾಡಬೇಕು. ಮಳೆಗಾಲದ ಪ್ರಾರಂಭ ಅಂದರೆ ಜೂನ್-ಜುಲೈ ತಿಂಗಳುಗಳಲ್ಲಿ ನಾಟಿ ಮಾಡುವುದು ಸೂಕ್ತ. ಒಂದು ವರ್ಷದಲ್ಲಿ ಮೂರು ಬಾರಿ ಗಿಡಗಳಿಗೆ ನೀರುಣಿಸಬೇಕು. ರಸ್ತೆ ಬದಿಯಲ್ಲಿ 8 ಮೀಟರ್ ಅಂತರದಲ್ಲಿ ಅಥವಾ ಬ್ಲಾಕ್ ನೆಡುತೋಪುಗಳಲ್ಲಿ 2 X 2 ಮೀಟರ್ ನಿಂದ 5 X 5 ಮೀಟರ್ ಅಂತರದಲ್ಲಿ ನಾಟಿ ಮಾಡಬಹುದು. ಹೊಂಗೆ ಗಿಡಗಳು ನೆರಳಿನಲ್ಲಿಯೂ ಬೆಳೆಯುವುದರಿಂದ, ಅಸ್ತಿತ್ವದಲ್ಲಿರುವ ಮರಗಳ ಮಧ್ಯೆದಲ್ಲಿಯೂ ಬೆಳೆಯಬಹುದು.

ಮಾಡೆಲ್/ಅಂತರ: 5 X 4 ಮೀ. ನಲ್ಲಿ ಬೆಳೆಯುವುದನ್ನು ಶಿಫಾರಸ್ಸು ಮಾಡಲಾಗಿದೆ.

ಕೀಟ, ರೋಗ ನಿರ್ವಹಣೆ: ಎಲೆ ಚುಕ್ಕೆ ಮತ್ತು ಬ್ಲೈಟ್ ರೋಗಗಳನ್ನು ಎಲೆಗಳಲ್ಲಿ ಬಿಳಿ ಮತ್ತು ಹಳದಿಯ ಚುಕ್ಕೆಗಳಿಂದ ಗುರುತಿಸಬಹುದು.

ನೆಡುತೋಪಿನ ಆಯಸ್ಸು: 30 ವರ್ಷಗಳು

ಇಳುವರಿ: ನಾಟಿ ಮಾಡಿದ 4 ರಿಂದ 5 ವರ್ಷಗಳಲ್ಲಿ ಮರಗಳು ಹೂ ಬಿಡಲು ಪ್ರಾರಂಭಿಸುತ್ತವೆ. ವರ್ಷಗಳು ಕಳೆದಂತೆ ಇಳಿವರಿ ಹೆಚ್ಚಾಗಲಿದೆ. ಹಾಗೂ 10 ವರ್ಷಗಳಲ್ಲಿ ಗರಿಷ್ಟ ಮಟ್ಟಕ್ಕೆ ತಲುಪಲಿದೆ. ಪ್ರತಿ ಮರಗಳಿಂದ 10 ಕೆ.ಜಿ. ಯಿಂದ 15 ಕೆ.ಜಿ.ಗೂ ಹೆಚ್ಚಿನ ಇಳುವರಿ ಪಡೆಯಬಹುದು ಹಾಗೂ 1500 ರಿಂದ 1700 ಬೀಜಗಳು ಪ್ರತಿ ಕೆ.ಜಿ. ಯಲ್ಲಿರಬಹುದು. ಇಳುವರಿಯು 8 ರಿಂದ 24 ಕೆ.ಜಿ. ಸಿಪ್ಪೆಯಿಂದ ಬೇರ್ಪಡಿಸಿ ಬೀಜಗಳನ್ನು ಪ್ರತಿ ಮರದಿಂದ ವಾರ್ಷಿಕವಾಗಿ ಪಡೆಯು ಸಾಧ್ಯ. ಸರಾಸರಿ 6000 ಕೆ.ಜಿ. ಇಳುವರಿಯನ್ನು ಪ್ರತಿ ಹೆಕ್ಟೇರ್ ನೆಡುತೋಪಿನಿಂದ ನಿರೀಕ್ಷಿಸಬಹುದು.

ಉಪಯೋಗಗಳು: ಈ ಮರವನ್ನು ಸಾಮಾನ್ಯವಾಗಿ ಉರುವಲಾಗಿ ಬಳಸುವರು. ಈ ಮರವು ಬಾಳಿಕೆ ಬರುವುದಿಲ್ಲ ಮತ್ತು ಸುಲಭವಾಗಿ ಕೀಟಗಳಿಗೆ ತುತ್ತಾಗಲಿದೆ ಮತ್ತು ಒಣಗಿದಂತೆ ಮರ ಸಿಡಿಯುವುದು. ಆದುದರಿಂದ ಇದನ್ನು ಗುಣಮಟ್ಟದ ಮರವಾಗಿ ಬಳಸುವುದಿಲ್ಲ. ಈ ಮರದಿಂದ ಕ್ಯಾಬಿನೆಟ್, ಗಾಡಿಗಳ ಚಕ್ರಗಳ ನಿರ್ಮಾಣದಲ್ಲಿ, ಕಂಬಗಳಾಗಿ ಮತ್ತು ಕೃಷಿ ಉಪಕರಣಗಳ ತಯಾರಿಕೆಯಲ್ಲಿ ಹಾಗೂ ಹಿಡಿಗಳಾಗಿ ಬಳಸಲಾಗುವುದು.

              ಒಣ ಎಲೆಗಳನ್ನು ಕೀಟಗಳ ಬಾದೆಯನ್ನು ನಿಯಂತ್ರಿಸಲು ಆಹಾರ ಧಾನ್ಯಗಳ ಶೇಖರಣೆಯಲ್ಲಿ ಬಲಸಲಾಗುವುದು. ಇದರ ಎಣ್ಣೆ ತೆಗೆದ ಕೇಕ್‌ಗಳನ್ನು ಉತ್ತಮ ಗೊಬ್ಬರವಾಗಿ ಬಳಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚಲಿದೆ. ಇದೊಂದು ರಸ್ತೆ ಬದಿಯಲ್ಲಿ ಬೆಳೆಯುವ ಅತ್ಯುತ್ತಮ ಮರ, ಮಣ್ಣಿನ ಸವಕಳಿ ತಪ್ಪಿಸಲು ಮತ್ತು ಮರದಲ್ಲಿಯ ಅನೇಕ ಬೇರುಗಳು ಮಣ್ಣನ್ನು ಸಂರಕ್ಷಿಸಲಿವೆ.

 

ಕೊಯ್ಲು: ಕಸಿ ಮಾಡಿದ ಮರಗಳು ನಾಲ್ಕು ವರ್ಷಗಳಲ್ಲಿ ಬೀಜಗಳು ಬಿಡಲು ಪ್ರಾರಂಭಿಸುತ್ತವೆ. ಬೀಜಗಳಿಂದ ಬೆಳೆಸಿದ ಮರಗಳು 5 ರಿಂದ 6 ವರ್ಷಗಳಲ್ಲಿ ರಾಷ್ಟçದ ವಿವಿಧ ಭಾಗಗಳಲ್ಲಿ ಫಲ ಬಿಡಲು ಪ್ರಾರಂಭಿಸುತ್ತವೆ. ಕೊಯ್ಲನ್ನು ಮೇ/ಜೂನ್ ಮತ್ತು ನವೆಂಬರ್/ಡಿಸೆಂಬರ್ ತಿಂಗಳಲ್ಲಿ ನಿರ್ವಹಿಸಬಹುದು. 

              ಮರಗಳಲ್ಲಿ ಏಪ್ರಿಲ್‌ನಿಂದ ಜೂನ್ ವರೆಗೆ ಹೂ ಬಿಡಲು ಪ್ರಾರಂಭಿಸಲಿವೆ. ಆದರೆ ಸಿಪ್ಪೆಗಳಿರುವ ಬೀಜ (ಪಾಡ್) ಗಳು ಮುಂದಿನ ವರ್ಷದ ಮಾರ್ಚ್ ನಿಂದ ಮೇ ತಿಂಗಳಲ್ಲಿ ಬಲಿಯಲಿವೆ. ಪಾಡ್‌ಗಳನ್ನು ರಾಷ್ಟçದ ವಿವಿಧ ಭಾಗಗಳಲ್ಲಿ ವಿವಿಧ ತಿಂಗಳುಗಳಲ್ಲಿ ಪಾಡ್‌ಗಳ ಕೊಯ್ಲು ಮಾಡಲಾಗುವುದು. ಪ್ರತಿ ಬೀಜವು 1.1 ರಿಂದ 1.8 ಗ್ರಾಂ ತೂಕವಿರುವುದು.

 

ಆರ್ಥಿಕ ಆದಾಯ: ರೂ. 2,00,000/- (ಎರಡು ಲಕ್ಷ) ಆದಾಯವನ್ನು ಬೀಜಗಳ ಮಾರಾಟದಿಂದ ವಾರ್ಷಿಕವಾಗಿ ಪಡೆಯಲು ಸಾಧ್ಯ.

ಪ್ರಸ್ತುತ ಮಾರುಕಟ್ಟೆ ದರ: ರೂ. 25 – 27 ಪ್ರತಿ ಕೆ.ಜಿ.ಗೆ .