IAFT – INSTITUTION OF AGROFORESTRY FARMERS AND TECHNOLOGISTS

Workshops

IAFT’s agroforestry workshops provide a platform for members to deepen their understanding and gain practical insights into the latest farming techniques and best practices in agroforestry. These workshops bring together experts from various fields, including science, industry, and academia, to share their knowledge and experiences with IAFT’s member community.

Attending these workshops not only helps members acquire new skills, but also inspires them to adopt innovative and sustainable farming methods. With hands-on learning opportunities, IAFT workshops allow members to put their newfound knowledge into practice and help drive positive change in the field of agroforestry.

Keep an eye on this section for updates on IAFT’s upcoming workshops. Members can register for these events by calling the IAFT office or by checking the latest information in this section. In addition, you can also browse videos and photos of previous workshops to get a sense of the interactive and informative experiences offered by IAFT.

BeeKeeping Workshop 16th Nov 22
BeeKeeping Workshop 24th January 2023 by Dr Rajagopal
IAFT Agroforestry Workshop in Association Ramanagar District Administration, District Panchayat, Forest Department, Channapatna Craft Park and IAFT 4th Feb 2023

ದಿನಾಂಕ 04.02.2023ರಂದು ರಾಮನಗರ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಅರಣ್ಯ ಇಲಾಖೆ, ಚನ್ನಪಟ್ಟಣ ಕರಕುಶಲ ಕ್ರಾಫ್ಟ್ ಪಾರ್ಕ್ ಮತ್ತು ಬೆಂಗಳೂರಿನ ಕೃಷಿಅರಣ್ಯ ರೈತರ ಹಾಗು ತಂತ್ರಜ್ಞರ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಯಶಸ್ವಿಯಾಗಿ ನಡೆದ ಕೃಷಿಅರಣ್ಯ ಕಾರ್ಯಾಗಾರದ ಚಿತ್ರ ಗುಚ್ಛ.

ನಿವೃತ್ತ ಅರಣ್ಯಾಧಿಕಾರಿಗಳಾದ ಹಾಗು ಕೃಷಿಅರಣ್ಯ ಸಂಸ್ಥೆಯ ಸದಸ್ಯರಾದ ಡಾ.ಕೆ.ಎನ್.ಮೂರ್ತಿ, ಶ್ರೀ ಅಜಯ್ ಮಿಶ್ರ, ಎ.ಎಂ.ಅಣ್ಣಯ್ಯ, ಶ್ರೀ ಎನ್.ಶಿವರಾಜ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ರಾಷ್ಟ್ರೀಯ ಕೃಷಿಅರಣ್ಯ ನೀತಿ, ಕರ್ನಾಟಕ ಶ್ರೀಗಂಧ ನೀತಿ- 2022, ಕೃಷಿಅರಣ್ಯ ಮರಗಳ ಬೇಸಾಯ, ನಿರ್ವಹಣೆ, ಮಾರುಕಟ್ಟೆ, ಬಿದಿರು ಹಾಗು ಚನ್ನಪಟ್ಟಣ ಬೊಂಬೆ ತಯಾರಿಕೆಗೆ ಸೂಕ್ತ ಮರಗಳು ಇತ್ಯಾದಿ ವಿಷಯಗಳನ್ನು ಮಂಡಿಸಿ ವಿಚಾರ ವಿನಿಮಯ ಮಾಡಿದರು.

ರಾಮನಗರ ಅರೇಹಳ್ಳಿ ಶ್ರೀ ಸಾಲು ಮರದ ನಿಂಗಣ್ಣ ಹಾಗು ಜಿಲ್ಲೆಯ ಪ್ರಗತಿಪರ ಕೃಷಿಅರಣ್ಯ ರೈತರು ಹಾಗು ಗುರುತಿಸಿದ ಮುಂಚೂಣಿ ಅರಣ್ಯ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

ಚನ್ನಪಟ್ಟಣ ಕರಕುಶಲ ಕ್ರಾಫ್ಟ ಪಾರ್ಕ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಶ್ರೀಮತಿ ಶ್ರೀಕಲಾ ಕಡಿದಾಳ್ ಮಂಜಪ್ಪ ಅವರು ವಿಶೇಷ ಆಹ್ವಾನಿತರಾಗಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಶ್ರೀ ರಮೇಶ್. ಟಿ.ಕೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಕ್ರಿಯವಾಗಿ ನಡೆದ ಕೃಷಿಅರಣ್ಯ ಕಾರ್ಯಗಾರ ಮತ್ತು ಸಂವಾದ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ಹೊರಗಿನ ಜಿಲ್ಲೆಯ ರೈತರು ಭಾಗವಹಿಸಿದ್ದು ವಿಶೇಷ.

ರಾಮನಗರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಲಿಂಗರಾಜ ಜಿ. ಸಿ ಹಾಗು ದೇವರಾಜ ವಿ ಮತ್ತು ಅವರ ಸಿಬ್ಬಂದಿವರ್ಗ ಕಾರ್ಯಾಗಾರವನ್ನು ಅಚ್ಚುಕಟ್ಟಾಗಿ ಆಯೋಜಿಸಿ ನಿರ್ವಹಿಸಿದರು.

IAFT workshop in Davangere 28 Feb 2023

ದಿನಾಂಕ 28.02.2023ರಂದು ದಾವಣಗೆರೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ಹಾಗು ಕೃಷಿಅರಣ್ಯ ರೈತರ ಮತ್ತು ತಂತ್ರಜ್ಞರ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಕೃಷಿಅರಣ್ಯ ಕಾರ್ಯಾಗಾರ ಯಶಸ್ವಿಯಾಗಿ ನಡಯಿತು🌻

ದಾವಣಗೆರೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ.ಎ.ಚನ್ನಪ್ಪ ಕಾರ್ಯಾಗಾರ ಉದ್ಘಾಟಿಸಿ ಮಣ್ಣು ನೀರು ಗಾಳಿ ಸಂರಕ್ಷಿಸಿ ಕೃಷಿಅರಣ್ಯ ಬೆಳೆಸಲು ಕರೆಯಿತ್ತರು.🌳

ಎ.ಎಂ.ಅಣ್ಣಯ್ಯ, IFS
ಇವರು ಕರ್ನಾಟಕ ರಾಜ್ಯ ಶ್ರೀಗಂಧ ನೀತಿ 2022ರ ಬಗ್ಗೆ ಹಾಗು IAFT ಕಾರ್ಯದರ್ಶಿ ಹೆಚ್ ಜಿ ಶಿವಾನಂದ ಮೂರ್ತಿಯವರು ಕೃಷಿಅರಣ್ಯದಲ್ಲಿ ಬಿದಿರು ಬೆಳೆಯುವ ಬಗ್ಗೆ ಮಾತನಾಡಿದರು.

ಡಾ.ಕೆ. ಎನ್.ಮೂರ್ತಿ,IFS ಇವರು ಕೃಷಿಅರಣ್ಯ ಮರಮುಟ್ಟುಗಳ ಮಾರುಕಟ್ಟೆ ಕುರಿತು ಮಾತನಾಡಿದರು.🐘

IWST ವಿಜ್ಞಾನಿ ಡಾ.ದಿವಾಕರ್ ಶ್ರೀಗಂಧ ಬೇಸಾಯ ಹಾಗು ಡಾ. ದೊರೈ ಮಹಾಗನಿ ಮರ ಬೇಸಾಯ ಕುರಿತು ಉಪನ್ಯಾಸ ನೀಡಿದರು🦚

ಶ್ರೀಮತಿ ಕೆ.ಜಿ. ಕಲ್ಪನ Deputy Director of Prosecution ಅವರು ಅರಣ್ಯಾಧಿಕಾರಿಗಳು ಹಾಗು ರೈತರು ಕಾನೂನು ಸೇವಾ ಪ್ರಾಧಿಕಾರವು ಬಳಸಿಕೊಳ್ಳಲು ಬಯಸಿದರೆ, ಡಾ ಸರ್ವಜ್ಞ ಸಾಲಿಮಠರು ಮಣ್ಣು ಮತ್ತು ನೀರು ಸಂರಕ್ಷಣೆಗೆ ಒತ್ತು ನೀಡಿದರು.🌻

ಕಾರಿಗನೂರು ಶ್ರೀ ತೇಜಸ್ವಿಯವರು ತಮ್ಮ ವಿಶಿಷ್ಟ ಶೈಲಿಯಲ್ಲಿ ಸಮಾರೋಪ ಭಾಷಣ ಮಾಡಿದರು.🧚‍♀️

ಬಳ್ಳಾರಿ ವೃತ್ತದ CCF ಶ್ರೀ ಟಿ. ಹೀರಾಲಾಲ್,IFS, ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ರೈತರ ಅಹವಾಲು ಸ್ವೀಕರಿಸಿ ಸೂಕ್ತ ಉತ್ತರನ್ನು ನೀಡಿದರು💃

ಅರಣ್ಯ ರಕ್ಷಣೆಗೆ ಶ್ರಮಿಸಿದ ಅರಣ್ಯ ಸಿಬ್ಬಂದಿಗೆ ಹಾಗು ಕೃಷಿಅರಣ್ಯ ಸಾಧಕ ರೈತರನ್ನು ಸನ್ಮಾನಿಸಲಾಯಿತು.💃🧚‍♀️

ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ದಾವಣಗೆರೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಎನ್ ಹೆಚ್ ಜಗನ್ನಾಥ್ ಮತ್ತು ಸಿಬ್ಬಂದಿಗಳು ಆಯೋಜಿಸಿ ಅಚ್ಚುಕಟ್ಟಾಗಿ ನಿರ್ವಹಿಸಿದರು.🙏💐🙏

150ಕ್ಕೂ ಹೆಚ್ಚು ರೈತರು ಹಾಗು ಅರಣ್ಯ ಅಧಿಕಾರಿ ಸಿಬ್ಬಂದಿಗಳು ಸಂವಾದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಎಂಟು ಗಂಟೆಗಳ ಕಾರ್ಯಾಗಾರವನ್ನು ಯಶಸ್ವಿಗೊಳಿಸಿದರು🍒