IAFT – INSTITUTION OF AGROFORESTRY FARMERS AND TECHNOLOGISTS

ಬೀಜಗಳ ಸಂಗ್ರಹ:

ಬೀಜಗಳು ಕಡಿಮೆ ಗಾತ್ರದಿಂದ ಕೂಡಿದ್ದು 5 ರಿಂದ 6 ಲಕ್ಷ ಬೀಜಗಳು ಪ್ರತಿ ಕಿ.ಗ್ರಾಂ.ಗೆ.

ಬೀಜಗಳ ಸಂಸ್ಕರಣೆ ಮತ್ತು ಬೀಜೋಪಚಾರ:

ಯಾವುದೇ ರೀತಿಯ ಬೀಜೋಪಚಾರದ ಅವಶ್ಯಕತೆಯಿಲ್ಲ.

ಸಸ್ಯಕ್ಷೇತ್ರ:

ಸಾಮಾನ್ಯವಾಗಿ ಮೊಳಕೆಯ ಪ್ರಮಾಣವು ಶೇ.30 ರಷ್ಟಿರುವುದು ಮತ್ತು 30,000 ದಿಂದ 1,00,000 ಸಸಿಗಳನ್ನು ಒಂದು ಕೆ.ಜಿ. ಉತ್ತಮವಾದ ಬೀಜದಿಂದ ಹಾಗೂ ಗುಣಮಟ್ಟದ ಸಸ್ಯಕ್ಷೇತ್ರದಿಂದ ಸಾಧ್ಯ. ಬೀಜಗಳನ್ನು ಎತ್ತರದ ಮಡಿಗಳಲ್ಲಿ (ತಾಯಿ ಮಡಿಗಳು) 10 ಮೀ ಉದ್ದ X 1 ಮೀ ಅಗಲದ ಮಡಿಗಳಲ್ಲಿ ಪ್ರತಿ ಮಡಿಗೆ 250 ಗ್ರಾಂ. ಬೀಜಗಳನ್ನು ಮರಳಿನೊಂದಿಗೆ ಮಿಶ್ರ ಮಾಡಿ ಸಮನಾಗಿ ಹರಡಬೇಕು. ನಂತರ ಮೇಲ್ಭಾಗದಲ್ಲಿ ಒಂದು ಪದರ ತೆಳುವಾದ ಮರಳಿನಿಂದ ಮುಚ್ಚಬೇಕು. ಈ ಮಡಿಗಳನ್ನು ಭತ್ತದ ಹುಲ್ಲಿನಿಂದ ಮುಚ್ಚಬೇಕು. ಏಕೆಂದರೆ ಬೀಜಗಳು ನೀರು ಹಾಕುವಾಗ ನೀರಿನಲ್ಲಿ ಕೊಚ್ಚಿ ಹೋಗದಂತೆ ತಡೆಯಲು. ನೀರನ್ನು ರೋಸ್‌ಕ್ಯಾನ್ ಅಥವಾ ತುಂತುರು ನೀರಾವರಿ ಮೂಲಕ ನೀರುಣಿಸಬೇಕು. ಮಡಿಗಳ ಸುತ್ತಲೂ ಇರುವೆಗಳು ಬರದಂತೆ ತಡೆಯಲು ಕೀಟನಾಶಕಗಳನ್ನು ಬಳಸಬೇಕು. ಬೀಜಗಳು ಮಡಿಗಳಲ್ಲಿ ಹಾಕಿದ 5 ದಿನಗಳಲ್ಲಿ ಮೊಳಕೆಯೊಡೆಯಲು ಪ್ರಾರಂಭಿಸುತ್ತವೆ ಮತ್ತು ಏಳನೇ ದಿವಸಗಳಲ್ಲಿ ಮುಚ್ಚಿದಂತಹ ಭತ್ತದ ಹುಲ್ಲನ್ನು ತೆಗೆಯಬೇಕು. ಸಸಿಗಳನ್ನು ತಾಯಿ ಮಡಿಗಳಲ್ಲಿ 3 ರಿಂದ 4 ವಾರಗಳ ಕಾಲ ಬೆಳೆಯಲಾಗುವುದು. 4ನೇ ವಾರದ ನಂತರ ಸಸಿಗಳು 8 ರಿಂದ 10 ಸೆಂ.ಮೀ. ಎತ್ತರವಾದಾಗ ಅವುಗಳನ್ನು ತೆಗೆದು ಪಾಲಿಬ್ಯಾಗ್‌ಗಳಲ್ಲಿ ಅಥವಾ ಇತರೆ ಮಡಿಗಳಲ್ಲಿ ನಾಟಿ ಮಾಡಬೇಕು. ನಾಟಿ ಮಾಡುವ ಇತರೆ ಮಡಿಗಳೂ ಸಹ ತಾಯಿ ಮಡಿಗಳಷ್ಟೇ ಇರಬೇಕು. ಆದರೆ ಮರಳಿನ ಜೊತೆಗೆ, ಕೊಟ್ಟಿಗೆ ಗೊಬ್ಬರ ಮತ್ತು ಮಣ್ಣನ್ನು 2:1:1 ಪ್ರಮಾಣದಲ್ಲಿ ಬೆರೆಸಿ ಮಡಿಗಳಲ್ಲಿ ಹೆಚ್ಚಿನ ಪೋಷಕಾಂಶಗಳ ಲಭ್ಯತೆಗಾಗಿ ಮತ್ತು ತೇವಾಂಶ ಹಿಡಿದಿಡುವ ಸಾಮರ್ಥ್ಯ ಹೆಚ್ಚಿಸಲು ಹರಡಬೇಕಿದೆ. ತಾಯಿ ಮಡಿಗಳಿಂದ ತೆಗೆದ ಸಸಿಗಳನ್ನು ಇತರೆ ಮಡಿಗಳಲ್ಲಿ 4 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ಈ ಮಡಿಗಳಲ್ಲಿ ಮೂರು ತಿಂಗಳ ಕಾಲ ಬೆಳೆದ ಮೇಲೆ ಅಂದರೆ ಸುಮಾರು 30 ರಿಂದ 45 ಸೆಂ.ಮೀ. ಎತ್ತರಕ್ಕೆ ಮತ್ತು ಸುತ್ತಳತೆ 3 ರಿಂದ 5 ಮಿ.ಮೀ. ದಪ್ಪ ಬೆಳೆಯುವಂತೆ ಕ್ರಮ ವಹಿಸಬೇಕು. ಸಸಿಗಳನ್ನು ಪಾಲಿಬ್ಯಾಗ್‌ಗಳಲ್ಲಿ ಮತ್ತು ರೂಟ್ ಟ್ರೆöÊನರ್‌ಗಳಲ್ಲಿ ಬೆಳೆಯುವುದು. ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆಯಲು ಸೂಕ್ತವಾಗಿರುತ್ತವೆ. ಬ್ಯಾಗ್‌ಗಳಲ್ಲಿ ಬೆಳೆದಂತಹ ಸಸಿಗಳು ನೆಡುತೋಪುಗಳಲ್ಲಿ ಉತ್ತಮವಾಗಿ ಬೆಳೆಯುತ್ತವೆ ಮತ್ತು ಮೊದಲನೇ ವರ್ಷದಲ್ಲಿಯೇ ಹುಲುಸಾಗಿ ಬೆಳೆಯಬಲ್ಲವು. ಪಾಲಿಬ್ಯಾಗ್‌ಗಳ ಗಾತ್ರ 15 X 7 ಸೆಂ.ಮೀ. ಗಳಿದ್ದು, ಮರಗಳು, ಕೊಟ್ಟಿಗೆ ಗೊಬ್ಬರ ಮತ್ತು ಮಣ್ಣನ್ನು 2:1:1 ರಂತೆ ಮಿಶ್ರಣ ಮಾಡಿ ಬೆಳೆಯುವುದರಿಂದ ಗುಣಮಟ್ಟದ ಸಸಿಗಳನ್ನು ಪಡೆಯಲು ಸಾಧ್ಯ. ಇಂತಹ ಬ್ಯಾಗ್‌ಗಳಲ್ಲಿ ಬೆಳೆಯುವುದರಿಂದ ಎರಡು ತಿಂಗಳಿನಲ್ಲಿ ನಾಟಿ ಮಾಡಲು ಯೋಗ್ಯವಾಗುತ್ತವೆ ಹಾಗೂ ಸಸ್ಯಕ್ಷೇತ್ರಗಳಲ್ಲಿ 4 ರಿಂದ 6 ತಿಂಗಳವರೆಗೆ ನಿರ್ವಹಣೆ ಮಾಡಬಹುದು.

 

ನೆಡುತೋಪುಗಳ ನಿರ್ವಹಣೆ:

ಸರ್ವೆ ಸಸಿಗಳನ್ನು ಸಾಮಾನ್ಯವಾಗಿ ಮಡಿಗಳಲ್ಲಿ ಬೆಳೆದು, ಅವುಗಳನ್ನು ತೆಗೆದು (ಕಿತ್ತು) ಮಳೆಗಾಲಕ್ಕೆ ಮುನ್ನ ಅಥವಾ ಮಳೆಗಾಲದಲ್ಲಿ ಮಳೆಯಾಶ್ರಯಿತ ಪ್ರದೇಶಗಳಲ್ಲಿ ನಾಟಿ ಮಾಡುವುದರಿಂದ ಬದುಕುಳಿಯುವಿಕೆಯ ಪ್ರಮಾಣವನ್ನು ಹೆಚ್ಚಿಸಬಹುದು. ನೀರಾವರಿ ಪ್ರದೇಶಗಳಲ್ಲಿ ಮಳೆಗಾಲಕ್ಕಿಂತ ಒಂದು ತಿಂಗಳು ಮುಂಚಿತವಾಗಿ ನಾಟಿ ಮಾಡಬೇಕು ಹಾಗೂ ವಾರಕ್ಕೊಮ್ಮೆ ಅಥವಾ ಎರಡು ಬಾರಿ ನೀರುಣಿಸಬೇಕು. ಇದರಿಂದ ಸಸಿಗಳು ಉತ್ತಮವಾಗಿ ಬೆಳೆಯಲು ಪ್ರಾರಂಭಿಸುತ್ತವೆ ಮತ್ತು ಮಳೆಗಾಲಕ್ಕಿಂತ ಮೊದಲೇ ಬೆಳೆಯಲು ಪ್ರಾರಂಭಿಸುವುದರಿAದ, ಮಳೆಗಾಲದಲ್ಲಿ ನಾಟಿ ಮಾಡಿದ ಸಸಿಗಳಿಗಿಂತ ಹೆಚ್ಚು ವೇಗವಾಗಿ ಮಳೆಗಾಲದಲ್ಲಿ ಬೆಳೆಯುತ್ತವೆ. ಭೂಮಿಯನ್ನು ಆಳವಾಗಿ ಡಿಸ್ಕ್ ನೇಗಿಲಿನಿಂದ ಎರಡು ಬಾರಿ ಉಳುಮೆ ಮಾಡಿದರೆ ಉತ್ತಮ. ಚೀಲಗಳಲ್ಲಿ ಬೆಳೆಸಿರುವ ಸಸಿಗಳನ್ನು 30 ಸೆಂ.ಮೀ. X 30 ಸೆಂ.ಮೀ. ಆಳದ ಗುಂಡಿಗಳಲ್ಲಿ ನಾಟಿ ಮಾಡಬೇಕು. ಶಿಫಾರಸ್ಸು ಮಾಡಲಾದ 1.5 X 1.5 ಮೀ ಅಂತರದಲ್ಲಿ ಗುಣಮಟ್ಟದ ಸಸಿಗಳನ್ನು ನಾಟಿ ಮಾಡುವುದು ಸೂಕ್ತ. ನಾಟಿ ಮಾಡುವ ಮುನ್ನ ಗುಂಡಿಗಳಲ್ಲಿ 10 ಗ್ರಾಂ. ಸೂಪರ್ ಪಾಸ್ಪೇಟ್ ರಸಾಯನಿಕ ಗೊಬ್ಬರವನ್ನು ಪ್ರತಿ ಗುಂಡಿಗಳಲ್ಲಿ ಮಿಶ್ರ ಮಾಡಬೇಕು. ಜೊತೆಗೆ ಗೆದ್ದಲು ಹುಳುಗಳ ನಿವಾರಣೆಗೆ ಕ್ಲೋರೋಫೈರಿಫಾಸ್ ಒಂದು ಲೀಟರ್ ನೀರಿಗೆ 5.0 ಮಿ.ಲೀ. ಕೀಟನಾಶಕವನ್ನು ಕೆಂಪು ಮಣ್ಣಿನ ಕ್ಷೇತ್ರ ಅಥವಾ ಗೆದ್ದಲು ಹುಳುಗಳ ಬಾಧೆ ಇರುವೆಡೆ ಬಳಸಬೇಕು. ಇದರ ಅವಶ್ಯಕತೆ ತೀರ ಪ್ರದೇಶದ ಮರಳು ಭೂಮಿಯಲ್ಲಿ ಅವಶ್ಯಕತೆಯಿಲ್ಲ. ನಾಟಿ ಮಾಡಿದ ತಕ್ಷಣ ಮಳೆ ಬಾರದೆ ಇದ್ದಲ್ಲಿ, ದಿನ ಬಿಟ್ಟು ದಿನ ನೀರನ್ನು ಮೊದಲ ಎರಡು ವಾರಗಳಲ್ಲಿ ಹಾಕಬೇಕು. ನಂತರದ ವಾರಗಳಲ್ಲಿ ವಾರಕ್ಕೆ ಎರಡು ಬಾರಿಯಂತೆ ಸ್ಥಳೀಯ ಮಣ್ಣಿನ ಗುಣಕ್ಕೆ ತಕ್ಕಂತೆ ನೀಡಬೇಕು. ನಾಟಿ ಮಾಡಿದ ನಂತರ ಒಂದು ತಿಂಗಳ ಒಳಗಾಗಿ ಸತ್ತು ಹೋದ / ಒಣಗಿದ ಗಿಡಗಳ ಬದಲಿಗೆ ಗಿಡ ನಾಟಿ ಮಾಡಬೇಕು. ನಾಲ್ಕು ಬಾರಿ ಅಂದರೆ 3, 6, 9 ಮತ್ತು 12ನೇ ತಿಂಗಳುಗಳಲ್ಲಿ ಕಳೆ ತೆಗೆಯಬೇಕು. ಅಥವಾ ಮೇಲಿನ ಛಾವಣಿ ಹೆಚ್ಚಿಗೆ ನೆರಳು ನೀಡುವ ತನಕ. ಎರಡು ಬಾರಿ ಅಂದರೆ 12 ಮತ್ತು 24 ತಿಂಗಳುಗಳಲ್ಲಿ ಅನಾವಶ್ಯಕ ರೆಂಬೆ-ಕೊAಬೆಗಳನ್ನು ಕತ್ತರಿಸಿ ತೆಗೆಯಬೇಕು. ಫಲವತ್ತಾದ ಭೂಮಿಯಾಗಿದ್ದಲ್ಲಿ ಯಾವುದೇ ಹೆಚ್ಚುವರಿ ಗೊಬ್ಬರ ಹಾಕುವ ಅವಶ್ಯಕತೆಯಿಲ್ಲ. ಕಡಿಮೆ ಫಲವತ್ತತೆಯುಳ್ಳ ಭೂಮಿಗೆ 100 ಕಿ.ಗ್ರಾಂ. ಡಿ.ಎ.ಪಿ ಯನ್ನು ಪ್ರತಿ ಎಕರೆ 12 ರಿಂದ 24 ತಿಂಗಳ ಮಧ್ಯೆ ನೀಡಬೇಕು. ರಸಾಯನಿಕ ಗೊಬ್ಬರವನ್ನು ನೀರಾವರಿ ಭೂಮಿಯಲ್ಲಿ ನೀಡಬಹುದು ಹಾಗೂ ಇದು ಬೆಳೆಯುವವರ ಅಥವಾ ಪ್ರದೇಶಕ್ಕನುಗುಣವಾಗಿರುತ್ತದೆ. 12 ರಿಂದ 24 ತಿಂಗಳುಗಳೊಳಗೆ ರಸಾಯನಿಕ ಗೊಬ್ಬರವನ್ನು ನೀಡುವುದರಿಂದ ಹೆಚ್ಚು ಪರಿಣಾಮವನ್ನು ಕಂಡುಕೊಳ್ಳಬಹುದು. ಸಾಮಾನ್ಯವಾಗಿ ಬೆಳೆಯುವವರು 50 ಕೆ.ಜಿ. ಯೂರಿಯಾ ಮತ್ತು 50 ರಿಂದ 100 ಕೆ.ಜಿ. ಡಿ.ಎ.ಪಿ. ಗೊಬ್ಬರವನ್ನು ಪ್ರತಿ ಎಕರೆಗೆ ಒಂದು ವರ್ಷದ ನಂತರ ನೀಡಬೇಕು. ಸರ್ವೆ ಗಿಡಗಳಿಗೆ ಹೆಚ್ಚು ಪ್ರಮಾಣದ ಸಾರಜನಕದ (ಯೂರಿಯಾ) ಗೊಬ್ಬರದ ಅವಶ್ಯಕತೆಯಿರುವುದಿಲ್ಲ. ಕಾರಣ ಅದಕ್ಕೆ ಬೇಕಾದ ಸಾರಜನಕವನ್ನು ಅದೇ ಉತ್ಪಾದನೆಯನ್ನು ಬ್ಯಾಕ್ಟೀರಿಯಾಗಳ ಸಹಾಯದಿಂದ ಪಡೆಯುವುದರಿಂದ. 11 ಕೆ.ಜಿ. ಯೂರಿಯಾ ಮತ್ತು 94 ಕೆ.ಜಿ. ಸೂಪರ್ ಪಾಸ್ಪೇಟ್‌ನ್ನು ನಾಲ್ಕು ಸಮಯದಲ್ಲಿ ಅಂದರೆ ನಾಟಿ ಮಾಡಿದ 6, 8 ಮತ್ತು 12 ತಿಂಗಳಲ್ಲಿ ನೀಡಬೇಕು. ಸಸಿಗಳು ನೇರವಾಗಿ ಬೆಳೆಯಲು ಪಕ್ಕದ ರೆಂಬೆಗಳನ್ನು, ಮೊದಲನೇ, ಎರಡನೇ ಮತ್ತು ಮೂರನೇ ವರ್ಷಗಳಲ್ಲಿ ಕತ್ತರಿಸಿ ತೆಗೆಯಬೇಕು. ಇದಕ್ಕೆ ತಗುಲುವ ವೆಚ್ಚವನ್ನು ಕತ್ತರಿಸಿ ತೆಗೆಯಲಾದ ರೆಂಬೆಗಳ ಮಾರಾಟದಿಂದ ಪಡೆಯಬಹುದು. ಮೊದಲನೇ ವರ್ಷದಲ್ಲಿ ಶೇಂಗಾ, ಕಲ್ಲಂಗಡಿ ಅಥವಾ ಇತರೆ ದ್ವಿದಳ ಧಾನ್ಯಗಳನ್ನು ಬೆಳೆಯಬಹುದು. ನೆಡುತೋಪು ನಿರ್ಮಿಸುವ ವೆಚ್ಚವನ್ನು ಮೊದಲನೇ ವರ್ಷದ ಕೃಷಿ ಬೆಳೆಯಿಂದ ಪಡೆಯಲು ಸಾಧ್ಯ.

 

ಸಸಿಗಳನ್ನು ನೆಡುವ ಅಂತರ:

1.8 X 1.8 ಮೀ ಅಥವಾ 2.4 X 2.4 ಮೀ ಅಂತರವನ್ನು ಪಾಲಿಸುವುದು ಸೂಕ್ತ.

 

ಕೀಟ ಮತ್ತು ರೋಗಗಳ ನಿರ್ವಹಣೆ:

ಸರ್ವೆ ಮರಕ್ಕೆ ಕೆಲವೇ ಮುಖ್ಯ ಕೀಟಗಳು ಮತ್ತು ರೋಗಗಳು ಬಾಧಿಸುವುದರಿಂದ ಆರ್ಥಿಕವಾಗಿ ನಷ್ಟ ಉಂಟಾಗಬಹುದು. ಸಾಮಾನ್ಯವಾದ ಕೀಟಗಳ ಸಮಸ್ಯೆಯೆಂದರೆ ಕಾಂಡ ಕೊರೆಯುವ ಕೀಟ. ಇದರ ಮರಿಯು ಮುಖ್ಯ ಕಾಂಡದಲ್ಲಿ ಒಂದು ರೀತಿಯ ಕೊಳವೆಯಾಕಾರದಲ್ಲಿ ಕೊರೆದು ಅದರೊಳಗಡೆ ಹಗಲಿನಲ್ಲಿ ಉಳಿದು ರಾತ್ರಿ ಹೊರ ಬಂದು ಮರದ ತೊಗಟೆಯನ್ನು ತಿನ್ನುತ್ತದೆ. ಇದರಿಂದ ಮರ ಜೀವಂತವಾಗಿ ಉಳಿದರೂ, ಉತ್ತಮವಾದ ಪೋಲ್ಸ್ ಪಡೆಯಲು ಸಾಧ್ಯವಾಗಲಾರದು. ಇದರಿಂದ ತೊಂದರೆಗೊಳಗಾದ ಮರಗಳು ಹುಳುಗಳು ಕೊರೆದಿರುವ ಜಾಗದಿಂದ ಗಾಳಿಗೆ ಮುರಿದು ಬೀಳುತ್ತವೆ. ಇದಕ್ಕೆ ರಸಾಯನಿಕಗಳನ್ನು ಬಳಸಿ ನಿಯಂತ್ರಿಸುವುದು ಕಷ್ಟ. ಏಕೆಂದರೆ ಈ ಹುಳವು ಕೊಳವೆಯೊಳಗೆ ವಾಸಿಸುವುದರಿಂದ. ಇದರಿಂದ ಮುಕ್ತವಾಗಲು ಬೇರೆ ಬೇರೆ ತಳಿಗಳಾದ ಆಸ್ಟೆçÃಲಿಯನ್ ಮತ್ತು ಕೀನ್ಯಾ ತಳಿಗಳನ್ನು ಬೆಳೆಸಬೇಕಿದೆ. ಒಣಗುವುದು ಅಥವಾ ತೊಗಟೆ ಮೇಲೆ ಗುಳ್ಳೆಗಳಾಗುವುದು, ಇದರಿಂದ ಮರಗಳು ಒಣಗುತ್ತವೆ. ತೊಂದರೆಗೊಳಗಾದ ಮರಗಳು ಮೊದಲು ಎಲೆಗಳು ಒಣಗಲು ಪ್ರಾರಂಭಿಸಿ, ಮುಖ್ಯ ಕಾಂಡದ ತೊಗಟೆಯ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ. ಇದರ ಮುಂದುವರಿಸಿದ ಹಂತವಾಗಿ ಈ ಗುಳ್ಳೆಗಳು ಒಡೆದು ತೆರೆದುಕೊಂಡು ಸ್ಪೊರ್ರ್ಸ್ ಗಳನ್ನು ಹೊರಸೂಸುತ್ತವೆ. ಇದನ್ನು ತುಂಬಾ ಮುಖ್ಯವಾದ ರೋಗವೆಂದು ನೆಡುತೋಪುಗಳಲ್ಲಿ ಪರಿಗಣಿಸುವುದಿಲ್ಲ. ಕಾರಣ ಇದು ೪ ವರ್ಷಗಳಿಗಿಂತ ಹಳೆಯದಾದ ಮರಗಳಲ್ಲಿ ಕಾಣಿಸಿಕೊಳ್ಳುವುದರಿಂದ. ಒಮ್ಮೆ ಈ ರೋಗವು ಕಂಡು ಬಂದಲ್ಲಿ ಇದಕ್ಕೆ ಯಾವುದೇ ಪರಿಣಾಮಕಾರಿಯಾದ ನಿಯಂತ್ರಣ ಸಾಧ್ಯವಿಲ್ಲ. ಆದುದರಿಂದ ನರಳುತ್ತಿರುವ ಮರಗಳನ್ನು ಕಿತ್ತು ಬೆಂಕಿಯಿAದ ಸುಡಬೇಕಾಗಿರುತ್ತದೆ. ಇದರಿಂದ ರೋಗ ಹರಡುವುದನ್ನು ತಡೆಗಟ್ಟಬಹುದು. ಆಸ್ಟೆçÃಲಿಯ, ಕೀನ್ಯಯನ್ ಮತ್ತು ಮಲೇಶಿಯನ್ ತಳಿಗಳು ತೊಗಟೆಯ ಮೇಲೆ ಗುಳ್ಳೆಗಳಾಗುವ ರೊಗಕ್ಕೆ ಒಳಗಾಗುವುದಿಲ್ಲ.

 

ಕಟಾವು:

ನೀರಾವರಿ ಪ್ರದೇಶಗಳಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಕಟಾವು ಮಾಡುವುದು ಸಾಮಾನ್ಯ ಹಾಗೂ 6 ವರ್ಷಗಳಿಗೊಮ್ಮೆ ಮಳೆಯಾಶ್ರಿತ ಪ್ರದೇಶಗಳಲ್ಲಿ ಕಟಾವು ಮಾಡಬಹುದು. ಆದರೆ ಕಟಾವಿನ ಅವಧಿಯು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆಯಾಗಿದ್ದು, ಮತ್ತು ಬೆಳೆಯುವ ಮೇಲೂ ಸಹ ಅವಲಂಬನೆಯಾಗಿರುವುದು. ತಮಿಳುನಾಡಿನ ತೀರ ಪ್ರದೇಶದ ನೀರಾವರಿ ಪ್ರದೇಶಗಳಲ್ಲಿ ಎರಡೂವರೆ ವರ್ಷಗಳಿಗೊಮ್ಮೆ ಕಟಾವು ಮಾಡಲಾಗುವುದು.

 

ಇಳುವರಿ:

ಮರದ ಉತ್ಪಾದನೆಯು ಆಯಾ ಪ್ರದೇಶಕ್ಕನುಗುಣವಾಗಿ ಬೇರೆ ಬೇರೆಯಾಗಿದ್ದು, ಇದು ಬೆಳೆಯುವ ವಿಧಾನ ಮತ್ತು ಕಟಾವಿನ ವಯಸ್ಸಿಗೆ ಅನುಗುಣವಾಗಿರುತ್ತದೆ. ನೀರಾವರಿಯೊಂದಿಗೆ ಹಾಗೂ ರಸಾಯನಿಕ ಗೊಬ್ಬರದೊಂದಿಗೆ ಬೆಳೆದ ನೆಡುತೋಪುಗಳಲ್ಲಿ 100 ರಿಂದ 150 ಟನ್ ಗಾಳಿಯಿಂದ ಒಣಗಿದ ಮರ (20 ಸೆಂ.ಮೀ. ಸುತ್ತಳತೆಯ) ಪ್ರತಿ ಹೆಕ್ಟೇರ್‌ಗೆ ಹಾಗೂ 4ನೇ ವರ್ಷದಲ್ಲಿ ಕಟಾವು ಮಾಡುವುದರಿಂದ ಪ್ರತಿ ಹೆಕ್ಟೇರ್‌ಗೆ 40 ರಿಂದ 60 ಟನ್ ಇಳುವರಿ ಪಡೆಯಬಹುದು. ಮಳೆಯಾಶ್ರಯಿತದಲ್ಲಿ ಸರಾಸರಿಯಾಗಿ 75 ರಿಂದ 100ಟನ್ ಪ್ರತಿ ಹೆಕ್ಟೇರ್‌ಗೆ 6 ವರ್ಷಗಳ ನಂತರದಲ್ಲಿ ಪಡೆಯಬಹುದು.

 

ಉಪಯೋಗಗಳು:

ಈ ಮರವನ್ನು ಪೋಲ್ಸ್ ಗಳಾಗಿ ಕಟ್ಟಡದ ಕಾಮಗಾರಿಯಲ್ಲಿ ಯತೇಚ್ಛವಾಗಿ ಬಳಸಲಾಗುವುದು ಹಾಗೂ ಉರುವಲಾಗಿಯೂ ಬಳಸಲಾಗುವುದು.

 

ಕೊಯ್ಲು:

ಈ ಮರವನ್ನು ನೆಡುತೋಪು 7 ವರ್ಷ ವಯಸ್ಸಿನಿಂದ 20 ವರ್ಷಗಳವರೆಗೆ, ಕಾಫಿಸ್ ಪದ್ಧತಿಯಲ್ಲಿ ಪಡೆಯಬಹುದು.

 

ಪ್ರಸ್ತುತ ಮಾರುಕಟ್ಟೆ ದರ:

ರೂ. 15,000 – 44,000 ಪ್ರತಿ ಹೆಕ್ಟೇರ್‌ಗೆ ಪ್ರತಿ ವರ್ಷಕ್ಕೆ.