ಕೃಷಿಅರಣ್ಯ ರೈತರ ಮತ್ತು ತಂತ್ರಜ್ಞರ ಸಂಸ್ಥೆ
Menu
IAFT – INSTITUTION OF AGROFORESTRY FARMERS AND TECHNOLOGISTS
ಬೀಜ ಸಂಗ್ರಹ:
ತಮಿಳುನಾಡಿನ ಪೂರ್ವ ಕರಾವಳಿಯ ಕಡಲೂರು, ಚೆನೈ ನಾಗೈ ಜಿಲ್ಲೆಗಳಲ್ಲಿ ಹಣ್ಣುಗಳ ಸಂಗ್ರಹವನ್ನು ಜುಲೈನಿಂದ ಸೆಪ್ಟೆಂಬರ್ ತಿಂಗಳವರೆಗೆ ಮಾಡಲಾಗುವುದು. ಕನ್ಯಾಕುಮಾರಿ ಮತ್ತು ತಿರುನೆಲ್ವೇಲಿ ಜಿಲ್ಲೆಯಲ್ಲಿ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಬೀಜಗಳನ್ನು ಸಂಗ್ರಹಿಸಲಾಗುವುದು. ಕೇರಳ ರಾಜ್ಯದ ಪಶ್ಚಿಮ ಕರಾವಳಿಯಲ್ಲಿ ಬಲಿತ ಹಣ್ಣುಗಳನ್ನು ಜುಲೈನಿಂದ ಸೆಪ್ಟೆಂಬರ್ ವರೆಗೆ ಸಂಗ್ರಹಿಸಲಾಗುವುದು. ಅಂದರೆ ಹೊರಗಿನ ಹಣ್ಣುಗಳ ಬಣ್ಣವು ಹಳದಿಯಾಗಿರುವಾಗ ರೆಂಬೆಗಳಿAದ ಸಂಗ್ರಹಿಸಿ, ಹಣ್ಣುಗಳನ್ನು ಬಿಚ್ಚಿ ಬೀಜಗಳ್ನು ಹೊರತೆಗೆದು ಸಸ್ಯಕ್ಷೇತ್ರಗಳಲ್ಲಿ ಸಸಿ ಬೆಳೆಸಲು ಬಳಸಲಾಗುವುದು.
ಬೀಜಗಳ ಪರಿಷ್ಕರಣೆ ಮತ್ತು ಬೀಜೋಪಚಾರ:
ಇದಕ್ಕೆ ವಿಶೇಷವಾದ ಬೀಜೋಪಚಾರವಿರುವುದಿಲ್ಲ.
ಸಸ್ಯಕ್ಷೇತ್ರ:
ಹೊಸ ಹಣ್ಣುಗಳಿಂದ ಪಡೆದ ಬೀಜಗಳು 60 ದಿವಸಗಳಲ್ಲಿ ಶೇ.95 ರಷ್ಟು ಮೊಳಕೆಯೊಡೆಯುತ್ತವೆ. ಇವುಗಳನ್ನು ಮಡಿಗಳಲ್ಲಿ ಹಾಕಿ ಹಸಿರು ಬಣ್ಣದ ಬಲೆಯಿಂದ ನೆರಳನ್ನು ನಿರ್ಮಿಸಬೇಕಿದೆ. ನಿರಂತರವಾಗಿ ನೀರನ್ನು ಕೊಡಬೇಕು. ಮೊಳಕೆಯೊಡೆದ 30 ದಿವಸಗಳಲ್ಲಿ ಸಸಿಗಳನ್ನು ಮಡಿಗಳಿಂದ ಹೊರತೆಗೆದು 12X25 ಸೆಂ.ಮೀ. ಅಳತೆಯ ಪಾಲಿಬ್ಯಾಗ್ ಗಳಲ್ಲಿ ನಾಟಿ ಮಾಡಬೇಕು. ಸಸಿಗಳನ್ನು ಮೂರು ತಿಂಗಳವರೆಗೆ ಬೇರೆಡೆಗೆ ನಾಟಿಮಾಡುವುದಕ್ಕೂ ಮುನ್ನ ಗಟ್ಟಿಗೊಳಿಸಬೇಕು.
ನೆಡುತೋಪುಗಳ ನಿರ್ವಹಣೆ:
ಇವುಗಳು ಹೆಚ್ಚು ಉಷ್ಣತೆಯಲ್ಲಿರುವ ತೇವಾಂಶಭರಿತ ಮತ್ತು ಸಾಮಾನ್ಯ ಸಂದರ್ಭಗಳಲ್ಲಿ ಬೆಳೆಯುವುದು. ಈ ಮರಗಳು ಸಮುದ್ರ ಮಟ್ಟದಿಂದ ಹೆಚ್ಚಿನ ಎತ್ತರದ ಪ್ರದೇಶಗಳು, ತಂಪಾದ ಪ್ರದೇಶಗಳು ಮತ್ತು ತೀರ ಒಣ ಪ್ರದೇಶಗಳಿಗೆ ಹೊಂದಿಕೊಳ್ಳುವುದಿಲ್ಲ. ಸಾಮಾನ್ಯವಾಗಿ 1000 ಮಿ.ಮೀ. ಮಳೆ ಬೀಳುವ, ಬೇಸಿಗೆ, ಚಳಿಗಾಲ ಅಥವಾ ಒಂದೇ ಸಮನೆ ಮಳೆ ಬೀಳುವ ಕಡೆ ಚೆನ್ನಾಗಿ ಬೆಳೆಯುತ್ತದೆ. ಮಳೆಯಿಲ್ಲದ, ಒಣ ಸಮಯದಲ್ಲಿ ಉಷ್ಣತೆಯು 18-330 ಸೆಂಟಿಗ್ರೇಡ್ ಮತ್ತು ಕನಿಷ್ಠ ಉಷ್ಣತೆ 12-170 ಸೆಂಟಿಗ್ರೇಡ್‌ಗಳಲ್ಲಿ ಉತ್ತಮವಾಗಿ ಬೆಳೆಯುವುದು. ಬಹಳ ವಿಧದ ಮಣ್ಣುಗಳಲ್ಲಿ ಬೆಳೆಯಬಹುದು. ಆದರೆ ಮರಳು ಮಣ್ಣು ಹಾಗೂ ಹೆಚ್ಚು ಬಸಿಯುವಿಕೆಯಿಂದ ಕೂಡಿದ ತೀರ ಪ್ರದೇಶಗಳಲ್ಲಿ ಜೇಡಿ ಮಣ್ಣು, ಕ್ಯಾಲಿಕೇರಿಯಸ್ ಮತ್ತು ಕಲ್ಲು ಬಂಡೆಗಳಿರುವೆಡೆ ಬೆಳೆಯುತ್ತದೆ. ಮಣ್ಣಿನ ಹೊರಗಿನ ಪದರವು ಒಣಗಿರಬೇಕು. ಆದರೆ ಅಂತರ್ಜಲದ ಮಟ್ಟವು ಹೆಚ್ಚಿರುವ ಕಡೆ, ಆದರೆ ಇದು ಬ್ರಾಕಿಷ್ ನೀರನ್ನು ಇಷ್ಟಪಡುತ್ತದೆ. ಇದು ನದಿಗಳ ಪಾತ್ರದಲ್ಲಿ ಎತ್ತರದ ಪ್ರದೇಶಗಳವರೆಗೂ ಬೆಳೆಯಬಲ್ಲದು. ಈ ಮರಕ್ಕೆ ಹೆಚ್ಚಿನ ಸೂರ್ಯನ ಬೆಳಕು ಮತ್ತು ಪೂರ್ಣ ಕಾಲ ಸೂರ್ಯನನ್ನು ಇಷ್ಟ ಪಡುವುದು. ಹಾಗೂ ಕಡಿಮೆ ನೆರಳನ್ನು ತಡೆದುಕೊಳ್ಳುವುದು. ಇದು ಬೆಂಕಿಗೆ ಹಾಗೂ ಮಂಜಿಗೆ ಸೂಕ್ಷ್ಮತೆಯನ್ನು ಹೊಂದಿದೆ. ಆಗಿಂದಾಗ್ಯೆ ತೀರ ಪ್ರದೇಶದಲ್ಲಿ ಉಂಟಾಗುವ ನೀರಿನ ಸಂಗ್ರಹವನ್ನು ತಡೆದುಕೊಳ್ಳುವುದು.
ಎರಡು ವರ್ಷಗಳಿಗೆ ನಾಟಿ ಮಾಡಿದ ಗಿಡಗಳಿಗೆ ನೀರು ಹಾಯಿಸಬೇಕಿದೆ. ಹನಿ ನೀರಾವರಿಯಿದ್ದರೆ ಕ್ಷೇಮಕರ. ಆಗಿಂದಾಗ್ಯೆ ಗಿಡಗಳು ಸ್ಥಿರವಾಗಿ ಬೆಳೆಯುವವರೆಗೂ ಕಳೆ ತೆಗೆಯಬೇಕು. ಕನಿಷ್ಟ 6 ತಿಂಗಳಿಗೊಮ್ಮೆ ನಾಟಿ ಮಾಡಿದ ಮೂರು ತಿಂಗಳಲ್ಲಿ ಗಿಡಗಳಿಗೆ 250 ಗ್ರಾಂ. ಬೇವಿನ ಹಿಂಡಿ, 500 ಗ್ರಾಂ. ಕೊಟ್ಟಿಗೆ ಗೊಬ್ಬರವನ್ನು ಪ್ರತಿ ಗಿಡಕ್ಕೆ ನೀಡಬೇಕು. ಇದನ್ನು ನಂತರದಲ್ಲಿ ವರ್ಷಕ್ಕೆ ಮುಂದುವರೆಸುವುದು. ಗೆದ್ದಲು ಹುಳುಗಳ ನಿಯಂತ್ರಣಕ್ಕೆ 500 ಮಿ.ಲೀ. (0.2%) ಕ್ಲೋರೋಫೈರಿಫಾಸ್ ಕೀಟನಾಶಕವನ್ನು ಗಿಡಗಳ ಸುತ್ತಲೂ ಹಾಕಬೇಕು. ಎರಡು ವರ್ಷದ ಅಂತ್ಯದಲ್ಲಿ ರೆಂಬೆಗಳನ್ನು ಸವರುವುದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ.
ಮಾದರಿ ಅಂತರ:
ಮಾದರಿ ಅಂತರವು 4X4 ಮೀ ಹಾಗೂ 2’ X ೨’ ಗುಂಡಿಗಳು
ಕೀಟಗಳು ಮತ್ತು ರೋಗಗಳ ನಿರ್ವಹಣೆ:
ಹೆಚ್ಚಿನ ಯಾವುದೇ ಬಾದೆಗಳಿರುವುದಿಲ್ಲ.
ಕಟಾವು:
10ರಿಂದ 12 ವರ್ಷಗಳು
ಇಳುವರಿ:
ಐದು ವರ್ಷ ಬೆಳೆದ ಮರಗಳಿಂದ 12 ಕೆ.ಜಿ. ಕಾಯಿಗಳನ್ನು ಹಾಗೂ 20 ವರ್ಷದ ಮರಗಳಿಂದ 100 ಕೆ.ಜಿ. ಕಾಯಿಗಳನ್ನು ಪ್ರತಿ ಮರದಿಂದ ಪಡೆಯಬಹುದು. ಹಣ್ಣು ಬಿಡಲು 4 ರಿಂದ 5 ವರ್ಷಗಳಿಂದಲೇ ಪ್ರಾರಂಭವಾಗುತ್ತದೆ. ಆದರೆ ಐದು ವರ್ಷದ ಮರಗಳಿಂದ 3 ಕೆ.ಜಿ. ಬೀಜಗಳನ್ನು, ಇದರಿಂದ 2.1 ಲೀಟರ್ ಎಣ್ಣೆ ಪ್ರತಿ ಮರದಿಂದ ದೊರೆಯುವುದು. ಐದು ವರ್ಷದ ನೆಡುತೋಪಿನಲ್ಲಿ 25 ಮರಗಳಿದ್ದಲ್ಲಿ 75 ಲೀಟರ್ ಎಣ್ಣೆ ದೊರೆಯುವುದು. ಆದರೆ ಅತ್ಯುತ್ತಮವಾದ ತಳಿಗಳನ್ನೇ ನೆಡುತೋಪುಗಳಲ್ಲಿ ಬೆಳೆಸುವುದರಿಂದ 0.25 ಎಕರೆಯಲ್ಲಿಯೇ 75 ಲೀಟರ್ ಎಣ್ಣೆ ಪಡೆಯಲು ಸಾಧ್ಯ. ಒಂದು ಎಕರೆಯಲ್ಲಿ 4X4 ಮೀ ಅಂತರದಲ್ಲಿ ೨೫೦ ಮರಗಳನ್ನು ಬೆಳೆಸಬಹುದು.
ಉಪಯೋಗಗಳು:
ಇದೊಂದು ಬೀಜಗಳಿಂದ ಎಣ್ಣೆ ನೀಡುವ ಅತ್ಯುತ್ತಮವಾದ ಮರ. ತೀರ ಪ್ರದೇಶದಲ್ಲಿ ಕ್ಯಾಸೂರಿನ (ಗಾಳಿ) ಮರಕ್ಕೆ ಬದಲಾಗಿ ಉತ್ತಮವಾದ ಗಾಳಿ ತಡೆಯೆಂದು ಬೆಳೆಸಬಹುದು ಹಾಗೂ ಮಣ್ಣನ್ನು ಭದ್ರಗೊಳಿಸಲು ಮತ್ತು ಮಣ್ಣಿನ ಸವಕಳಿಯನ್ನು ತಡೆಯಲು ಯೋಗ್ಯವಾದ ಮರ. ಇದನ್ನು ಕೃಷಿಅರಣ್ಯದಲ್ಲಿ ಬೆಳೆಸಲು ಯೋಗ್ಯವಾಗಿದ್ದು, ಅಕೇಶಿಯ ನೆಡುತೋಪುಗಳಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಬಹುದು.
ಇದರ ಬೀಜಗಳಲ್ಲಿ ಶೇ.50-70 ರಷ್ಟು ಎಣ್ಣೆ ಇಳುವರಿಯಿದ್ದು, ಇದನ್ನು ಡೀಸೆಲ್ ಎಂಜಿನ್‌ಗಳಲ್ಲಿ ನೇರವಾಗಿ ಯಾವುದೇ ಇನ್ನಿತರೆ ಪ್ರಕ್ರಿಯೆಗೊಳಪಡಿಸದೇ ಬಳಸಬಹುದು. ಇದನ್ನು ಟ್ರಾನ್ಸ್-ಎಸ್ಟರಿಫೈಡ್ ನಂತರ ಎಣ್ಣೆಯನ್ನು ಜೈವಿಕ ಇಂಧನವಾಗಿ ಸಹ ಉಪಯೋಗಿಸಬಹುದು. ಇದರ ಬೀಜದ ಎಣ್ಣೆಯನ್ನು ‘ತಮನು’ ಎಣ್ಣೆಯೆಂದು ಕರೆಯಲಾಗುವುದು. ಈ ಎಣ್ಣೆಯನ್ನು ಔಷಧಿಯಾಗಿ ಚರ್ಮ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ ಹಾಗೂ ಇದಕ್ಕೆ ಅತ್ಯುತ್ತಮವಾದ ಬೆಲೆ ಅಂದರೆ 30 ಮಿ.ಲೀ.ಗೆ 4 ರಿಂದ 40 ಡಾಲರ್ ವರೆಗೆ ಅಂತರರಾಷ್ಟಿçÃಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಇದರಿಂದ ಇತ್ತೀಚೆಗೆ ಆವಿಷ್ಕರಿಸಿದ ಗುಣಗಳಿಂದಾಗಿ ಹೆಚ್.ಐ.ವಿ. ಮತ್ತು ಕ್ಯಾನ್ಸ್ç ರೋಗದ ಚಿಕಿತ್ಸೆಯಲ್ಲಿ ಸಹ ಬಳಸಲಾಗುತ್ತಿದೆ. ಸುರಹೊನ್ನೆ ಮರ ಅತ್ಯಂತ ಬಹುಪಯೋಗಿ ಮರಗಳಲ್ಲಿ ಒಂದಾಗಿದೆ. ಈ ಮರದ ಟಿಂಬರ್ ಅನ್ನು ‘ಬಿಂಟಗರ್’ ಎಂದು, ಇದೊಂದು ಅತ್ಯುತ್ತಮವಾದ ಗುಣಮಟ್ಟದ್ದೆಂದು ಏಷ್ಯಾದ ದಕ್ಷಿಣ-ಪೂರ್ವ ಭಾಗದ ದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಇದರ ಮರವನ್ನು ಕೆತ್ತನೆ ಕೆಲಸಕ್ಕೆ, ಪೀಠೋಪಕರಣಗಳ ತಯಾರಿಕೆಯಲ್ಲಿ, ದೋಣಿಗಳ ನಿರ್ಮಾಣದಲ್ಲಿ ಮತ್ತು ನೆಲಹಾಸಿಗಾಗಿ ಬಳಸಲಾಗುತ್ತಿದೆ. ಇದೊಂದು ಬಾಳಿಕೆ ಬರುವ ಬಹುಪಯೋಗಿ ಟಿಂಬರ್. (ಡೆನ್ಸಿಟಿ 560-960 ಕೆ.ಜಿ/ಘನ ಮೀಟರ್‌ಗೆ)
ಆರ್ಥಿಕತೆ:
ನಾಲ್ಕು ಕೆ.ಜಿ. ಕಾಯಿಗಳಿಂದ ಒಂದು ಕೆ.ಜಿ. ಬೀಜ ದೊರೆಯುತ್ತದೆ. ಪ್ರತಿ ಕೆ.ಜಿ.ಗೆ ರೂ.30/-. ಎಣ್ಣೆಗಾಗಿ ಸಂಗ್ರಹಣೆಯ ವೆಚ್ಚ ರೂ.5/- ಪ್ರತಿ ಕೆ.ಜಿ.ಗೆ. ಹೀಗಾಗಿ ಪ್ರತಿ ಕೆ.ಜಿ.ಗೆ ರೂ.25/- ನಿವ್ವಳ ಬೆಲೆ ದೊರೆಯುವುದು. ಒಂದು ಕೆ.ಜಿ. ಬೀಜಗಳಿಂದ 700 ಮಿ.ಲೀ. ಎಣ್ಣೆ ದೊರೆಯುವುದು. ಇದಕ್ಕೆ ರೂ.39/- ಹಾಗೂ ಎಣ್ಣೆಕೇಕ್ ಗೆ ಅಂದಾಜು 300 ಗ್ರಾಂ.ಗೆ ರೂ.8/- ದೊರೆಯುವುದು. ಒಂದು ಎಕರೆಯಲ್ಲಿಯ 250 ಮರಗಳಿಂದ ಅಂದಾಜು 3000 ಕೆ.ಜಿ. ಕಾಯಿ ದೊರೆಯುವುದು. ಅಂದಾಜಿನ ಪ್ರಕಾರ ಪ್ರತಿ ಎಕರೆಯಲ್ಲಿಯ 5 ವರ್ಷದ ನೆಡುತೋಪಿನಿಂದ ರೂ.25,250/- ಹಾಗೂ ನೆಡುತೋಪುಗಳ ವಯಸ್ಸು ಹೆಚ್ಚಿದಂತೆ, ಆದಾಯ ಸಹ ಹೆಚ್ಚುವುದು.
ಪ್ರಸ್ತುತ ಮಾರುಕಟ್ಟೆ ದರ:
ಪ್ರತಿ ಕೆ.ಜಿ. ಎಣ್ಣೆಗೆ ರೂ.55/- ಹಾಗೂ ಪ್ರತಿ ಕೆ.ಜಿ. ಎಣ್ಣೆ ರೇಕ್‌ಗೆ ರೂ.20/-.