ಕೃಷಿಅರಣ್ಯ ರೈತರ ಮತ್ತು ತಂತ್ರಜ್ಞರ ಸಂಸ್ಥೆ
Menu
IAFT – INSTITUTION OF AGROFORESTRY FARMERS AND TECHNOLOGISTS
ವೈಜ್ಞಾನಿಕ ಹೆಸರು: ಸಂಟಾಲಮ್ ಆಲ್ಬಮ್
ಆಂಗ್ಲ ಭಾಷೆ: ಸ್ಯಾಂಡಲ್ ವುಡ್
ಕನ್ನಡದಲ್ಲಿ: ಶ್ರೀಗಂಧ / ಗಂಧದ ಮರ
ಕುಟುಂಬ: ಸಂಟಾಲೇಸಿ
ಬೀಜಗಳ ಸಂಗ್ರಹ:
ಶ್ರೀಗಂಧದ ಹಣ್ಣುಗಳನ್ನು ಮರಗಳಿಂದ ನೇರವಾಗಿ ಸಂಗ್ರಹಿಸುವುದು ಅಥವಾ ಅವು ಭೂಮಿಯ ಮೇಲೆ ಬಿದ್ದ ತಕ್ಷಣವೇ ಏಪ್ರಿಲ್-ಮೇ ಮತ್ತು ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಸಂಗ್ರಹಿಸಲಾಗುವುದು. ಹಣ್ಣುಗಳನ್ನು ನೀರಿನಲ್ಲಿ ನೆನೆಸಿ ಮೇಲ್ಭಾಗದ ಹಣ್ಣಿನ ಪಲ್ಪ್‍ನ್ನು ಉಜ್ಜಿ ತೆಗೆಯಲಾಗುವುದು. ನಂತರ ಹಸಿ ಬೀಜಗಳನ್ನು ನೆರಳಿನಲ್ಲಿ ಒಣಗಿಸಿ ಒಣಗಿದ ಬೀಜಗಳನ್ನು ಪಾಲಿಥೀನ್ / ಗೋಧಿ ಚೀಲದಲ್ಲಿ ಶೇಖರಿಸಿಡಲಾಗುವುದು.
ಬೀಜ ಸಂಸ್ಕರಣೆ ಮತ್ತು ಬೀಜೋಪಚಾರ:
ಸುಮಾರು 6000 ಬೀಜಗಳು 1 ಕೆ.ಜಿ. ನಲ್ಲಿ ಇರುತ್ತವೆ. ಹೊಸ ಬೀಜಗಳು ಮೊಳಕೆಯೊಡೆಯಲು 4 ರಿಂದ 12 ವಾರಗಳು ಸುಪ್ತಾವಸ್ತೆ ಅವಧಿಯಿಂದ ಹೊರಬಂದು ಮೊಳಕೆಯೊಡೆಯುತ್ತವೆ. ಶೇ.80 ರಷ್ಟ್ಉ ಬೀಜಗಳು 9 ತಿಂಗಳ ತನಕ ಮೊಳಕೆಯೊಡೆಯುವ ಶಕ್ತಿಯನ್ನು ಹೊಂದಿರುತ್ತವೆ. ಪ್ರಯೋಗಾಲಯಗಳಲ್ಲಿ ಶೇ.80 ರಷ್ಟು ಹಾಗೂ ಕ್ಷೇತ್ರಗಳಲ್ಲಿ ಶೇ.60 ರಷ್ಟು ಮೊಳಕೆಯ ಪ್ರಮಾಣವನ್ನು ನೋಡಲಾಗಿದೆ. ಮೊಳಕೆಯೊಡೆಯುವುದನ್ನು ತ್ವರಿತಗೊಳಿಸಲು ಬೀಜಗಳನ್ನು 0.5 ಜಿಬ್ಬರಲಿಕ್ ಆಸಿಡ್ ದ್ರಾವಣದಲ್ಲಿ ರಾತ್ರಿಯಿಡೀ ನೆನೆಸಿ ಮರುದಿನ ಬೀಜಗಳನ್ನು ಊರಬೇಕಾಗುತ್ತದೆ. ಇದರಿಂದ ಉತ್ತಮವಾದ ಮೊಳಕೆಯೊಡೆಯುವ ಪ್ರಮಾಣವನ್ನು ನೋಡಬಹುದು. ಬೀಜಗಳನ್ನು ಸಗಣಿಯ ನೀರಿನಲ್ಲಿ ನೆನೆಸುವುದರಿಂದ ಮೊಳಕೆಯೊಡೆಯುವ ಪ್ರಮಾಣ ಹೆಚ್ಚಿಸಲು ಸಾಧ್ಯವಿರುವುದಿಲ್ಲ.
ಸಸ್ಯಕ್ಷೇತ್ರ:
ಮೊಳಕೆಯೊಡೆಯುವ ಪ್ರಮಾಣವು ಒಂದು ವರ್ಷದ ಒಳಗೆ ಶೇ.25 ರಿಂದ 40 ಇರುತ್ತದೆ. 28 ತಿಂಗಳುಗಳ ನಂತರ ಕೇವಲ ಶೇ.6 ರಷ್ಟು ಬೀಜಗಳು ಮಾತ್ರ ಮೊಳಕೆ ಪ್ರಮಾಣವನ್ನು ನೋಡಲಾಗಿದೆ. ಬೀಜದ ಹೊರಗಿನ ಸಿಪ್ಪೆಯನ್ನು ತೆಗೆಯುವುದರಿಂದ ಮೊಳಕೆಯೊಡೆಯುವ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ. ಬೀಜಗಳನ್ನು ಇಲಿಗಳು ತಿನ್ನುವುದರಿಂದ ಬೀಜಗಳನ್ನು ಕೆಂಪು ಲೆಡ್ ದ್ರಾವಣದಿಂದ / ಅಕೋರಸ್ ಪೇಸ್ಟ್ ಅನ್ನು ಬೀಜಗಳಿಗೆ ಸವರುವುದು ಉತ್ತಮ. ಮೊಳಕೆಯೊಡೆಯಲು ಬೀಜಗಳನ್ನು ಬಿತ್ತಿದ ನಂತರ 1 ರಿಂದ 3 ತಿಂಗಳು ಅವಧಿ ಬೇಕಾಗುತ್ತದೆ.
ಎತ್ತರದ ಮಡಿಗಳನ್ನು ಕೆಂಪು ಮಣ್ಣು ಹಾಗೂ ಮರಳನ್ನು 3:1 ಪ್ರಮಾಣದಲ್ಲಿ ಮಾಡಿ ಅದಕ್ಕೆ ಸರಿಯಾಗಿ ನೆಮಟಿಸೈಡ್ (ಎಕಾಲಕ್ಸ್ / ಥಿಮೆಟ್) ನ್ನು 10 ಮೀ X 1 ಮೀ ಗೆ 500 ಗ್ರಾಂ. ನಷ್ಟು ಒಂದು ಮಡಿಗೆ, ಒಂದು ಮಡಿಗೆ 2.5 ಕೆ.ಜಿ. ಬೀಜಗಳನ್ನು ಸಮಾನವಾಗಿ ಹರಡಿ ಅವುಗಳನ್ನು ಒಣ ಹುಲ್ಲಿನಿಂದ ಮುಚ್ಚಬೇಕು ಹಾಗೂ ಅವುಗಳು ಮೊಳಕೆಯೊಡೆದ ನಂತರ ನಿಧಾನವಾಗಿ ಹುಲ್ಲನ್ನು ತೆಗೆಯಬೇಕು. ಶ್ರೀಗಂಧದ ಸಸಿಗಳು ವೈರಾಣುಗಳ ಕಾಯಿಲೆಗೆ ಬಹುಬೇಗ ತುತ್ತಾಗುವುದರಿಂದ ಫಂಗಸ್ / ನೆಮಟೋಡ್ ರೋಗಕ್ಕೆ ತುತ್ತಾಗುತ್ತದೆ. ಈ ರೋಗದ ಲಕ್ಷಣಗಳು: ಎಲೆಗಳು ಒಣಗುವುದು, ನಂತರ ಬಿಳಿಚಿಕೊಳ್ಳುವುದು ಹಾಗೂ ಬೇರುಗಳು ಕೊಳೆಯುತ್ತವೆ. ಇದರಿಂದಾಗಿ ಸಸಿಗಳು ಸಾಯುವ ಪ್ರಮಾಣವು ಹೆಚ್ಚುತ್ತದೆ. ಇದನ್ನು ಸಮರ್ಪಕವಾಗಿ ನಿಯಂತ್ರಿಸಲು ನೆಮಟಿಸೈಡ್ (ಎಕಾಲಕ್ಸ್), ಫಂಗಿಸೈಡ್ (ಡೈಥೇನ್) ಅನ್ನು ಸಿಂಪಡಿಸಬೇಕು. ಈ ಮಡಿಗಳನ್ನು ಫಂಗಿಸೈಡ್ 0.25% ದ್ರಾವಣವನ್ನು 15 ದಿವಸಗಳಿಗೊಮ್ಮೆ ಸಿಂಪಡಿಸುವುದರಿಂದ ಫಂಗಸ್ ನಿಂದ ಬರುವ ರೋಗವನ್ನು ತಡೆಯಬಹುದು. ಹಾಗೂ ಫಂಗಸ್ ನಿಯಂತ್ರಿಸಲು 0.02% ಎಕಾಲಕ್ಸ್ ದ್ರಾವಣವನ್ನು ತಿಂಗಳಿಗೊಮ್ಮೆ ಹೊಡೆಯುವುದರಿಂದ ನೆಮಟೋಡ್ ನಿಂದ ಉಂಟಾಗುವ ಸಮಸ್ಯೆ ಪರಿಹರಿಸಬಹುದು.
ಮಡಿಗಳಲ್ಲಿ ಸಸಿಗಳು 4 ರಿಂದ 6 ಎಲೆಗಳು ಬಂದ ನಂತರ ಅವುಗಳನ್ನು ಪಾಲೀಬ್ಯಾಗ್ ಗಳಲ್ಲಿ ತೊಗರಿ ಬೀಜಗಳ ಜೊತೆಯಲ್ಲಿ ನಾಟಿ ಮಾಡಬೇಕು. ತೊಗರಿಯು ಪ್ರಾಥಮಿಕ ಅತಿಥೇಯ ಸಸ್ಯವಾಗುವುದರಿಂದ ಶ್ರೀಗಂಧದ ಬೆಳವಣಿಗೆಯು ಉತ್ತಮವಾಗುತ್ತದೆ. ಮಡಿಗಳಿಂದ ಸಸಿಗಳನ್ನು ಬೇರುಗಳು ಹರಿಯದಂತೆ ನಿಧಾನವಾಗಿ ತೆಗೆದು ಬೇರುಗಳು ಒಣಗದಂತೆ ನೋಡಿಕೊಳ್ಳಬೇಕು. ಒಂದು ವಾರ ಸಮಯ ನಾಟಿ ಮಾಡಿರುವ ಸಸಿಗಳಿಗೆ ನೆರಳನ್ನು ಒದಗಿಸಬೇಕು. ನೀರನ್ನು ದಿನಕ್ಕೊಮ್ಮೆ ಸಿಂಪರಿಸಬೇಕು. ಹೆಚ್ಚಿಗೆ ನೀರು ಹಾಕಬಾರದು. ಅತಿಥೇಯ ಸಸ್ಯವನ್ನು ಆಗಿಂದಾಗ್ಯೆ ಪ್ರೂನಿಂಗ್ ಮಾಡುತ್ತಿರಬೇಕು. ಏಕೆಂದರೆ ಅವುಗಳು ಶ್ರೀಗಂಧದ ಸಸಿಗಳಿಗಿಂತ ಹೆಚ್ಚಿನ ಎತ್ತರಕ್ಕೆ ಹೋಗದಂತೆ ನೋಡಿಕೊಳ್ಳಬೇಕು. ಪಾಲೀಬ್ಯಾಗ್ ಗಳನ್ನು 2:1:1 (ಮರಳು : ಕೆಂಪು ಮಣ್ಣು : ಕೊಟ್ಟಿಗೆ ಗೊಬ್ಬರ) 30 X 14 ಸೆಂ.ಮೀ. ಸೈಜಿನ ಉಪಯೋಗಿಸುವುದು ಸೂಕ್ತ. ನೆಮಟೋಡ್ ಸಮಸ್ಯೆಯನ್ನು ತಡೆಗಟ್ಟಲು ಎಕಾಲಕ್ಸ್ ಅನ್ನು ಪ್ರತಿ ಬ್ಯಾಗ್ ಗೆ 2 ಗ್ರಾಂ.ನಂತೆ ಅಥವಾ 1 ಘನ. ಮೀ ಗೆ 200 ಗ್ರಾಂ. ನಂತೆ ಪಾಲೀಬ್ಯಾಗ್ ಗಳಲ್ಲಿ ಇದರ ಮಿಶ್ರಣವನ್ನು ಸೇರಿಸಿ ತುಂಬಿಸಬೇಕು. ಪಾಲೀಥೀನ್ ಬ್ಯಾಗ್ ಗಳನ್ನು ಎರಡು ತಿಂಗಳಿಗೊಮ್ಮೆ ಬದಲಾಯಿಸುವುದರಿಂದ ಬೇರು ಭೂಮಿಯಲ್ಲಿ ಹೋಗುವುದನ್ನು ತಡೆಗಟ್ಟಲು ಸಾಧ್ಯ. ಸಸಿಗಳನ್ನು ಮೂರು ತಿಂಗಳಿಗೊಮ್ಮೆ ಗ್ರೇಡಿಂಗ್ ಮಾಡುವ ನಿಟ್ಟಿನಲ್ಲಿ ಕಳೆಗಳನ್ನು ಆಗಿಂದಾಗ್ಯೆ ತೆಗೆಯುವುದು ಸೂಕ್ತ.
ನೆಡುತೋಪು ನಿರ್ವಹಣೆ:
ಶ್ರೀಗಂಧ ಬೆಳೆಯುವ ಪ್ರದೇಶಗಳು 625 ಮಿ.ಮೀ. ನಿಂದ 1625 ಮಿ.ಮೀ. ವರೆಗಿನ ಮಳೆ ಬೀಳುವ ಪ್ರಮಾಣ ಹಾಗೂ ಉಷ್ಣಾಂಶ ಶೇ.190 ಯಿಂದ ಶೇ.29.50 ಸೆಲ್ಸಿಯಸ್ ಅತ್ಯುತ್ತಮ.
ಮಣ್ಣು:
ಶ್ರೀಗಂಧದ ಸಸಿಗಳು ಕೆಂಪು ಮಿಶ್ರಿತ ಕಲ್ಲು ಇರುವ ಮಣ್ಣಿನಲ್ಲಿ ಹಾಗೂ ಭೂಮಿಯ ಕೆಳಭಾಗದಲ್ಲಿ ಬಂಡೆಗಳಿರುವೆಡೆ ಉತ್ತಮವಾಗಿ ಬೆಳೆಯುತ್ತವೆ. ಇವುಗಳು ಬಂಡೆಗಳಿರುವೆಡೆ ಅಥವಾ ಕೆಂಪು ಗ್ರಾವೆಲಿ ಮಣ್ಣು ಕಲ್ಲು ಮಿಶ್ರಿತ ಭೂಮಿಯಲ್ಲಿಯೂ ಸಹ ಬೆಳೆಯುವುದು. ಈ ಸಸಿಗಳು ಮಣ್ಣಿನ ಆಳವನ್ನು ಅವಲಂಭಿಸಿರುವುದಿಲ್ಲ. ಮೆಕ್ಕಲು ಮಣ್ಣು ಪ್ರದೇಶ ಅಂದರೆ ನದಿಗಳ / ಝರಿಗಳ / ಹೊಳೆಗಳ ದಂಡೆಯಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಉತ್ತಮವಾದ ಮಣ್ಣಿನಲ್ಲಿ ಬೆಳೆದ ಮರಗಳಲ್ಲಿ ಸುಗಂಧಭರಿತ ಮರದ ಪ್ರಮಾಣ ಹೆಚ್ಚಿರುತ್ತದೆ. ಆದರೆ ಉತ್ತಮವಾಗಿ ನೀರು ಬಸಿಯುವ ಭೂಮಿಯನ್ನು ಬಯಸುತ್ತವೆ. ಅಂದರೆ ನೀರು ನಿಲ್ಲುವ ಸ್ಥಳಗಳಲ್ಲಿ ಬೆಳವಣಿಗೆ ಕುಂಠಿತವಾಗುತ್ತದೆ. ಈ ಗಿಡಗಳು ಉಪ್ಪಿನಂಶ ಹೆಚ್ಚಿರುವ ಮತ್ತು ಕ್ಷಾರೀಯ ಭೂಮಿಯಲ್ಲಿ ಹಾಗೂ ಕಪ್ಪು ಮಣ್ಣಿನ ಭೂಮಿಯಲ್ಲಿ ಸಾಮಾನ್ಯವಾಗಿ ಬೆಳೆಯುವುದಿಲ್ಲ.
ಕೂಳೆ: ಚಿಕ್ಕ ಸಸಿಗಳು ಉತ್ತಮವಾದ ಕೂಳೆ ಬೆಳೆಗಳಿಂದಲೂ ಬೆಳೆಯಬಹುದು. ಆದರೆ ಹಳೆಯ ಮರಗಳಿಂದ ಕೂಳೆ ಬೆಳೆಯನ್ನು ನಿರೀಕ್ಷಿಸಲಾಗುವುದಿಲ್ಲ ಹಾಗೂ ನೀರಿನ ಹರಿವಿನ ಪಕ್ಕದಲ್ಲಿ ಕೆಲವೊಮ್ಮೆ ಕೂಳೆ ಬೆಳೆಯನ್ನು ನೋಡಬಹುದು.
ಬೇರಿನಿಂದ ಬರುವ ಬೆಳೆ: ಬೇರುಗಳಿಗೆ ಗಾಯವಾದಾಗ / ಬೇರುಗಳು ಹೊರಗಡೆ ಬಂದಾಗ ಅಂತಹವುಗಳಿಂದಲೂ ಸಹ ಬೇರಿನಿಂದ ಸಸಿಗಳು ಮರಗಳಾಗುತ್ತವೆ.
ಸಸಿಗಳು ಚಿಕ್ಕವಿದ್ದಾಗ ಅವುಗಳನ್ನು 1. ಉತ್ತಮವಾದ ಅತಿಥೇಯ ಸಸ್ಯಗಳೊಂದಿಗೆ ಬೆಳೆಯುವುದು ಸೂಕ್ತ. ಹಾಗೂ ಅವುಗಳು ಶ್ರೀಗಂಧದ ಗಿಡಗಳಿಗಿಂತ ಹೆಚ್ಚು ಬೆಳೆಯಲು ಬಿಡಬಾರದು.
ನಂತರದ ದಿವಸಗಳಲ್ಲಿ: 1. ಅತಿಥೇಯ ಸಸಿಗಳನ್ನು ಸರಿಯಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು. 2. ಬಳ್ಳಿಗಳನ್ನು ಕಟಾವು ಮಾಡಬೇಕು.
ಬರ: ಶ್ರೀಗಂಧದ ಸಸಿಗಳು ಸಾಮಾನ್ಯವಾದ ಬರವನ್ನು ತಡೆದುಕೊಳ‍್ಳುವ ಶಕ್ತಿ ಹೊಂದಿದೆ ಆದರೆ ದೀರ್ಘವಾದ ಬರಗಾಲದಲ್ಲಿ ಸಸಿಗಳು ಸಾಯಬಹುದು.
ಬೆಂಕಿ: ಬಹಳ ಬೇಗ ಬೆಂಕಿಗೆ ತುತ್ತಾಗುವುದರಿಂದ ಇವುಗಳನ್ನು ಬೆಂಕಿಯಿಂದ ರಕ್ಷಿಸತಕ್ಕುದು.
ಜಾನುವಾರುಗಳಿಂದ ರಕ್ಷಣೆ: ಜಾನುವಾರುಗಳಿಂದ ರಕ್ಷಣೆ ಒದಗಿಸಬೇಕಾಗಿದೆ. ಹಾಗೂ ತಳಭಾಗದಲ್ಲಿ ಹುಲ್ಲನ್ನು ನಿಯಂತ್ರಿಸಲು ಕುರಿ/ದನಗಳನ್ನು ಮೇಯಿಸಬಹುದು. ಇದರಿಂದ ಬೇಸಿಗೆಯಲ್ಲಿ ಬೆಂಕಿಯಿಂದ ರಕ್ಷಣೆ ಸಾಧ್ಯವಾಗುತ್ತದೆ.
ಶ್ರೀಗಂಧಕ್ಕೆ ಮುಖ್ಯ ಶತೃ ಎಂದರೆ ಮನುಷ್ಯ ಅದರಲ್ಲಿರುವ ಸುವಾಸನೆಯುಕ್ತ ಮರವೇ ಅದಕ್ಕೆ
ಶತೃವಾಗಿರುವುದರಿಂದ, ಸಾಮಾನ್ಯವಾಗಿ ಅಕ್ರಮವಾಗಿ ಕಡಿದುಕೊಂಡು ಹೋಗುವುದು ಸಾಮಾನ್ಯ.
ಮಾದರಿ ಅಂತರ:
2.5 ಮೀ X 2.5 ಮೀ
ಕೀಟಗಳು, ರೋಗಗಳು ಮತ್ತು ಅವುಗಳ ನಿರ್ವಹಣೆ:
ಶ್ರೀಗಂಧಕ್ಕೆ ಸಾಮಾನ್ಯವಾಗಿ ಅರಣ್ಯದಲ್ಲಿರುವ ಕೀಟಗಳೇ ರೋಗವನ್ನು ಹರಡುವ ಶತೃಗಳಾಗಿರುತ್ತವೆ.
ಸ್ಪೈಕ್ ರೋಗ: ಇದು ತುಂಬಾ ನಷ್ಟವನ್ನುಂಟು ಮಾಡಲಿದ್ದು, ಮರಗಳನ್ನು ಒಣಗಿಸುತ್ತದೆ. ಇದು ವೈರಲ್ ರೋಗವಾಗಿದ್ದು, ಅರಣ್ಯದ ಕೀಟಗಳಿಂದ ಒಂದು ಮರದಿಂದ ಇನ್ನೊಂದಕ್ಕೆ ಹರಡುತ್ತದೆ. ಇದು ಯಾವ ಕೀಟಗಳಿಂದ ಹರಡುತ್ತದೆನ್ನುವುದರ ಬಗ್ಗೆ ಸಂಶೋಧನೆಯು ಪ್ರಗತಿಯಲ್ಲಿದೆ.
ಕಟಾವಿನ ಅವಧಿ:
30 ರಿಂದ 35 ವರ್ಷ
ಇಳುವರಿ:
ಪ್ರತಿ ಎಕರೆಗೆ 500
ಉಪಯೋಗ / ಬಳಕೆ:
ಶ್ರೀಗಂಧವು ಊತವನ್ನು ಶಮನಗೊಳಿಸಲು ಅತ್ಯಮೂಲ್ಯವಾದ ಔಷಧಿಯಾಗಿರುತ್ತದೆ. ಇದನ್ನು ಮುಖ್ಯವಾಗಿ ಅಗರಬತ್ತಿ ಮತ್ತು ಸುವಾಸನೆಯುಕ್ತ ತೈಲಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಶ್ರೀಗಂಧದ ಎಣ್ಣೆಯನ್ನು ಒತ್ತಡವನ್ನು ನಿಯಂತ್ರಿಸಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಬಳಸುವರು.
ಶ್ರೀಗಂಧದ ಎಣ್ಣೆಯನ್ನು ಗಾಯಗಳನ್ನು ಗುಣಪಡಿಸಲು ಹಾಗೂ ಚರ್ಮಗಳ ಮೇಲಿನ ಗುಳ್ಳೆಗಳನ್ನು ನಿಯಂತ್ರಿಸಲು ಬಳಸುತ್ತಾರೆ.
ಶ್ರೀಗಂಧದ ಎಣ್ಣೆಯನ್ನು ಡೊಯೋಡರೆಂಡ್ ಆಗಿ, ಇದನ್ನು ಬೇರೆ ಎಣ‍್ಣೆಗಳಲ್ಲಿ ಮಿಶ್ರ ಮಾಡುವುದರಿಂದ ಬೇರೆ ಬೇರೆ ರೀತಿಯ ಸುವಾಸನೆ ಪಡೆಯಬಹುದು.
ಧಾರ್ಮಿಕ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಶ್ರೀಗಂಧದ ಎಣ್ಣೆಯು ಆಂಟಿಸೆಪ್ಟಿಕ್ ಮತ್ತು ಆಂಟಿ ಪ್ಲಾಸ್ಮೋಡಿಕ್ ಆಗಿಗೆ. ಶ್ರೀಗಂಧದ ಎಣ್ಣೆಯು ಜ್ಞಾಪನ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಾರುಕಟ್ಟೆ:
ಕರ್ನಾಟಕದಲ್ಲಿ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ (ಮೈಸೂರು ಸ್ಯಾಂಡಲ್ ಸೋಪ್) ಖರೀದಿಸುತ್ತದೆ.
ಕಟಾವು:
ಸಾಮಾನ್ಯವಾಗಿ 30 ವರ್ಷಗಳ ನಂತರ ಕಟಾವು ಮಾಡಲಾಗುವುದು. ಕಟಾವು ಮಾಡಿದ ನಂತರ ಹೊರಗಿನ ಬಿಳಿಮರವನ್ನು ತೆಗೆದು ಗಟ್ಟಿಯಾದ ಸುವಾಸನೆಯುಕ್ತ ಮರವನ್ನು ಮಿಲ್ ಗಳಲ್ಲಿ ಪೌಡರ್ ಮಾಡಲಾಗುವುದು. ಈ ಪೌಡರ್ ಅನ್ನು 2 ದಿವಸ ನೀರಿನಲ್ಲಿ ನೆನೆಸಿದ ನಂತರ ಡಿಸ್ಟಿಲೇಷನ್ / ಎಣ್ಣೆಯನ್ನು ಭಟ್ಟಿ ಇಳಿಸಲಾಗುವುದು. ಪುನಃ ಮತ್ತೊಮ್ಮೆ ಭಟ್ಟಿ ಇಳಸಿ ಸೋಸುವುದರಿಂದ ಉತ್ತಮವಾದ ಎಣ್ಣೆ ಪಡೆಯಬಹುದು.
ಆರ್ಥಿಕತೆ:
ಶ್ರೀಗಂಧವು ಇದರ ಸುವಾಸನೆಯುಕ್ತ ಗಟ್ಟಿಯಾದ ಮರಕ್ಕೆ ಹೆಸರುವಾಸಿಯಾಗಿದ್ದು, ಇದನ್ನು ಕೆತ್ತನೆ ಕೆಲಸಗಳಲ್ಲಿ, ಅಲಂಕಾರಿಕ ಕೆಲಸಗಳಲ್ಲಿ ಉಪಯೋಗಿಸುವರು. ಎಣ್ಣೆಯನ್ನು ಭಟ್ಟಿ ಇಳಿಸಿ ತೆಗೆದು ಅಗರಬತ್ತಿ ಹಾಗೂ ಸುವಾಸನೆಯುಕ್ತ ದ್ರಾವಣ ಮತ್ತು ಔಷಧಿಗಳಲ್ಲಿ ಬಳಸಲಾಗುವುದು. ಈ ಮರಕ್ಕೆ ಭಾರತದಲ್ಲಿ ಹೆಚ್ಚಿನ ಬೇಡಿಕೆ ಇದೆ. ಶ್ರೀಗಂಧದ ಸುವಾಸನೆಯುಕ್ತ ಮರಕ್ಕೆ ರೂ.6000/- ಒಂದು ಕೆ.ಜಿಗೆ. ಬೆಲೆ ಇರುತ್ತದೆ.