ಕೃಷಿಅರಣ್ಯ ರೈತರ ಮತ್ತು ತಂತ್ರಜ್ಞರ ಸಂಸ್ಥೆ
Menu
IAFT – INSTITUTION OF AGROFORESTRY FARMERS AND TECHNOLOGISTS
ಬೀಜ ಸಂಗ್ರಹ:
ಬೀಜಗಳನ್ನು ಮೇ ತಿಂಗಳ ಅಂತ್ಯದಿಂದ ಜೂನ ತಿಂಗಳ ಪೂರ್ವದಲ್ಲಿ ಸಂಗ್ರಹಿಸಬಹುದು. ಇವುಗಳನ್ನು ಬೇಗನೆ ಸಂಗ್ರಹಿಸಲು ಮರಗಳ ರೆಂಬೆಗಳನ್ನು ಬಡಿಯುವುದರಿಂದ ನೆಲದ ಮೇಲೆ ಬೀಳುವ ಬಲಿತಿರುವ ಕಾಯಿಗಳನ್ನು ಅಥವಾ ತೊಗಟೆಯೊಂದಿಗಿರುವ ಹಣ್ಣುಗಳನ್ನು ಸಂಗ್ರಹಿಸಲಾಗುವುದು.
ಬೀಜ ಪರಿಷ್ಕರಣೆ:
ಹೊಸ ಬೀಜಗಳನ್ನು ನರ್ಸರಿ ಮಡಿಗಳಲ್ಲಿ ಮಾರ್ಚ್ – ಏಪ್ರಿಲ್ ತಿಂಗಳಿನಲ್ಲಿ ಬಿತ್ತುವುದು ಸೂಕ್ತ. ಬೀಜಗಳನ್ನು ಶೇ.10ರ ಹಸುವಿನ ಗಂಜಲ ಅಥವಾ ಹಸುವಿನ ಸಗಣಿಯಿಂದ ಮಾಡಿದ ದ್ರಾವಣದಲ್ಲಿ (500 ಗ್ರಾಂ ಸಗಣಿಯನ್ನು 10 ಲೀಟರ್ ನೀರಿನೊಂದಿಗೆ ಬೆರೆಸಬೇಕು). 24 ಗಂಟೆಗಳ ಕಾಲ ಉಪಚರಿಸಬೇಕು.
ಸಸ್ಯದ ಸಂತಾನೋತ್ಪತ್ತಿ:
ಸಾಪ್ಟ್ ವುಡ್ ಕಸಿಯನ್ನು ಮಾರ್ಚ್ – ಏಪ್ರಿಲ್ ತಿಂಗಳಲ್ಲಿ ಏರ್ ಲೇಯರಿಂಗ್ಗೆ ರೆಂಬೆಗಳನ್ನು 4000 ಪಿ.ಪಿ.ಎಮ್.ನ ಐ.ಬಿ.ಎ. ದ್ರಾವಣದಿಂದ ಉಪಚರಿಸಬೇಕು.
ನೆಡುತೋಪು ನಿರ್ವಹಣೆ:
ಹುಣಸೆ ಮರಗಳನ್ನು ಎಲ್ಲಾ ವಿಧಧ ಮಣ್ಣಿನಲ್ಲೂ ಹಾಗೂ ಫಲವತ್ತತೆ ಕಡಿಮೆಯಿರುವ, ಮೇಲ್ಭಾಗದ ಮಣ್ಣಿಲ್ಲದ ಬರಡು ಭೂಮಿಯಲ್ಲಿ, ಕಲ್ಲುಗಳಿಂದ ಕೂಡಿದ ಭೂಮಿ, ಉಪ್ಪು ಮತ್ತು ಕ್ಷಾರೀಯ ಭೂಮಿಯಲ್ಲಿ ಬೆಳೆಯಬಹುದು. ಹೆಚ್ಚು ಇಳುವರಿಯನ್ನು ಕೆಂಪು ಮರಳು ಮಿಶ್ರಿತ, ಆಳವಿರುವ ಮತ್ತು ಚೆನ್ನಾಗಿ ನೀರು ಬಸಿಯುವ ಭೂಮಿಯಲ್ಲಿ ಪಡೆಯಬಹುದು. ಇದನ್ನು ಹೆಚ್ಚಿನ ಉಷ್ಣಾಂಶ ಹೊಂದಿರುವ ಅಂದರೆ 36 ರಿಂದ 45 ಡಿಗ್ರಿ ಸೆಲ್ಸಿಯಸ್ ಮತ್ತು ಅತೀ ಕಡಿಮೆ ಉಷ್ಣಾಂಶ ಹೊಂದಿರುವ ಅಂದರೆ 0-17.50 ಡಿಗ್ರಿ ಸೆಲ್ಸಿಯಸ್ ಮತ್ತು ಮಳೆ ಪ್ರಮಾಣ 750 ರಿಂದ 1900 ಮಿ.ಮೀ. ಹಾಗೂ ಸಮುದ್ರ ಮಟ್ಟದಿಂದ 1000 ಮೀಟರ್ ಎತ್ತರದವರೆಗೆ ಬೆಳೆಯಬಹುದು.
ನಾಟಿ ಮಾಡಲು ಜೂನ್ ನಿಂದ ಡಿಸೆಂಬರ್ ಸೂಕ್ತ ಸಮಯ. ಕಸಿ ಮಾಡಿದ ಗಿಡಗಳನ್ನು 1 ಮೀ X1 ಮೀ X 1 ಮೀ ಗುಂಡಿಗಳನ್ನು ಗೊಬ್ಬರ ಮತ್ತು ಮೇಲ್ಭಾಗದ ಮಣ್ಣಿನಿಂದ ಮುಚ್ಚಿ ಸಸಿಗಳನ್ನು ನೆಡಬೇಕು. ಈ ಗುಂಡಿಗಳಿಗೆ 50 ಗ್ರಾಂ ಮಿತೈಲ್ ಪ್ರಾರಾತಿಯಾನ್ ಶೇ.1.3ರ ಡಸ್ಟ್ ಮಾಡಬೇಕು. ನಾಟಿ ಮಾಡಿದ ತಕ್ಷಣವೇ ಗುಂಡಿಗಳಲ್ಲಿಯ ಗಿಡಗಳಿಗೆ ಆಧಾರವಾಗಿ ಗಟ್ಟಿಯಾದ ಕೋಲನ್ನು ಹಾಕಬೇಕು. ಗಿಡಗಳಿಗೆ ವಾರಕ್ಕೆ ಒಮ್ಮೆ ನಿರಂತರವಾಗಿ ನೀರು ಕೊಡಬೇಕು.
ಗೊಬ್ಬರ ಹಾಕುವುದು:
200:150:250 ಗ್ರಾಂ. ಎನ್.ಪಿ.ಕೆ. ಯನ್ನು ಪ್ರತಿ ಗಿಡಗಳಿಗೆ 25 ಕೆ.ಜಿ. ಕೊಟ್ಟಿಗೆ ಗೊಬ್ಬರ ಮತ್ತು 2 ಕೆ.ಜಿ. ಬೇವಿನ ಹಿಂಡಿಯೊಂದಿಗೆ ನೀಡಬೇಕು. ರೂಟ್ ಸ್ಟೇಕ್ ನಿಂದ ಬರುವ ಚಿಗುರುಗಳನ್ನು ನಿರಂತರವಾಗಿ ತೆಗೆಯಬೇಕು. ಜೊತೆಗೆ ಒಣಗಿದ ಮತ್ತು ರೋಗಗ್ರಸ್ತ ಗಿಡಗಳ ಭಾಗಗಳನ್ನು ತೆಗೆದು ಹಾಕಬೇಕು.
ಹುಣಸೆ ಮರವು ನಿಧಾನವಾಗಿ ಬೆಳೆಯುವುದು. ಪ್ರತಿ ವರ್ಷ 60 ಸೆಂ.ಮೀ. ಎತ್ತರಕ್ಕೆ ಬೆಳೆಯುತ್ತದೆ. ಹುಣಸೆ ಮರವು ಒಣ ಭೂಮಿಯಲ್ಲಿ ಬೆಳೆಯಬಹುದಾದ ಮರದ ಬೆಳೆ ಆದುದರಿಂದ ಸಾಮಾನ್ಯವಾಗಿ ನೀರಾವರಿ ಕೊಡಲಾಗುವುದಿಲ್ಲ. ಆದರೆ ಪ್ರಾರಂಭಿಕ ವರ್ಷಗಳಲ್ಲಿ ನೀರುಣಿಸಬೇಕು. ವಿಶೇಷವಾಗಿ ಒಣ ಹವೆ ಇದ್ದಾಗ ಮತ್ತು ಬೇಸಿಗೆ ಸಮಯದಲ್ಲಿ. ಒಂದು ವರ್ಷದ ಗಿಡಗಳಿಗೆ ಸುಮಾರು 10 ಲೀಟರ್ ನೀರನ್ನು 6 ರಿಂದ 8 ದಿವಸಗಳ ಅಂತರದಲ್ಲಿ ಬೇಸಿಗೆ ಕಾಲದಲ್ಲಿ ಒದಗಿಸಬೇಕು. ಎರಡು ಮತ್ತು ಮೂರನೇ ವರ್ಷದಲ್ಲಿ ಹೆಚ್ಚುವರಿ ನೀರು ಕೊಡಬೇಕು. ಮೂರು ವರ್ಷಗಳ ನಂತರ ನೀರು ಕೊಡುವ ಅವಶ್ಯಕತೆಯಿಲ್ಲ. ಒಂದು ವೇಳೆ ನಂತರದ ವರ್ಷಗಳಲ್ಲಿ ನೀರು ಒದಗಿಸುವಲ್ಲಿ ಬೆಳವಣಿಗೆಯು ವೇಗವಾಗಿ ಮತ್ತು ಉತ್ತಮವಾಗಿರುತ್ತದೆ.
ಅಂತರ ಮತ್ತು ಮಾದರಿ:
8 -10 ಮೀ X 8 -10 ಮೀ ಅಂತರ ಸೂಕ್ತವಾಗಿದೆ.
ಕೀಟ, ರೋಗ ಮತ್ತು ನೆಡುತೋಪು ನಿರ್ವಹಣೆ:
ಎಲೆ ತಿನ್ನುವ ಹುಳುಗಳು, ಇವುಗಳನ್ನು ಕ್ವಿನಾಲ್ ಫಾಸ್ 25 ಇಸಿ 2 ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಅಥವಾ ಮಾನೋಕ್ರೊಟೋಪಾಸ್-36 ವೆಟ್ಟಬಲ್ ಪೌಡರ್ 2 ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಮಿಶ್ರ ಮಾಡಿ ಸಿಂಪರಿಸಬೇಕು.
ಶೇಖರಿಸಿಟ್ಟ ಸ್ಥಳದಲ್ಲಿ – ಸ್ಟೋರೇಜ್ ಬೀಟಲ್ – ಇದನ್ನು ಕ್ವಿನಾಲ್ ಫಾಸ್ 25 ಇಸಿ 1 ಮಿ.ಲೀ.ನ್ನು ಪ್ರತಿ ಲೀಟರ್ ನಲ್ಲಿ ಮಿಶ್ರ ಮಾಡಿ ಹಣ್ಣಾಗುವ ಸಮಯದಲ್ಲಿ ಸಿಂಪರಿಸಬೇಕು.
ರೋಗಗಳು:
ಪಭಡರೀ ಮಿಲ್ಡ್ಯೂ – ಇದನ್ನು ಡೈನೋಕ್ಯಾಪ್ 1 ಗ್ರಾಂ ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಿಸಬೇಕು.
ನೆಡುತೋಪಿನ ಅವಧಿ:
ಮರಗಳು 200 ವರ್ಷಗಳವರೆಗೂ ಇಳುವರಿ ನೀಡಲಿವೆ.
ಇಳುವರಿ:
ಸರಾಸರಿ 25 ಟನ್ ತೊಗಟೆಯಿರುವ ಹಣ್ಣುಗಳನ್ನು ಪ್ರತಿ ಹೆಕ್ಟೇರ್ ನಿಂದ ನಿರೀಕ್ಷಿಸಬಹುದು. ಕಸಿ ಮಾಡಿದಂತಹ / ಬಡ್ ಮಾಡಿರುವ ನೆಡುತೋಪುಗಳಿಂದ 100 ಕೆ.ಜಿ. ಹಣ್ಣುಗಳನ್ನು ಪ್ರತಿ ವರ್ಷ ಪಡೆಯಬಹುದು.
ಉಪಯೋಗ:
ಹಣ್ಣನ್ನು ಸಾಂಬಾರ ಪದಾರ್ಥವಾಗಿ ಬಳಸಲಾಗುವುದು. ಬಲಿತ ಬೀಜಗಳನ್ನು ಒಣಗಿಸಿ, ನೀರಿನಲ್ಲಿ ಬೇಯಿಸಿ ಅಥವಾ ಹುರಿದು ತಿನ್ನಬಹುದು. ಇವುಗಳನ್ನು ಸಣ್ಣಗೆ ಪುಡಿ ಮಾಡಿ ಅಥವಾ ರೋಸ್ಟ್ ಮಾಡಿ ಕಾಫಿಗೆ ಪರ್ಯಾಯವಾಗಿ ಬಳಸಲಾಗುವುದು. ಎಳೆಯ ಎಲೆ (ಚಿಗುರು) ಮತ್ತು ಹೂವನ್ನು ಬೇಯಿಸದೆ ತಿನ್ನಬಹುದು ಅಥವಾ ಬೇಯಿಸಿ ತಿನ್ನಬಹುದು.
ಹುಣಸೆ ಹಣ್ಣು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಅಲ್ಸರ್, ಕಜ್ಜಿ, ಹುಣ್ಣು, ಸಣ್ಣ ಗುಳ್ಳೆಗಳು, ಅಸ್ತಮಾ, ಸಂಧಿವಾತ, ಗಾಯಗಳಲ್ಲಿ, ಗಂಟಲು ಬೇನೆಗೆ, ಕೆಮ್ಮು, ಜ್ವರ, ಕರುಳಿನಲ್ಲಿ ಹುಳುಗಳ ನಿವಾರಣೆ, ಕಣ್ಣಿನ ಬೇನೆ, ನೋವು, ಮಿಸಲ್ಸ್, ಮೂತ್ರ ರೋಗ, ಸ್ಕರ್ವಿ, ಬೇದಿ ಮತ್ತು ಆಮಶಂಕೆ ರೋಗಗಳ ಉಪಶಮನಕ್ಕೆ ಬಳಸಲಾಗುವುದು. ಬೀಜಗಳಿಂದ ಪೆಕ್ಟಿನ್ ತಯಾರಿಸಿ ಜವಳಿ ಉದ್ಯಮದಲ್ಲಿ ಬಳಸಲಾಗುತ್ತದೆ. ಬೀಜಗಳನ್ನು ಸಣ್ಣಗೆ ಪುಡಿ ಮಾಡಿ, ಬೇಯಿಸಿ ಮತ್ತು ಅಂಟಿನೊಂದಿಗೆ ಮಿಶ್ರಣ ಮಾಡಿ ಗಟ್ಟಿಯಾದ ಸಿಮೆಂಟ್ ಮಾದರಿಯಲ್ಲಿ ಬಳಸಲಾಗುವುದು.
ಬೀಜಗಳಿಂದ ತೆಗೆದ ಎಣ್ಣೆಯನ್ನು ಬಣ್ಣ ಮತ್ತು ವಾರ್ನಿಶ್ ಗಳಲ್ಲಿ ಬಳಸಲಾಗುವುದು. ಇದನ್ನು ವಿಗ್ರಹಗಳ ಪಾಲಿಶ್ ಮಾಡಲು, ಹಣ್ಣಿನ ಪಲ್ಪ್ ನ್ನು ಸಮುದ್ರದ ಉಪ್ಪಿನೊಂದಿಗೆ ಮಿಶ್ರ ಮಾಡಿ ಬೆಳ್ಳಿ, ತಾಮ್ರ ಮತ್ತು ಬ್ರಾಸ್ ವಿಗ್ರಹಗಳ ಪಾಲಿಶ್ ಮಾಡಲಾಗುವುದು. ಮರದ ಎಲೆಗಳಿಂದ ಕೆಂಪು ಬಣ್ಣದ ಡೈ ತಯಾರಿಸಲಾಗುವುದು.
ಮರವನ್ನು ಸಾಮಾನ್ಯವಾಗಿ ಬಡಗಿತನಕ್ಕೆ, ಸಕ್ಕರೆ ಕಾರ್ಖಾನೆಗಳಲ್ಲಿ, ಚಕ್ರದ ಹಬ್, ಮರದ ಪಾತ್ರೆಗಳ ತಯಾರಿಕೆಯಲ್ಲಿ ಬಳಸಲಾಗುವುದು. ಬಲಿತ ಮರಗಳಿಂದ ಅತ್ಯುತ್ತಮ ವಿಗ್ರಹಗಳನ್ನು ತಯಾರಿಸಬಹುದು. ಮರವನ್ನು ಅತ್ಯುತ್ತಮ ಉರುವಲಾಗಿ ಮತ್ತು ಕಲ್ಲಿದ್ದಲು ತಯಾರಿಕೆಯಲ್ಲಿ ಬಳಸಲಾಗುವುದು.
ಮಾರಾಟ/ಕೈಗಾರಿಕೆಗಳು:
ಸಾಮಾನ್ಯ ಮಾರುಕಟ್ಟೆಯಲ್ಲಿ ಹಣ್ಣನ್ನು ಮಾರಾಟ ಮಾಡಲಾಗುವುದು ಮತ್ತು ಮರದ ಕಾರ್ಖಾನೆಗಳು ಕೊಂಡುಕೊಳ್ಳುವರು.
ಕೊಯ್ಲು:
ಬೀಜಗಳಿಂದ ಬೆಳೆಸಿದ ಮರಗಳು 8 ರಿಂದ 12 ವರ್ಷಗಳಲ್ಲಿ ಫಲ ಬಿಡಲು ಪ್ರಾರಂಬಿಸುತ್ತವೆ. ಕಸಿ ಮಾಡಿದ ಮತ್ತು ಬುಡಗಳಿಂದ ಬೆಳೆಸಿದ ಮರಗಳು 4 ರಿಂದ 5 ವರ್ಷದಲ್ಲಿ ಫಲ ಬಿಡುತ್ತವೆ. ಸಾಮಾನ್ಯವಾಗಿ ಜನವರಿ ಯಿಂದ ಏಪ್ರಿಲ್ ವರೆಗೆ ಕೊಯ್ಲು ಮಾಡಲಾಗುವುದು.
ಆರ್ಥಿಕತೆ:
ರೂ.5.5 ಲಕ್ಷ ಪ್ರತಿ ಎಕರೆಯಿಂದ ಪಡೆಯಬಹುದು.
ಪ್ರಸ್ತು ಮಾರುಕಟ್ಟೆ ದರ:
ರೂ.55/ಕೆ.ಜಿ.ಗೆ. ರೂ.55000 ಪ್ರತಿ ಟನ್ಗೆ.