IAFT – INSTITUTION OF AGROFORESTRY FARMERS AND TECHNOLOGISTS

ಬೀಜಗಳ ಸಂಗ್ರಹಣೆ: 

ಮರಗಳಿಂದ ಹಣ್ಣುಗಳ ಗೊಂಚಲುಗಳನ್ನು ಸಂಗ್ರಹಿಸಿ ನಂತರ ನೀರಿನಲ್ಲಿ ತೇಲುವಂತಹ ಬೀಜಗಳನ್ನು ಬಿತ್ತನೆಗೆ ಪೂರ್ವದಲ್ಲಿ ಪ್ರತ್ಯೇಕಿಸಬೇಕು.

ಬೀಜಗಳ ಪರಿಷ್ಕರಣೆ ಹಾಗೂ ಬೀಜೋಪಚಾರ:

ಹೆಬ್ಬೇವಿನ ಬೀಜಗಳು ತುಂಬಾ ಕಡಿಮೆ ಪ್ರಮಾಣದಲ್ಲಿ ಮೊಳಕೆಯೊಡೆಯುತ್ತವೆ. ಆದರೆ ಕೆಲವೊಮ್ಮೆ ಶೇಕಡ 60 ರಷ್ಟು ಮೊಳಕೆಯ ಪ್ರಮಾಣವನ್ನು ಯಾವುದೇ ಬೀಜೋಪಚಾರವಿಲ್ಲದೆ ಮೊಳಕೆ ಹೊಡೆಯುವುದನ್ನು ಗಮನಿಸಲಾಗಿದೆ. ಇದಕ್ಕಾಗಿ ಸಂಗ್ರಹಿಸಿದ ಬೀಜಗಳನ್ನು ನೀರಿನಲ್ಲಿ ಹಾಕಿದಾಗ ತೇಲುವ ಬೀಜಗಳನ್ನು ಪ್ರತ್ಯೇಕಿಸಿ, ಮುಳುಗುವ ಗಟ್ಟಿ ಬೀಜಗಳನ್ನು ಸುಮಾರು 20-25 ದಿವಸಗಳವರೆಗೆ ಗೋಣಿ ಚೀಲದಲ್ಲಿ ಶೇಖರಿಸಿಟ್ಟು ನಂತರ ಬಿತ್ತನೆ ಮಾಡಬೇಕು.

ಸಸ್ಯಗಳ ಪಾಲನೆ – ಸಸ್ಯಕ್ಷೇತ್ರ:

ಬೀಜಗಳನ್ನು ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ ಬಿತ್ತನೆ ಮಾಡುವುದು ಸೂಕ್ತ. ಸ್ವಚ್ಚಗೊಳಿಸಿದ ಮತ್ತು ಒಣಗಿಸಿದ ಬೀಜಗಳನ್ನು ಎತ್ತರದ ಮಡಿಗಳಲ್ಲಿ, 5 ಸೆಂ.ಮೀಟರ್ ಅಂತರದ ಲೈನ್ ಗಳಲ್ಲಿ ಊರಬೇಕು. ಬೀಜಗಳು ಮರಳಿನಲ್ಲಿ ಮೊಳಕೆಯೊಡೆಯುವುದಿಲ್ಲ. ಅವುಗಳನ್ನು ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರ ಮಿಶ್ರ ಮಾಡಿದ ಅಂದರೆ 2:1 ಎರಡು ಪಟ್ಟು ಮಣ್ಣು ಮತ್ತು ಒಂದು ಕೊಟ್ಟಿಗೆ ಗೊಬ್ಬರ ಮಿಶ್ರ ಮಾಡಿರುವ ಮಾಧ್ಯಮದಲ್ಲಿ ಬಿತ್ತಬೇಕು. ಸುಮಾರು 6 ರಿಂದ 7 ಕೆಜಿ ಒಣ ಹಣ್ಣುಗಳಿರುವ ಗೊಂಚಲಿನಿಂದ 1500 ಉತ್ತಮವಾದ ಬೀಜಗಳು ಸಾಮಾನ್ಯವಾಗದ ಎತ್ತರದ ಮಡಿಗಳಿಗೆ ಸಾಕಾಗುತ್ತದೆ. ಬಿತ್ತಿದ ಬೀಜಗಳಿಂದ ನಿರಂತರವಾಗಿ ನೀರು ಹಾಯಿಸಬೇಕು. ತುಂಬಾ ಹೆಚ್ಚಿನ ದಿನದ ಉಷ್ಣತೆಯನ್ನು ಹೊಂದಿರದ ಸ್ಥಳಗಳಲ್ಲಿ ಅಥವಾ ನೆರಳಿರುವ ಸ್ಥಳಗಳಲ್ಲಿ ಮಡಿಗಳನ್ನು ಟಾರ್ ಪಾಲಿನ್ ಶೀಟ್ಗಳನ್ನು ಉಷ್ಣತೆಯ ರಕ್ಷಣೆಗಾಗಿ ಮುಚ್ಚಬೇಕಿದೆ. ಬಿತ್ತನೆ ಮಾಡಿದ 90 ದಿವಸಗಳಲ್ಲಿ ಮೊಳಕೆಯೊಡೆಯುವುದನ್ನು ಗಮನಿಸಬಹುದಾಗಿದೆ.

ಸಸ್ಯ ಸಂತಾನೋತ್ಪತ್ತಿ ಅಥವಾ ಅಂಗಾಂಶ ಕೃಷಿ:

ಎಳೆಯ ಕಾಂಡಗಳ ತುಣುಕುಗಳು ಮತ್ತು ಕೂಳೆ ಬೆಳೆ ತುಣುಕುಗಳು 1000 – 2000 ಪಿಪಿಎಂ ಐ.ಬಿ.ಎ. ದ್ರಾವಣದಲ್ಲಿ ನೆನೆಸಿ ನಾಟಿ ಮಾಡಿದಲ್ಲಿ ಉತ್ತಮ ಬೆಳೆ ಸಾಧ್ಯ. ಹಳೆಯ ಮರಗಳ ಕೂಳೆ ಬೆಳೆಯಿಂದ ಉತ್ತಮವಾಗಿ ಬೇಗನೆ ಬೇರು ಬಿಡುತ್ತವೆ. ಇಲ್ಲಿ ಪೆನ್ಸಿಲ್ ಗಾತ್ರದ ಕಾಂಡದ ತುಣುಕುಗಳು ಅಂಗಾಂಶ ಕೃಷಿಗೆ ಒಳ್ಳೆಯದು ಕಾಂಡದ ತುದಿಗಳು ಬೇಗನೆ ಬೇರು ಕೊಳೆಯುವ ರೋಗಕ್ಕೆ ತುತ್ತಾಗಲಿವೆ. ಈ ಕಾಂಡದ ತುಣುಕುಗಳನ್ನು ಮರಳಿನ ಮೀಡಿಯಂನಲ್ಲಿಟ್ಟು ದಿನಕ್ಕೆ ಎರಡು ಬಾರಿ ನೀರು ಸಿಂಪರಿಸಬೇಕಿದೆ. ಹೆಚ್ಚುವರಿ ನೀರು ಹೊರ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ನೀರು ನಿಂತು ಕಾಂಡದ ತುಣುಕುಗಳು ನಾಶ ಹೊಂದಲಿವೆ. ಒಣ ಹವೆಯಲ್ಲಿ ಕಾಂಡಗಳಿಂದ ಸಸ್ಯಾಭಿವೃದ್ಧಿ ಸೂಕ್ತ. ಏಕೆಂದರೆ ಶೇಕಡ 75 ರಷ್ಟು ಕಾಂಡದ ತುಣುಕುಗಳು ಬೇರು ಬಿಡಲಿವೆ.

ಟಿಪ್ಪಣಿ:

ಈ ಜಾತಿಯ ಸಸಿಗಳು ನಾಟಿ ಮಾಡಲು ಬಹಳ ಸೂಕ್ತವಾಗಿರುತ್ತವೆ. ಅದುವೇ ಕಾರಣ, ಮಡಿಗಳಿಂದ ಚಿಕ್ಕ ಸಸಿಗಳನ್ನು / ಬೇರು ಬಿಟ್ಟಂತ ಕಾಂಡದ ತುಂಡುಗಳನ್ನು ಕೀಳುವಾಗ ಬಹಳ ಎಚ್ಚರದಿಂದ ತೆಗೆಯಬೇಕು. ತೆಗೆದಂತಹವುಗಳನ್ನು ತಕ್ಷಣವೇ ಬ್ಯಾಗ್ ಗಳಲ್ಲಿ ನಾಟಿ ಮಾಡಬೇಕು.

ನೆಡುತೋಪು ನಿರ್ವಹಣೆ:

ಈ ಜಾತಿಯ ಮರಗಳು 800 ಮಿಲಿ ಮೀಟರ್ ವಾರ್ಷಿಕ ಮಳೆ ಬೀಳುವ ಪ್ರದೇಶಗಳಲ್ಲಿ ಉತ್ತಮವಾಗಿ ಬೆಳೆಯುತ್ತವೆ. ಮರಳು, ದಪ್ಪನೆಯ ಮರಳು, ಕೆಂಪು ಮತ್ತು ಜಂಬಿಟ್ಟಿಗೆಯ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತವೆ. ರಸಗೊಬ್ಬರಗಳನ್ನು ಉಪಯೋಗಿಸಿದಲ್ಲಿ ಉತ್ತಮವಾಗಿ ಬೆಳೆಯಬಲ್ಲವು. ನಿರಂತರವಾಗಿ ನೀರು ಹಾಯಿಸುವುದರಿಂದ ವೇಗವಾಗ ಬೆಳವಣಿಗೆ ಸಾಧ್ಯವಿದೆ. ಪ್ರಾರಂಭಿಕ ಹಂತದಲ್ಲಿ ಪ್ರತಿದಿನ ನೀರು ಕೊಡುವುದರಿಂದ ಬೆಳವಣಿಗೆ ಹೆಚ್ಚಾಗಲಿದೆ. ಜೊತೆಗೆ ರಸಗೊಬ್ಬರವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಮೊದಲನೇ ಮೂರು ವರ್ಷದಲ್ಲಿ ನೀಡುವುದರಿಂದ ಅತ್ಯುತ್ತಮವಾಗಿ ಬೆಳವಣಿಗೆ ನಿರೀಕ್ಷಿಸಬಹುದು. ಮಳೆಯಾಶ್ರಯದಲ್ಲಿ ಬೆಳವಣಿಗೆ ನಿಧಾನವಾಗಲಿದೆ (ಶೇಕಡ 100 ರಷ್ಟು ಕಡಿಮೆ). ಮರದ ಕೊಂಬೆಗಳು 8 ರಿಂದ 10 ಮೀಟರ್ ಎತ್ತರದಲ್ಲಿ ಪ್ರಾರಂಭವಾಗುತ್ತದೆ. ಪ್ರತಿ 6 ತಿಂಗಳಿಗೊಮ್ಮೆ ಎಳೆಯ ಕೊಂಬೆಗಳನ್ನು ಕಟಾವು ಮಾಡುವುದರಿಂದ ಕೊಂಬೆಗಳೊಡೆಯುವುದನ್ನು ನಿಯಂತ್ರಿಸಬಹುದು. ಮರದ ಕಾಂಡವು ನೇರವಾಗಿ, ವೃತಾಕಾರದಲ್ಲಿ ಮತ್ತು ಯಾವುದೇ ಗಂಟುಗಳಿಲ್ಲದೆ ಮತ್ತು ಬುಡದಲ್ಲಿ ಯಾವುದೇ ತರಹದಲ್ಲಿ ದಪ್ಪವಾಗುವುದಿಲ್ಲ.

ಹೆಬ್ಬೇವು ಕೃಷಿಅರಣ್ಯಕ್ಕೆ ಸೂಕ್ತವಾದ ಮರವಾಗಿದೆ ಮತ್ತು ಅನೇಕ ಜಾತಿಯ ಕೃಷಿ ಬೆಳೆಯಲು ಸಾಧ್ಯ. ಇದರ ಜೊತೆಯಲ್ಲಿ ಶೇಂಗಾ, ಮೆಣಸಿನಕಾಯಿ, ಹರಿಸಿನ, ಉದ್ದು, ಪಪ್ಪಾಯ, ಬಾಳೆ ಮತ್ತು ಸೋರೆಕಾಯಿ ಜಾತಿಯ ಗಿಡಗಳು, ಕಬ್ಬು ಇವುಗಳನ್ನು ಅಂತರ ಬೆಳೆಯಾಗಿ ಯಶಸ್ವಿಯಾಗಿ ಬೆಳೆಯಬಹುದು. ಈ ಜಾತಿಯ ಮರವು ಸರಹದ್ದುಗಳಲ್ಲಿ ಮತ್ತು ಮಣ್ಣಿನ ದಿಣ್ಣೆಗಳ ಮೇಲೆ ಅತ್ಯುತ್ತಮವಾಗಿ ಬೆಳೆಯುತ್ತದೆ ಹಾಗೂ ನಾಟಿ ಮಾಡಿದ ನಾಲ್ಕು ವರ್ಷಗಳಲ್ಲಿ ಕಟಾವು ಮಾಡಬಹುದು.

ಮಾದರಿ ಅಥವಾ ಅಂತರ:

6X6 ಮೀಟರ್ 5X5 ಮೀಟರ್ ಅಂತರದಲ್ಲಿ ನಾಟಿ ಮಾಡುವುದು ಸೂಕ್ತವಾಗಿದೆ. ಆದರೆ 8X8 ಮೀಟರ್ ಅಂತರದಲ್ಲಿ ಬೆಳೆಸುವುದು ಅತ್ಯುತ್ತಮ.

ಕೀಟ ಮತ್ತು ರೋಗಗಳ ನಿರ್ವಹಣೆ:

ಕೆಲವು ಕಡೆ ಅಲ್ಲಲ್ಲೇ ರಸ ಹೀರುವ ಕೀಟಗಳು ಕಂಡುಬರುತ್ತವೆ. ಬೆಳೆದ ಕೀಟಗಳು ಕಡುಗೆಂಪು ಬಣ್ಣದ ಹುಳುಗಳು ಎಲೆಗಳ ತಳ ಭಾಗದಲ್ಲಿರುತ್ತವೆ. ಅಲ್ಲಲ್ಲೇ ಬಿಳಿ ಮಚ್ಚೆಗಳು ಹೊಂದಿಕೊಂಡು ಮಾಸಲು ಬಿಳಿ ಚುಕ್ಕೆಗಳು ಮೈಟ್ಸ್ (ಹುಳು) ಗಳಿರುವುದನ್ನು‌ ಖಚಿತಪಡಿಸುತ್ತದೆ. ಎಲೆಗಳ ತಳಭಾಗದಲ್ಲಿ ಹೆಚ್ಚು ಹುಳುಗಳು ಇದ್ದಲ್ಲಿ ಎಲೆಗಳು ಅಂಚಿನಿಂದ ಒಣಗಲು ಪ್ರಾರಂಭಿಸಿ, ಉದುರಿ ಹೋಗುತ್ತವೆ. ಸಾಮಾನ್ಯವಾಗಿ ಇವುಗಳ ಬಾಧೆಯು ಜೂನ್ ನಿಂದ‌ ನವೆಂಬರ್ ತಿಂಗಳವರೆಗೆ ಹೆಚ್ಚಿರುತ್ತದೆ.

ನಿರ್ವಹಣೆ:

ಬಾಧೆಯಿರುವ ಎಲೆಗಳನ್ನು ಕೈಯಿಂದ ತೆಗೆದು ನಾಶಪಡಿಸಬೇಕಿದೆ. ಹೆಚ್ಚಿನ ಬಾಧೆಯಿದ್ದಲ್ಲಿ ಶೇಕಡ 10 ರ ಬೇವಿನ ಎಣ್ಣೆಯನ್ನು ಸಾಬೂನಿನ ದ್ರಾವಣದಲ್ಲಿ ಮಿಶ್ರ ಮಾಡಿ ಎಲೆಗಳ ತಳಬಾಗಕ್ಕೆ ಸಿಂಪಡಿಸುವುದರಿಂದ ಕೀಟಬಾಧೆ ಕಡಿಮೆಯಾಗುವುದು. ಅತಿ ಹೆಚ್ಚು ಹುಳುಗಳದ್ದಲ್ಲಿ 2.5 ಮಿ.ಲೀ ಡೈಕೋಫಾಲನ್ನು ಪ್ರತಿ ಲೀಟರ್ ನೀರಿನಲ್ಲಿ ಅಥವಾ ಡೆರಿಮ್ಯಾಕ್ಸ್ (Derrimax) 0.3 ಮಿ.ಲೀ ನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಿಸಬೇಕಿದೆ.

ಮರಗಳ ಕಟಾವು:

ಹೆಬ್ಬೇವು ಮರಗಳನ್ನು ಕಡಿಮೆ ಅವಧಿಯಲ್ಲಿ ಅವುಗಳ ಬೆಳವಣಿಗೆಗೆ ಅನುಗುಣವಾಗಿ ಕಟಾವು ಮಾಡಬಹುದು.

ಇಳುವರಿ:

10-12 ವರ್ಷಗಳ ಮರಗಳಿಂದ 14 ಘನ ಅಡಿ ಮರ ಪಡೆಯಲು ಸಾಧ್ಯ.

ಬಳಕೆ:

ಈ ಮರವನ್ನು ಫ್ಲೈವುಡ್ ಕಾರ್ಖಾನೆಗಳಲ್ಲಿ ಹೆಚ್ಚಾಗಿ ಬಳಸುತ್ತಿರುವ ಎರಡನೇ ದರ್ಜೆಯ ಒಳ್ಳೆಯ ಮರವಾಗಿದೆ. ಈ ಮರವನ್ನು ಪ್ಯಾಕಿಂಗ್ ಕೇಸ್ ಗಳ ತಯಾರಿಕೆ, ಹಲಗೆಗಳ ಆಂತರಿಕ ಸೀಲಿಂಗ್ಗೆ, ಕಟ್ಟಡ ನಿರ್ಮಾಣದಲ್ಲಿ, ಕೃಷಿ ಉಪಕರಣಗಳ ತಯಾರಿಕೆಯಲ್ಲಿ, ಪೆನ್ಸಿಲ್ ತಯಾರಿಸಲು, ಮ್ಯಾಚ್ ಬಾಕ್ಸ್ ಮತ್ತು ಕಡ್ಡಿಗಳ ತಯಾರಿಕೆ, ಸಣ್ಣ ಸಣ್ಣ ಬೋಟ್ಗಳ ತಯಾರಿಕೆಯಲ್ಲಿ, ಸಂಗೀತದ ಉಪಕರಣಗಳ ತಯಾರಿಕೆ ಮತ್ತು ಈ ಮರವು ಗೆದ್ದಲು ನಿರೋಧಕವಾಗಿರುವುದರಿಂದ ಟೀ ಬಾಕ್ಸ್ಸ್‌ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆದುದರಿಂದ ಈ ಮರವು ಎಲ್ಲೆಡೆ ಬೆಳೆಸಬಹುದಾಗಿದೆ ಈ ಮರಕ್ಕೆ ಫ್ಲೈವುಡ್ ಕಾರ್ಖಾನೆಯಲ್ಲಿ ಅತಿ ಹೆಚ್ಚಿನ ಬೇಡಿಕೆಯಿದೆ.

ಖರೀದಿದಾರರು ಅಥವಾ ಕಾರ್ಖಾನೆಗಳು:

ಫ್ಲೈವುಡ್ ಮತ್ತು ಪ್ಯಾನೆಲ್ ಕಾರ್ಖಾನೆಗಳು, ತಾಜ್‌ ಪುರಿಯಾ ಮತ್ತು ಹುಣಸೂರು ಫ್ಲೈವುಡ್ ಕಾರ್ಖಾನೆಗಳು.

ಕೊಯ್ಲು:

8-10 ವರ್ಷಗಳ ಅವಧಿಯಲ್ಲಿ ಕಟಾವು ಮಾಡುವುದು ಸೂಕ್ತ.

ಆರ್ಥಿಕತೆ:

ರೂ. 79,652 ರಿಂದ ರೂ 3,36,200 ಅನ್ನು ಪ್ರತಿ ಹೆಕ್ಟೇರಿಗೆ ಪಡೆಯಬಹುದು.

ಮಾರುಕಟ್ಟೆ ದರ:

ರೂ. 400 ರಿಂದ ರೂ 425 ಪ್ರತಿ ಘನ ಅಡಿಗೆ ಅಥವಾ ರೂ. 5,600 ರಿಂದ ರೂ. 5,950 ಪ್ರತಿ ಮರಕ್ಕೆ ಪಡೆಯಬಹುದು.