ಕೃಷಿಅರಣ್ಯ ರೈತರ ಮತ್ತು ತಂತ್ರಜ್ಞರ ಸಂಸ್ಥೆ
Menu
IAFT – INSTITUTION OF AGROFORESTRY FARMERS AND TECHNOLOGISTS
ಬೀಜ ಸಂಗ್ರಹಣೆ:
ಹಣ್ಣುಗಳು ಹಳದಿ ಮಿಶ್ರಿತ ಹಸಿರು ಹಂತದಲ್ಲಿರುವ ಹಣ್ಣುಗಳನ್ನು ಸಂಗ್ರಹಿಸಲಾಗುವುದು. ಸಂಗ್ರಹಿಸಿದ ಹಣ್ಣುಗಳ ಪಲ್ಪ್ ಅನ್ನು (ಹೊರಗಿನ ಕವಚ) ತಕ್ಷಣವೇ ಬೇರ್ಪಡಿಸಬೇಕು. ತಣ್ಣಗಿನ ನೀರಿನಲ್ಲಿ ಕೆಲವು ಗಂಟೆಗಳ ಕಾಲ ನೆನಸುವುದರಿಂದ ಸುಲಭವಾಗಿ ಪಲ್ಪ್ ಅನ್ನು ಬೇರ್ಪಡಿಸಬಹುದು. ಬೇವಿನ ಬೀಜಗಳನ್ನು ಐದು ತಿಂಗಳವರೆಗೆ 40% ನೈಸರ್ಗಿಕ ತೇವಾಂಶ ಹೊಂದಿದ ಬೀಜಗಳನ್ನು ೧೬೦ ಸೆಂಟಿಗ್ರೇಡ್‌ನಲ್ಲಿ ಶೇಖರಿಸಿಡಲಾಗುವುದು. ಕಡಿಮೆ ಅವದಿಯ ಶೇಖರಣೆಗೆ ಬೀಜಗಳನ್ನು ಪಾಲೀಬ್ಯಾಗ್‌ಗಳಲ್ಲಿ ಕಟ್ಟಿಡಬಹುದು ಹಆಗೂ ವಾರಕ್ಕೆ ಒಮ್ಮೆ ಬೀಜಗಳನ್ನು ಗಾಳಿಗೆ ತೆರದಿಡುವುದರಿಂದ ಮೊಳಕೆಯ ಪ್ರಮಾಣವನ್ನು ರಕ್ಷಿಸಬಹುದು. ದೀರ್ಘಕಾಲದ ಬೇವಿನ ಬೀಜಗಳ ಸಂಗ್ರಹಣೆಗೆ ಅಂದರೆ ಹತ್ತು ವರ್ಷಗಳಿಗೂ ಹೆಚ್ಚಿನ ಅವಧಿಗೆ ಶೇ 4% ರ ತೇವಾಂಶದಲ್ಲಿ ಹಾಗೂ 200 ಸೆಂಟಿಗ್ರೇಡ್ ಉಷ್ಣತೆಯಲ್ಲಿಡಬೇಕು. ಮರಗಳು (ತೇವವಿರುವ) ತುಂಬಿದ ಮಡಿಕೆಗಳಲ್ಲಿ ಅಂದರೆ ಶೇ.30% ರ ತೇವಾಂಶದಲ್ಲಿ ಶೇ.60%ರ ಮೊಳಕೆ ಪ್ರಮಾಣವನ್ನು 3 ತಿಂಗಳವರೆಗೆ ಶೇಖರಿಸಿಡಬಹುದು. ಸರಾಸರಿ 5000 ಬೀಜಗಳ ಪ್ರತಿ ಕಿ.ಗ್ರಾಂ. ನಲ್ಲಿರುತ್ತವೆ.
ಬೀಜಗಳ ಪರಿಷ್ಕರಣೆ ಹಾಗೂ ಬೀಜೋಪಚಾರ:
ಯಾವುದೇ ಬೀಜೋಪಚಾರದ ಅವಶ್ಯಕತೆಯಿಲ್ಲ.
ಸಸ್ಯಕ್ಷೇತ್ರ:
ಬೇವಿನ ಬೀಜಗಳ ಮೊಳಕೆ ಪ್ರಮಾಣವು ಶೇ.15 ರಿಂದ (ಸಂಗ್ರಹಿಸಿಟ್ಟ) ಶೇ.85 ರವರೆಗೆ (ಹೊಸ ಬೀಜಗಳ) ಹೆಚ್ಚಿನ ಪ್ರಮಾಣದ ಮೊಳಕೆಯೊಡೆಯಲು ಸಂಗ್ರಹಿಸಿದ ತಕ್ಷಣವೇ ಮಡಿಗಳಲ್ಲಿ ಬೀಜಗಳನ್ನು ಹಾಕಬೇಕು. ಬೀಜಗಳನ್ನು 24 ಗಂಟೆಗಳವರೆಗೆ ನೆನೆಸಿಟ್ಟು ಮತ್ತು ಬೀಜದ ಗುಂಡನೆಯ ಭಾಗದ ಹೊರಗಿನ ಕವಚವನ್ನು ಹರಿತವಾದ ಆಯುಧಗಳಿಂದ ಬೇರ್ಪಡಿಸಿದಲ್ಲಿ ಮೊಳಕೆ ಪ್ರಮಾಣವನ್ನು ಹೆಚ್ಚಿಸಲು ಸಾಧ್ಯ. ಬೀಜಗಳನ್ನು ನರ್ಸರಿ ಮಡಿಗಳಲ್ಲಿ 15 ಸೆಂ.ಮೀ. ಸಾಲಿನ ಅಂತರದಲ್ಲಿ 2.5 ಸೆಂ.ಮೀ. ಆಳದಲ್ಲಿ ಹಾಗೂ 2 ರಿಂದ 5 ಸೆಂ.ಮೀ. ಸಾಲಿನ ಮಧ್ಯದ ಅಂತರದಲ್ಲಿ ಬೀಜಗಳನ್ನು ಸ್ಪಲ್ಪ ಮರಳಿನಿಂದ ಮುಚ್ಚಬೇಕು ಕಾರಣ ಬೀಜಗಳನ್ನು ಅಕ್ಕಿ-ಪಕ್ಷಿಗಳ ಹಾಗೂ ಕೀಟಗಳು ತಿನ್ನದೇ ಇರಲೆಂದು ಊರಬೇಕು. ಏಕೆಂದರೆ ಬೀಜಗಳ ರ‍್ಯಾಡಿಕಲ್‌ನ್ನು ಭೂಮಿಯ ಮೇಲ್ಭಾಗದಲ್ಲಿ ಕ್ರಿಮಿ-ಕೀಟಗಳಿಂದ ರಕ್ಷಣೆ ನೀಡಬೇಕಿದೆ. ಮೊಳಕೆಯು 1 ರಿಂದ 2 ವಾರಗಳ ಅವಧಿಯಲ್ಲಿ ಬರಲು ಪ್ರಾರಂಭಿಸುವುದು. ಮೇಲಿನ ಮೊಳಕೆಯು ನೇರವಾಗಿ ಬಂದ ನಂತರ, ಇವುಗಳನ್ನು ಪಾಲಿಬ್ಯಾಗ್‌ಗಳಲ್ಲಿ ನಾಟಿ ಮಾಡಲಾಗುವುದು. ಬೀಜಗಳನ್ನು ನೆಡುತೋಪು ನಿರ್ಮಾಣಕ್ಕೆ 3 ರಿಂದ 4 ತಿಂಗಳ ಮೊದಲೇ ಬೆಳೆಸಲಾಗುವುದು. ಇವುಗಳನ್ನು ಶೇ.೫೦ ರಷ್ಟು ಮರಳು ಮತ್ತು ಶೇ.40 ರಷ್ಟು ನದಿ ಮರಳು ಮತ್ತು ಶೇ.10 ರಷ್ಟು ಕಾಂಪೋಸ್ಟ್ ಗೊಬ್ಬರದೊಂದಿಗೆ ಮಿಶ್ರ ಮಾಡಿ ಪಾಲಿಬ್ಯಾಗ್‌ಗಳಲ್ಲಿ ಸಸಿಗಳನ್ನು ಮಡಿಗಳಿಂದ ಎರಡು ತಿಂಗಳ ನಂತರ ತೆಗೆದು ನಾಟಿ ಮಾಡಬೇಕು. ಇವುಗಳಿಗೆ ಯಾವುದೇ ನೆರಳಿನ ಅವಶ್ಯಕತೆಯಿಲ್ಲ. ಆದರೆ ಮಣ್ಣು ಸಡಿಲಿಸುವಿಕೆ ಮತ್ತು ಪಾಲಿಬ್ಯಾಗ್‌ಗಳಲ್ಲಿ ಕಳೆ ತೆಗೆಯುವುದು ಗಿಡಗಳ ಬೆಳವಣಿಗೆಗೆ ಲಾಭದಾಯಕವಾಗಿರುತ್ತದೆ. ಮಂಜು ಬೀಳುವ ಪ್ರದೇಶಗಳಲ್ಲಿ ಗಿಡಗಳನ್ನು ಸ್ಕಿçÃನ್‌ನಿಂದ ರಕ್ಷಣೆ ಒದಗಿಸಬೇಕು. ಗಿಡಗಳು 7 ರಿಂದ 10 ಸೆಂ.ಮೀ. ಎತ್ತರವಿದ್ದಾಗ, ಇವುಗಳ ತಾಯಿ ಬೇರು 15 ಸೆಂ.ಮೀ. ನಷ್ಟು ಉದ್ದವಿರುತ್ತದೆ. ಇವುಗಳಲ್ಲಿ ಬೇರೆಡೆ ನಾಟಿ ಮಾಡುವಾಗ, ಪಾಲಿಬ್ಯಾಗ್‌ನಲ್ಲಿರುವ ಮಣ್ಣು ಒಡೆಯದಂತೆ ನೋಡಿಕೊಳ್ಳಬೇಕು. ಒಣ ಪ್ರದೇಶಗಳಲ್ಲಿ 45 ಸೆಂ.ಮೀ. ಎತ್ತರವಿರುವುದರಿಂದ ಮುಂಬರಬಹುದಾದ ನೀರಿನ ಕೊರತೆಯನ್ನು ಎದುರಿಸಿ, ಬೆಳೆಯಲು ಸಹಾಯಕವಾಗುವುದು, ಸಣ್ಣ ಗಿಡಗಳಿದ್ದಲ್ಲಿ ಬರಗಾಲದ ಪರಿಸ್ಥಿತಿಯನ್ನು ತಡೆಯಲಾರವು. ಈ ಕಾರಣದಿಂದಲೇ ಸಸ್ಯಕ್ಷೇತ್ರದಲ್ಲಿಯೇ ಇಟ್ಟುಕೊಂಡು ಮುಂದಿನ ಮಳೆಗಾಲದಲ್ಲಿ ನಾಟಿ ಮಾಡುವುದು ಸೂಕ್ತ.
ಬೇವಿನ ಗಿಡಗಳನ್ನು ನೇರವಾಗಿ ಬೀಜಗಳನ್ನು ಊರಿ ಸಹ ಬೆಳೆಸಬಹುದು. ತುಂಬಾ ಕ್ಷೀಣಿತ ಪ್ರದೇಶಗಳಲ್ಲಿ ನೇರವಾಗಿ ಬೀಜಗಳನ್ನು ಊರಿ ಬೆಳೆಸುವುದರಿಂದ ಹೆಚ್ಚಿನ ಯಶಸ್ಸು ಗಳಿಸಬಹುದು. ಆದರೆ ಪಾಲಿಬ್ಯಾಗ್‌ಗಳಲ್ಲಿ ಬೆಳೆಸಿರುವ ಸಸಿಗಳು ಅಥವಾ ಕಟಿಂಗ್‌ನಿAದ (ರೂಟ್-ಶೂಟ್) ಕೃಷಿವನಗಳಲ್ಲಿ, ಸಿಲ್ವಿ ಪ್ಯಾಶ್ಚರ್ ಮತ್ತು ರಸ್ತೆ ಬದಿ ನೆಡುತೋಪು ಬೆಳೆಸಲು ಸೂಕ್ತವಾಗಿರುತ್ತದೆ. ನೇರ ಬೀಜಗಳ ಬಿತ್ತನೆಯನ್ನು ಅಲ್ಲಲ್ಲೇ ಭೂಮಿಯಲ್ಲಿ ಪೊದೆಗಳಿರುವೆಡೆ ಊರಲಾಗುವುದು ಅಥವ ಚೆಲ್ಲಬಹುದು. ಬೀಜಗಳನ್ನು ಟ್ರೆಂಚ್‌ಗಳ ಮೌಂಡ್ ಮೇಲೆ ಅಥವಾ ಭೂ ಮಟ್ಟಕ್ಕಿಂತ ತಳಗಿರುವ ಟ್ರೆಂಚ್‌ಗಳಲ್ಲಿ ಬೀಜಗಳನ್ನು ಬಿತ್ತಬಹುದು. ಗುಂಡಿಗಳಲ್ಲಿ ಸಾಮಾನ್ಯವಾಗಿ 20 ರಿಂದ 45 ಸೆಂ.ಮೀ. ಎತ್ತರದ ಸಸಿಗಳನ್ನು ನಾಟಿ ಮಾಡುವುದರಿಂದ ಹೆಚ್ಚಿನ ಯಶಸ್ಸು ಗಳಿಸಬಹುದು. ಗಿಡಗಳ ಸ್ಟಂಪ್‌ಗಳನ್ನು ಒಂದು ವರ್ಷ ಬೆಳೆದ ಸಸಿಗಳಿಂದ ತಯಾರಿಸಿ ಆರೆಯಿಂದ ರಂದ್ರಗಳನ್ನು ತೆಗೆದು ನಾಟಿ ಮಾಡಿದಲ್ಲಿ ಉತ್ತಮವಾದ ಯಶಸ್ಸುಗಳಿಸಲು ಸಾಧ್ಯ.
ನೆಡುತೋಪು ನಿರ್ವಹಣೆ:
ಬ್ಲಾಕ್ ನೆಡುತೋಪುಗಳನ್ನು ವನ-ತೋಟಗಾರಿಕೆಯಂತೆ ಬೆಳೆಸಲು ಕಡಿಮೆ ಅಂತರದಲ್ಲಿ ಅಂದರೆ 5 ಮೀ X 5 ಮೀ ಅಂತರದಲ್ಲಿ ಪ್ರತೀ ಹೆಕ್ಟೇರ್‌ಗೆ 400 ಗಿಡಗಳನ್ನು ಬೆಳೆಸಬಹುದು. ಗಿಡಗಳ ಅಂತರ ಹೆಚ್ಚು ಕಡಿಮೆ ಮಾಡಲು ಸ್ಥಳದ ಸ್ಥಿತಿಗತಿ ಮತ್ತು ಯಾವ ಉದ್ದೇಶಕ್ಕಾಗಿ ಬೆಳೆಸಲಾಗುವುದು ಎನ್ನುವುದರ ಮೇಲೆ ಅವಲಂಬನೆಯಾಗಿರುತ್ತದೆ. ಹೆಚ್ಚಿನ ಅಂತರ ಅಂದರೆ 7 ಮೀ X 7 ಮೀ ಅಂತರವಿದ್ದರೆ ಪ್ರತಿ ಹೆಕ್ಟೇರ್‌ಗೆ 200 ಮರಗಳನ್ನು ಬೆಳೆಸುವುದರಿಂದ. ಮಧ್ಯದ ಸ್ಥಳದಲ್ಲಿ ಕೃಷಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುವುದು. ನೆಡುತೋಪುಗಳ ಮಧ್ಯೆ ಮೊದಲನೇ ವರ್ಷ 2 ಬಾರಿ ಕಳೆ ತೆಗೆಯುವುದು ಹಾಗೂ ನಾಟಿ ಮಾಡಿದ ಎರಡನೇ ವರ್ಷದಲ್ಲಿ ಒಂದು ಬಾರಿ ಕಳೆ ತೆಗೆಯುವುದು ಸೂಕ್ತವಾಗಿರುತ್ತದೆ. ನೆಡುತೋಪುಗಳಲ್ಲಿ 5 ವರ್ಷಗಳ ನಂತರ ಗಿಡಗಳಿಂದ ಬೆಳೆಸಿದ್ದಲ್ಲಿ ಬೆಳೆಯದೇ ಇರುವಂತಹ ಅಥವಾ ಕುಂಠಿತ ಬೆಳವಣಿಗೆ ಹೊಂದಿರುವ ಗಿಡಗಳನ್ನು ತೆಗೆದುಹಾಕಬೇಕು. (ಮ್ಯಾಕ್ಯಾನಿಕಲ್ ತಿನ್ನಿಂಗ್). ಒಣ ಪ್ರದೇಶದಲ್ಲಿರುವ ಕಾಲುವೆಗಳ ಪಕ್ಕದಲ್ಲಿರುವ ನೆಡುತೋಪುಗಳಲ್ಲಿ ಮೊದಲ 5 ರಿಂದ 7 ವರ್ಷ ನೀರು ಕೊಡಬೇಕು.
ಬೇವಿನ ಮರಗಳ ಬೆಳವಣಿಗೆಯು ಮಣ್ಣಿನ ಗುಣಮಟ್ಟವನ್ನು ಅವಲಂಬಿಸಿರುವುದು. ಮೊದಲ 5 ವರ್ಷಗಳವರೆಗೆ ಬೆಳವಣಿಗೆಯು ತೀವ್ರತರವಾಗಿದ್ದು ನಂತರದ ವರ್ಷಗಳಲ್ಲಿ ಮಂದಗತಿ ಬೆಳೆಯುವುದು. ಮರಗಳು ೫ ವರ್ಷಗಳಲ್ಲಿ ಮಂದಗತಿ ಬೆಳೆಯುವುದು. ಮರಗಳು ೫ ವರ್ಷಗಳಲ್ಲಿ 4 ಮೀ ಎತ್ತರಕ್ಕೆ ಮತ್ತು 25 ವರ್ಷಗಳ ನಂತರ 10 ಮೀ ಎತ್ತರಕ್ಕೆ ಬೆಳೆಯುತ್ತವೆ. ಪ್ರತೀ ವರ್ಷದ ಸರಾಸರಿ ಮರದ ಬೆಳವಣಿಗೆಯು 2.3 ರಿಂದ 3.0 ಸೆಂ.ಮೀ. ದಪ್ಪ ಬೆಳೆಯುವುದು. ಅನುಕೂಲಕರ ವಾತಾವರಣದಲ್ಲಿ ಹೆಚ್ಚು ವೇಗವಾಗಿ ಬೆಳೆಯಬಲ್ಲದು. ಕರ್ನಾಟಕದಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಬೇವಿನ ಮರಗಳು 6.58 ಮೀ ಎತ್ತರಕ್ಕೆ ಮತ್ತು ದಪ್ಪ (ಎದೆ ಎತ್ತರದಲ್ಲಿ) 68.1 ಸೆಂ.ಮೀ. ದಪ್ಪವಿರುವುದು. ಉತ್ತರ ಪ್ರದೇಶದ ಕ್ಷಾರ ಭೂಮಿಯಲ್ಲಿ ನಾಟಿ ಮಾಡಿದ ಮೊದಲನೇ ವರ್ಷದಲ್ಲಿ ಸರಾಸರಿ 170 ಸೆಂ.ಮೀ ಎತ್ತರಕ್ಕೆ ಬೆಳೆಯುವುದು ಹಾಗೂ ಎರಡನೇ ವರ್ಷಕ್ಕೆ 264 ಸೆಂ.ಮೀ. ಎತ್ತರಕ್ಕೆ ಬೆಳೆಯುವುದು. 1993 ರಲ್ಲಿ ಅಂತರರಾಷ್ಟಿçÃಯ ಸಲಹಾ ಸಮಿತಿ ಸಭೆಯು ಮೊದಲ ಬಾರಿಗೆ ಬ್ಯಾಂಕಾಕ್‌ನಲ್ಲಿ ಜರುಗಿತು. ಇಲ್ಲಿ ತಳೆ ಅಭಿವೃದ್ದಿ ಬಗ್ಗೆ ಕ್ರಮಕೈಗೊಳ್ಳಲು ತೀರ್ಮಾನ ತೆಗೆದುಕೊಳ್ಳಲಾಯಿತು.
ಮಾದರಿ ಅಂತರ:
ಬೇವಿನ ನೆಡುತೋಪನ್ನು ಬೆಳೆಯಲು ತಗುಲುವ ವೆಚ್ಚವು ಎಷ್ಟು ಪ್ರದೇಶದಲ್ಲಿ ಬೆಳೆಯಲಾಗುವುದೆಂಬುದರ ಮೇಲೆ ಅವಲಂಬಿತವಾಗಿರುತ್ತದೆ. ತಗುಲುವ ವೆಚ್ಚವು ಪ್ರತಿ ಹೆಕ್ಟೇರ್‌ಗೆ 5 ಮೀ X 5 ಮೀ ಅಂತರದಲ್ಲಿ (400 ಮರಗಳನ್ನು ಬೆಳೆಸಬಹುದು) ರೂ.20,700/- ಎಂದು ಅಂದಾಜಿಸಲಾಗಿದೆ.
ಕೀಟಗಳು ಮತ್ತು ರೋಗ ನಿರ್ವಹಣೆ:
ತುದಿ ಕೊರೆಯುವ ಹುಳು ಮತ್ತು ‘ಟೀ’ ಸೊಳ್ಳೆಗಳು ಎಳೆ ವಯಸ್ಸಿನ ಗಿಡಗಳಿಗೆ ಮತ್ತು ಸಸಿಗಳಿಗೆ ಬಾಧಿಸುತ್ತದೆ. ಸ್ಕೇಲ್ ಕೀಟ್ ಬಿಳಿಮಣ್ಣವನವನು ಹೊಂದಿದ್ದು ಸಣ್ಣ ಸಣ್ಣ ರೆಂಬೆಗಳು ಮತ್ತು ಎಲೆಗಳಿಗೆ ಬಾಧಿಸುತ್ತದೆ. ಇದೊಂದು ಇದರ ದೊಡ್ಡ ಶತ್ರುವಾಗಿದೆ.
ಸಸಿಗಳು ಒಣಗುವ ರೋಗ (Damping off), ಎಲೆಗೆ ಬ್ಲೆöÊಟ್ ಚುಕ್ಕೆ ರೋಗಗಳು ಸಾಮಾನ್ಯವಾಗಿ ಕಂಡುಬರುತ್ತವೆ.
ಕಟಾವು ಮಾಡುವ ವಯಸ್ಸು:
ಕಡಿಮೆ ಅಂದರೂ 5, 6, 10, 15, 20 ಕೆ.ಜಿ. ಬೀಜಗಳನ್ನು ಪ್ರತಿ ಮರದಿಂದ 5 ವರ್ಷಗಳ ನಂತರ ಕ್ರಮವಾಗಿ ಪಡೆಯಬಹುದು. ಸುಮಾರು 9 ವರ್ಷಗಳ ನಂತರ ಬೀಜಗಳ ಇಳುವರಿಯು ಸಮಸ್ಥಿತಿಗೆ ಬರುವುದು. ಎಳೆ ವಯಸ್ಸಿನ ಗಿಡಗಳಿಗೆ ನೀರುಣಿಸುವುದರಿಂದ ಮತ್ತು ನೆಡುತೋಪಿನಲ್ಲಿ ಕಳೆಗಳ ನಿವಾರಣೆಯಿಂದ ಉತ್ತಮವಾದ ಇಳುವರಿ ಪಡೆಯಬಹುದು. ಪ್ರಸ್ತುತದಲ್ಲಿ ಪ್ರತಿ ಟನ್ ಬೇವಿನ ಬೀಜಕ್ಕೆ ರೂ.10,000/- ದೊರೆಯುತ್ತದೆ. ಇನ್ನು ಮುಂದೆ ಇದರ ಬೆಲೆ ಹೆಚ್ಚಿಸಲುಬಹುದು. ಆದುದರಿಂದ ಇದುವರೆಗೂ ಕಡೆಗಣಿಸಿದ್ದ ಬೇವಿನ ಬೀಜಗಳ ಉತ್ಪಾದನೆಯನ್ನು ಮರಗಳ ಉತ್ತಮ ನಿರ್ವಹಣೆಯಿಂದ ಹೆಚ್ಚು ಹಣ ಪಡೆಯಲು ಸಾಧ್ಯವಿಲ್ಲ. ಇದುವರೆಗೆ ವರದಿಯಾಗಿರುವಂತೆ 10 ವರ್ಷದ ಮರದಿಂದ 5 ರಿಂದ 6 ಚದರ ಅಡಿ ಟಿಂಬರ್ (ಚೌಬೀನೆ) ಪಡೆಯಬಹುದು.
ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಅಂಶವಿರುವುದು ರಾಜಸ್ಥಾನದ ಬನಸ್‌ವಾರ ಪ್ರಾಂತ್ಯದಿAದ (43%) ಹಾಗೂ ಅತಿ ಕಡಿಮೆ ಎಣ್ಣೆ ಅಂಶವಿರುವುದು (32.4%) ಜೈಸಲ್‌ಮೇರ್ ಪ್ರಾಂತ್ಯದಿAದ.
ಪ್ರಾರಂಭದ ವರ್ಷಗಳಲ್ಲಿ ಬೀಜಗಳು ಇಳುವರಿಯು 5 ರಿಂದ 20 ಕೆ.ಜಿ. ಪ್ರತಿ ಮರಕ್ಕೆ. ಬಲಿತ ಮರಗಳಿಂದ 25ರಿಂದ 50 ಕೆ.ಜಿ. ಬೀಜಗಳನ್ನು ಪ್ರತಿ ವರ್ಷ ಪ್ರತಿ ಮರದಿಂದ ಪಡೆಯಲು ಸಾಧ್ಯ. ಎಣ್ಣೆಯ ಇಳುವರಿಯು ಶೇ.40-43 ರಷ್ಟನ್ನು ಒಣಗಿದ ಬೀಜಗಳಿಂದ (ತೂಕದ ಪ್ರಮಾಣ) ಪಡೆಯಬಹುದು. ಆಯಾ ಪ್ರದೇಶಗಳಲ್ಲಿ ಮಳೆಯ ಪ್ರಮಾಣವು ಹೆಚ್ಚಾದಂತೆ ಬೀಜಗಳಲ್ಲಿ ಎಣ್ಣೆ ಅಂಶವು ಸಹ ಹೆಚ್ಚಾಗಲಿದೆ. ಅಂತರರಾಷ್ಟಿçÃಯ ತಳಿಗಳಲ್ಲಿ ಅತೀ ಹೆಚ್ಚಿನ ಎಣ್ಣೆ ಅಂಶ ಕಂಡು ಬಂದಿರುವುದು (48.6% ರಷ್ಟು ಬಾಂಗ್ಲಾದೇಶದ ತಳಿಯಿಂದ ಎಂದು ವರದಿಯಾಗಿದೆ).
ಉಪಯೋಗಗಳು:
ಈ ಮರವನ್ನು ಸ್ಥಳೀಯವಾಗಿ ಟಿಂಬರ್‌ಗಾಗಿ ಉಪಯೋಗಿಸಲಾಗುವುದು. ಇದಕ್ಕೆ ಸುಲಭವಾಗಿ ಮಾರುಕಟ್ಟೆ ದೊರೆಯುವುದು. ಇದು ಆರ್ಥಿಕವಾಗಿಯೂ ಉಪಯುಕ್ತವಾದ ಮರವಾಗಿದೆ. ಈ ಮರವನ್ನು ಕೃಷಿವನದಲ್ಲಿ ಬೆಳೆಯಬಹುದುದಾದ ಅತ್ಯುತ್ತಮ ಮರವೆಂದು ಪರಿಗಣಿಸದಿದ್ದರೂ, ದೇಶದ ವಿವಿಧ ಕೃಷಿ ವಲಯಗಳಲ್ಲಿ ಕೃಷಿವನಗಳಲ್ಲಿ ಬೆಳೆಯಲಾಗುತ್ತಿದೆ.
ಬೇವಿನ ಮರವು ದೊಡ್ಡ ಗಾತ್ರದ ಸದಾ ಹಸಿರಾಗಿರುವ ಮರ ಸುಮಾರು 15-20 ಮೀಟರ್ ಎತ್ತರ ಬೆಳೆಯುವುದು. ಕೆಲವು ಮರಗಳು ನೇರವಾಗಿಯೂ ಇನ್ನು ಕೆಲವು ಮರದ ಕಾಂಡಗಳು ಸ್ವಲ್ಪ ಓರೆಯಾಗಿಯೂ ೩೦ ರಿಂದ ೮೦ ಸೆಂ.ಮೀ. ವ್ಯಾಸವುಳ್ಳದ್ದಾಗಿದ್ದು, ರೆಂಬೆ-ಕೊAಬೆಗಳ ಹರಡಿಕೊಂಡು ದೊಡ್ಡ ಗಾತ್ರದ ಮೇಲ್ಛಾವಣಿ ಹೊಂದಿರುವುದು. ಇದು ಸುದೀರ್ಘವಾದ ಆಯಸ್ಸುಳ್ಳದಾಗಿದ್ದು ಸುಮಾರು 100 ವರ್ಷಗಳವರೆಗೆ ಬೆಳೆಯಬಲ್ಲದು. ಬೇವಿನ ಮರ ಬಹು ಉಪಯೋಗಿ ಮರವಾಗಿದ್ದು, ಅದರಲ್ಲಿ ಮುಖ್ಯವಾಗಿ ಬೀಜಗಳ ಉತ್ಪಾದನೆ, ಇದರಿಂದ ಬೇವಿನ ಎಣ್ಣೆಯನ್ನು ತೆಗೆಯಲಾಗುವುದು, 35 ರಿಂದ 40 ವರ್ಷಗಳವರೆಗೆ ಬೆಳೆದ ಮರಗಳನ್ನು ಟಿಂಬರ್‌ಗಾಗಿ ಬಳಸಲಾಗುವುದು. ಇದರ ಹೊರಗಿನ (ಸ್ಯಾಪ್) ಮರದ ಬಣ್ಣವು ಸ್ವಲ್ಪ ಬಿಳಿ ಹಳದಿ ಬಣ್ಣದಿಂದ ಕೂಡಿದ್ದು, ಇದರ ಹೃದಯ ಭಾಗದ ಮರವು ಕೆಂಪು ಬಣ್ಣದಿಂದ ನಸುಗೆಂಪು ಬಣ್ಣವನ್ನು ಹೊಂದಿರುವುದು. ಮರದ ಬಣ್ಣವನ್ನು ಮಹೋಗನಿ ಮರದ ಬಣ್ಣಕ್ಕೆ ಹೋಲಿಸಬಹುದು. ಮರವು ಸುವಾಸನೆಯುಕ್ತವಾಗಿದ್ದು, ಭಾರದಿಂದ ಕೂಡಿದ್ದು ಅದರಲ್ಲಿ ಕಣಗಳು ಒಂದೇ ತೆರನಾಗಿರುವುದಿಲ್ಲ, ಬಹಳ ಬಾಳಿಕೆ ಬರುವ ಮರವಾಗಿದ್ದು, ಸುಲಭವಾಗಿ ಕೀಟಗಳ ಹಾವಳಿಗೆ ಒಳಗಾಗುವುದಿಲ್ಲ. ಈ ಮರವನ್ನು ಹಸಿಯಾಗಿದ್ದಾಗ ಸಾಮಿಲ್‌ಗಳಲ್ಲಿ ಕತ್ತರಿಸಿದರೂ ಒಡೆಯುವುದಿಲ್ಲ ಮತ್ತು ಸರಳ ರೀತಿಯಿಂದ ಸೀಸನಿಂಗ್ ಮಾಡಬಹುದು. ಮರಗೆಲಸಕ್ಕೆ ಹೇಳಿ ಮಾಡಿಸಿದಂತಹ ಮರವಾಗಿದ್ದು, ಒಳ್ಳೆಯ ಪಾಲೀಶ್ ತೆಗೆದುಕೊಳ್ಳುವುದಿಲ್ಲ. ಮರವನ್ನು ಕಟ್ಟಡ ನಿರ್ಮಾಣ ಕೆಲಸಕ್ಕೆ ಜವೆಗಳಾಗಿ, ಕಿಟಗಿ ಮತ್ತು ಬಾಗಿಲಿನ ನಿರ್ಮಾಣದಲ್ಲಿ, ಪೀಠೋಪಕರಣಗಳ ತಯಾರಿಕೆಯಲ್ಲಿ, ಎತ್ತಿನ ಗಾಡಿಗಳ ತಯಾರಿಕೆಯಲ್ಲಿ, ಬೋಟ್‌ಗಳ ನಿರ್ಮಾಣದಲ್ಲಿ, ಆಯಿಲ್ ಮಿಲ್ಸ್ಗಳಲ್ಲಿ ಕೆತ್ತನೆ ಕೆಲಸಗಳಲ್ಲಿ, ಕೃಷಿ ಉಪಕರಣಗಳ ತಯಾರಿಕೆಯಲ್ಲಿ ಮತ್ತು ಚಿನ್ನಾಭರಣಗಳ ಪೆಟ್ಟಿಗೆಯ ತಯಾರಿಕೆಯಲ್ಲಿ ಬಳಸಲಾಗುವುದು.
ಖರೀದಿದಾರರು/ಕೈಗಾರಿಕೆಗಳು:
ಈ ಮರದಿಂದ ಕೀಟನಾಶಕಗಳ ತಯಾರಿಕೆ, ಜೈವಿಕ ಇಂಧನ ಉತ್ಪಾದನೆ ಮತ್ತು ಗೊಬ್ಬರದ ತಯಾರಿಕಾ ಕೈಗಾರಿಕೆಗಳಲ್ಲಿ ಉಪಯೋಗಿಸಲಾಗುತ್ತಿದೆ. ಜೊತೆಗೆ ಪ್ಲೆöÊವುಡ್ ತಯಾರಿಕಾ ಘಟಕಗಳು ಸಹ ಬೇವಿನ ಮರವನ್ನು ಖರೀದಿ ಮಾಡುತ್ತಲಿವೆ.
ಕೊಯ್ಲು:
ಬೇವಿನ ಮರಗಳು ನಾಟಿ ಮಾಡಿದ ವರ್ಷಗಳಲ್ಲಿ ಹಣ್ಣನ್ನು ಬಿಡಲು ಪ್ರಾರಂಭಿಸುತ್ತವೆ ಮತ್ತು 10 ರಿಂದ 12 ವರ್ಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹಣ್ಣನ್ನು ಬಿಡಲಿದೆ.
ಆರ್ಥಿಕ ಲೆಕ್ಕಾಚಾರ:
ಈ ಮರದ ಬೀಜಗಳಿಂದ ಸುಮಾರು ರೂ.44,000/- ಪ್ರತಿ ವರ್ಷ/ಹೆಕ್ಟೇರ್‌ಗೆ ಮತ್ತು ಇದರಿಂದ ದೊರೆಯುವ ಎಣ್ಣೆಯಿಂದ ರೂ.2,80,000/- ದೊರೆಯಲಿದೆ. ಒಂದು ಹೆಕ್ಟೇರ್ ಪ್ರದೇಶದಿಂದ ದೊರೆಯುವ ಟಿಂಬರ್‌ನಿAದ ರೂ.9,00,000/- (ಒಂಭತ್ತು ಲಕ್ಷ) ಹಣ ದೊರೆಯಲಿದೆ.