ಕೃಷಿಅರಣ್ಯ ರೈತರ ಮತ್ತು ತಂತ್ರಜ್ಞರ ಸಂಸ್ಥೆ
Menu
IAFT – INSTITUTION OF AGROFORESTRY FARMERS AND TECHNOLOGISTS
ಬೀಜಗಳ ಸಂಗ್ರಹಣೆ:
ಹಣ್ಣುಗಳು ನಾಟಿ ಮಾಡಿದ 7 ವರ್ಷಗಳ ನಂತರದಲ್ಲಿ ಪ್ರಾರಂಭಿಸುತ್ತವೆ. ಹಣ್ಣುಗಳನ್ನು ಮಾರ್ಚ್ ನಿಂದ ಜೂನ್ ವರೆಗೆ ಬಲಿತ ಹಣ್ಣುಗಳಿಂದ ಪಡೆಯಬಹುದು.
ಬೀಜಗಳ ಸಂಸ್ಕರಣೆ ಮತ್ತು ಬೀಜೋಪಚಾರ:
ಯಾವುದೇ ತರಹದ ಬೀಜಗಳ ಸಂಸ್ಕರಣೆಯಾಗಲಿ ಬೀಜೋಪಚಾರವಾಗಲಿ ಅವಶ್ಯಕತೆಯಿರುವುದಿಲ್ಲ. ಹಣ್ಣುಗಳನ್ನು ಕೊಯ್ದ ತಕ್ಷಣವೇ ಬೀಜಗಳನ್ನು ಮೊಳಕೆ ಮಾಡಬಹುದು. ಇಲ್ಲವಾದಲ್ಲಿ ಅವುಗಳು ಮೊಳಕೆಯೊಡೆಯುವುದಿಲ್ಲ. ಅಂದರೆ ಮೊಳಕೆಯೊಡೆಯುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ.
ಸಸ್ಯಕ್ಷೇತ್ರ:
ಹಲಸನ್ನು ಸಾಮಾನ್ಯವಾಗಿ ಬೀಜಗಳಿಂದ ಬೆಳೆಯಲಾಗುವುದು. ಬೀಜಗಳನ್ನು ಹಣ್ಣುಗಳಿಂದ ಪ್ರತ್ಯೇಕ ಪಡಿಸಿದ ತಕ್ಷಣವೇ ಬೀಜದ ಸುತ್ತಲೂ ಇರುವ ಚೀಲಕ್ಕೆ ತೊಂದರೆಯಾಗದAತೆ ಉಪಯೋಗಿಸಬೇಕು. ಬೀಜಗಳನ್ನು ಎನ್ಎಎ ಮಿಶ್ರಣ (25 ಗ್ರಾಂ/ಲೀ) ದಲ್ಲಿ 24 ಗಂಟೆಗಳವರೆಗೆ ನೆನೆಸುವುದರಿಂದ ಮೊಳಕೆಯೊಡೆಯುವ ಪ್ರಮಾಣವನ್ನು ಮತ್ತು ಬೆಳವಣಿಗೆಯನ್ನು ಹೆಚ್ಚಿಸಬಹುದು.
ಏರ್ ಲೇಯರಿಂಗ್:
ತಾಯಿಯ ತರಹದ ಮರಗಳನ್ನು ಬೆಳೆಯಲು ಏರ್ ಲೇಯರಿಂಗ್ ಒಂದು ಅತ್ಯುತ್ತಮವಾದ ಪದ್ಧತಿ. ಏರ್ ಲೇಯರಿಂಗ್ ಅನ್ನು ಒಂದು ವರ್ಷದ ರೆಂಬೆಯಲ್ಲಿ ಮಾಡಿದ್ದಲ್ಲಿ ಉತ್ತಮವಾದ ಯಶಸ್ಸನ್ನು ಐಬಿಎ ದ್ರಾವಣದಿಂದ ಉಪಚಾರ ಮಾಡುವುದರಿಂದ ಪಡೆಯಲು ಸಾಧ್ಯ.
ಸಾಫ್ಟ್ ವುಡ್ ಗ್ರಾಪ್ಟಿಂಗ್:
ಕ್ಲೆಫ್ಟ್ ಗ್ರಾಪ್ಟಿಂಟಗ ನಿಂದ ಹೆಚ್ಚಿನ ಪ್ರಮಾಣದ ಸಸಿಗಳನ್ನು ಬೆಳೆಯಲು ಸಾಧ್ಯ. ಇದನ್ನು ಜುಲೈ-ಆಗಸ್ಟ್ ತಿಂಗಳಲ್ಲಿ ನಾಲ್ಕು ತಿಂಗಳು ಬೆಳೆದಂತಹ ಗಿಡಗಳಿಗೆ ಮಾಡುವುದರಲ್ಲಿ ಹೆಚ್ಚಿನ ಯಶಸ್ಸು ಗಳಿಸಬಹುದು.
ನೆಡುತೋಪುಗಳ ನಿರ್ವಹಣೆ:
ಆಳವಾದ ಮತ್ತು ಚೆನ್ನಾಗಿ ನೀರು ಬಸಿಯುವ ಮಣ್ಣು ಹಲಸಿನ ಬೆಳವಣಿಗೆಗೆ ಉತ್ತಮವಾಗಿರುವುದು. ಮಣ್ಣಿನ ರಸಸಾರ 5.5 ಗಿಡಗಳ ನಾಟಿ ಸಮಯದಲ್ಲಿರುವುದು ಕ್ಷೇಮಕರ. ಇಲ್ಲವಾದಲ್ಲಿ ಮಣ್ಣನ್ನು ಶೇ.1 ರ ಅಲ್ಯೂಮಿನಿಯಮ್ ಫಾಸ್ಪೇಟ್ನ್ನು ನಾಟಿ ಮಾಡಲಿರುವ ಗುಂಡಿಯಲ್ಲಿ ಹಾಕಬೇಕು. ಇದರಿಂದ ಮಣ್ಣಿನ ರಸಸಾರವನ್ನು ಕಡಿಮೆಗೊಳಿಸಬಹುದು. ಹಲಸಿನ ಬೆಳೆಯು ಮೈದಾನ ಪ್ರದೇಶದಲ್ಲಿ 1200 ಮೀ ಸಮುದ್ರ ಮಟ್ಟದಿಂದ ಎತ್ತರವಿರುವೆಡೆ ಚೆನ್ನಾಗಿ ಬೆಳೆಯುವುದು.
ಗುಂಡಿಗಳನ್ನು 1 ಮೀ X 1 ಮೀ ಅಳತೆಯಲ್ಲಿ ತೆಗೆದು, ಮೇಲಿನ ಮಣ್ಣನ್ನು ಗುಂಡಿಯಲ್ಲಿ ತುಂಬಿಸಬೇಕು. ಇದರ ಜೊತೆಗೆ ೧೦ ಕೆಜಿ ಕೊಟ್ಟಿಗೆ ಗೊಬ್ಬರ ಮತ್ತು 1 ಕೆಜಿ ಬೇವಿನ ಹಿಂಡಿಯನ್ನು ಸೇರಿಸಬೇಕು. ಇದನ್ನು ಜೂನ್ ನಿಂದ ಡಿಸೆಂಬರ್ ತಿಂಗಳೊಳಗೆ 10 X 10 ಮೀ ಅಂತರದಲ್ಲಿ ಬೆಳೆಯಬಹುದು.
ನಾಟಿ ಮಾಡಿದಂದಿನಿAದ ಗಿಡಗಳು ಚೆನ್ನಾಗಿ ಬೆಳೆಯಲು ಪ್ರಾರಂಭವಾಗುವವರೆಗೆ ವಾರಕ್ಕೆ ಒಂದು ಬಾರಿ ನೀರು ಹಾಯಿಸಬೇಕು.
ಗೊಬ್ಬರ ಮತ್ತು ರಸಗೊಬ್ಬರವನ್ನು ಎರಡು ಕಂತಿನಲ್ಲಿ ಅಂದರೆ ಮೇ-ಜೂನ್ ಮತ್ತು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಹಾಕಬೇಕು.
ಹಲಸಿನ ಮರಗಳು ಫಲಬಿಡುವವರೆಗೆ ಮಧ್ಯದ ಜಾಗದಲ್ಲಿ ತರಕಾರಿ ಅಂದರೆ ಮೂಲಂಗಿ, ಬದನೆ, ಮೆಣಸಿನಕಾಯಿ, ಗೆಡ್ಡೆಕೋಸು ಮುಂತಾದವುಗಳನ್ನು ನೀರಾವರಿಯೊಂದಿಗೆ ಬೆಳೆಯುವುದರಿಂದ ಮಧ್ಯಂತರ ಆದಾಯವನ್ನು ಪಡೆಯಲು ಸಾಧ್ಯ. ಭಾರತದ ಈಶಾನ್ಯ ಭಾಗದಲ್ಲಿ ಹಲಸನ್ನು ಮಳೆಯಾಶ್ರಿತದಲ್ಲಿ ಬೆಳೆಯಲಾಗುವುದು. ಎಳೆ ವಯಸ್ಸಿನ ಗಿಡಗಳು ಬರಗಾಲವನ್ನು ತಡೆದುಕೊಳ್ಳುವುದಿಲ್ಲ. ಇವುಗಳ ಉತ್ತಮ ಬೆಳವಣಿಗಗೆ ಬೇಸಿಗೆ ಮತ್ತು ಚಳಿಗಾಲದ ಸಮಯದಲ್ಲಿ ನೀರು ಕೊಡುವುದು ಅವಶ್ಯಕವಾಗಿದೆ.
ಶಿಫಾರಸ್ಸು ಮಾಡಿದ ಅಂತರ:
ಗಿಡಗಳನ್ನು ಚೌಕಾಕಾರದಲ್ಲಿ ನೆಡಲಾಗುವುದು ಹಾಗೂ ಅಂತರ 10 ಮೀ X 10 ಮೀ ದಲ್ಲಿ ಜೂನ್-ಆಗಸ್ಟ್ ವರೆಗೆ ನಾಟಿಮಾಡಲು ಸೂಕ್ತ ಸಮಯ.
ಕೀಟಗಳು ಮತ್ತು ರೋಗಗಳ ನಿರ್ವಹಣೆ: ಹಣ್ಣುಕೊರಕ ಕೀಟಗಳ ಬಾದೆ ನಿರ್ವಹಣೆಗೆ ಕಾರ್ಬರಿಲ್ 50 wp ಯನ್ನು 2 ಗ್ರಾಂ/ಲೀ. ಗೆ ಹಾಕಿ ಬಳಸಬೇಕು.
ಸ್ಪಿಟರ್ ಬಗ್:
ಮೀಥೈಲ್ ಫ್ಯಾರಾಥಿಯಾನ್ 2D ಅಥವಾ ಮೀಥೈಲ್ ಡೈಮಟಾನ್ 25 EC ಅನ್ನು ಒಂದು ಲೀಟರ್ ನೀರಿಗೆ 2 ml ಅಥವಾ ಫಾಸ್ಪೋಮಿಡಾನ್ 40 ml ಲೀಟರ್ಗೆ ೨ ml ಅಥವಾ ಮೀಥೈಲ್ ಪ್ಯಾರಾಥಿಯಾನ್ ಡಸ್ಟ್ 2D ಅಥವಾ ಕ್ಪಿನಾಲ್ ಫಾಸ್ ಡಸ್ಟ್ 1.5D.
ರೈಜೋಫಸ್ ರಾಟ್:
1% ಬೋರ್ಡಾನ್ಸ್ ಮಿಶ್ರಣವನ್ನು ಅಥವಾ ಕಾಪರ್ ಆಕ್ಸಿಕ್ಲೋರೈಡ ಮಿಶ್ರಣವನ್ನು ಲೀಟರ್ಗೆ 25 ml ಅಥವಾ ಸಿಂಪಡಿಸಬೇಕು. 3 ಸಿಂಪಡಣೆಯನ್ನು ಕಡ್ಡಾಯವಾಗಿ 15 ದಿನಗಳಿಗೊಮ್ಮೆ ಕೊಡಬೇಕು.
ಇಳುವರಿ:
30 ರಿಂದ 40 ಟನ್ ಹಣ್ಣನ್ನು ಒಂದು ಹೆಕ್ಟೇರ್ಗೆ ನಿರೀಕ್ಷಿಸಬಹುದು. ಗಿಡಗಳನ್ನು ನಾಟಿ ಮಾಡಿದ 6-8 ವರ್ಷಗಳಲ್ಲಿ ಹಣ್ಣು ಬಿಡುವುದು. ಹಣ್ಣುಗಳು ಬೇಸಿಗೆಯ ಕೊನೆಯಲ್ಲಿ ಅಂದರೆ ಜೂನ್ ತಿಂಗಳಿನಲ್ಲಿ ಇಳುವರಿಯು ವಿವಿಧ ಹವಾಮಾನದಲ್ಲಿ ಬೇರೆ ಬೇರೆಯದೇ ಆಗಿರುತ್ತದೆ. ಕೆಲವು ಮರಗಳಲ್ಲಿ ಕಡಿಮೆ ಸಂಖ್ಯೆಯಿAದ 250 – 300 ಹಣ್ಣುಗಳನ್ನು 8-10 ಕೆಜಿ ಯಿಂದ 50 ಕೆಜಿ ತೂಕದವರೆಗೆ ದೊರೆಯುತ್ತವೆ.
ಉಪಯೋಗ:
ಹಲಸಿನ ಹಣ್ಣುಗಳನ್ನು ಅಡಿಗೆ ತಯಾರಿಕೆಯಲ್ಲಿ ಹಾಗೂ ತಿನ್ನಲು ಹಣ್ಣಾಗಿ ಉಪಯೋಗಿಸುವರು. ಹೆಚ್ಚಿನದಾಗಿ ಅಡಿಗೆ ಮಾಡಲು ಬಳಸುವರು. ಎಳೆಯ ಹಣ್ಣುಗಳು ಮಾರುಕಟ್ಟೆಯಲ್ಲಿ ಬೇಸಿಗೆ ಪ್ರಾರಂಭದಿAದ ಬೇಸಿಗೆ ಅಂತ್ಯದವರೆಗೆ ತರಕಾರಿಯಾಗಿ ದೊರೆಯುತ್ತವೆ. ಈ ಸಮಯದಲ್ಲಿ ಸಾಮಾನ್ಯ ತರಕಾರಿಗಳು ಕಡಿಮೆ ಪ್ರಮಾಣದಲ್ಲಿ ಹಾಗೂ ಹೆಚ್ಚಿನ ಬೆಲೆಯಲ್ಲಿ ದೊರೆಯುವುದರಿಂದ, ಆ ಸಂದರ್ಭದಲ್ಲಿ ಹಲಸಿನಕಾಯಿಗೆ ಉತ್ತಮವಾದ ಬೆಲೆ ದೊರೆಯುತ್ತದೆ. ಇದರ ಹಣ್ಣುಗಳನ್ನು ಉಪ್ಪಿನ ಕಾಯಿ ತಯಾರಿಕೆಯಲ್ಲಿ, ಒಣಗಿಸಿದ ತೊಳೆಗಳಾಗಿ, ಹಪ್ಪಳವಾಗಿ, ತಂಪು ಪಾನೀಯಗಳ ತಯಾರಿಕೆಯಲ್ಲಿ ಮತ್ತು ಸ್ಕ್ವಾಶ್ ತಯಾರಿಕೆಯಲ್ಲಿ ಮತ್ತು ಕ್ಯಾನಿಂಗ್ ಸಹ ಮಾಡಲಾಗುವುದು.
ಇದರ ರಿಂಡ್ (ದಪ್ಪನೆಯ ಭಾಗ)ನಲ್ಲಿ ಅತೀ ಹೆಚ್ಚಾಗಿ ಪ್ರೋಟೀನ್ ಇರುವುದರಿಂದ ಇದನ್ನು ಜೆಲ್ಲಿ ತಯಾರಿಕೆಯಲ್ಲಿ ಬಳಸುವರು. ಈ ಹಣ್ಣಿನ ಹೊರಗಿನ ತೊಗಟೆ ಮತ್ತು ಎಲೆಗಳು ಉತ್ತಮವಾದ ಪಶು ಆಹಾರವಾಗಿದೆ.
ಹಲಸಿನ ಮರದ ಚೌಬೀನೆ (ಟಿಂಬರ್) ಪೀಠೋಪಕರಣಗಳ ತಯಾರಿಕೆಯಲ್ಲಿ ಹೆಚ್ಚಿನದಾಗಿ ಬಳಸುವರು. ಕಾರಣ ಗೆದ್ದಲ ಹುಳುಗಳ ಕಾಟ ಬಹಳ ಕಡಿಮೆಯಿದೆ.
ಮಾರುಕಟ್ಟೆ / ಕೈಗಾರಿಕೆಗಳು:
ಟಿಂಬರ್ ಕೈಗಾರಿಕೆಗಳು ಪ್ರತಿ ಕ್ಯೂಬಿಕ್ ಫೀಟ್ ಟಿಂಬರ್ಗೆ ರೂ.1500/- ದಿಂದ 2000/- ವರೆಗೆ ದೊರೆಯುವುದು.
ಆದಾಯ (ಆರ್ಥಿಕ ಲಾಭ):
ಒಂದು ಎಕರೆಗೆ ೪೦ ಮರಗಳಂತೆ ಒಟ್ಟು ದೊರೆಯುವ ಹಣ್ಣುಗಳು ೨೦೦೦ ಪ್ರತಿ ಎಕರೆಗೆ. ಹಾಗೂ ಒಂದು ಹಣ್ಣು ಕನಿಷ್ಟ ೧೦ ಕೆ.ಜಿ. ತೂಕವಿದ್ದರೆ, ಸರಾಸರಿ ೨೦ ಟನ್ ಹಣ್ಣುಗಳನ್ನು ಸಾಮಾನ್ಯವಾಗಿ ಪಡೆಯಬಹುದು. ಕೆಲವು ರೈತರು ೩೨ ಟನ್ ಪ್ರತಿ ಎಕರೆಗೆ ಪಡೆದ ಉದಾಹರಣೆಗಳಿವೆ. ಆದರೆ ಪ್ರತಿ ಎಕರೆಗೆ ಕನಿಷ್ಟ ೨೦ ಟನ್ ನಂತೆ ರೈತರು ವಾರ್ಷಿಕವಾಗಿ ರೂ. 2,00,000/- ಆದಾಯವನ್ನು ಪ್ರತಿ ಎಕರೆಯಿಂದ ಪಡೆಯಬಹುದು.